ಏಳುಬೆಂಚಿ ಗ್ರಾಮದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

ಕುಡತಿನಿ ಜ 14  :ಸಮೀಪದ ಏಳುಬೆಂಚಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಯದರ್ಶಿ ನೈನಗೌಡರವರ ಅಧ್ಯಕ್ಷತೆಯಲ್ಲಿ ಸ್ವಾಮಿ ವಿವೇಕಾನಂದರ 159 ನೆಯ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ರೀತಿಯ ಚಟುವಟಿಕೆಗಳನ್ನ, ಗೀತ ಗಾಯನ,ವ್ಯಕ್ತಿತ್ವ ಪರಿಚಯ,ನೀತಿಕತೆ ಹಾಗೂ ಸ್ವಾಮಿ ವಿವೇಕಾನಂದರ ಜೀವನ ಪರಿಚಯ ಕುರಿತಾದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು, ಸ್ಪರ್ದೆಯಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು, ಸ್ವಾಮಿ ವಿವೇಕಾನಂದರ ಜೀವನ,ನ ಆದರ್ಶ ಹಾಗೂ ಅವರು ಭಾರತದ ಸನಾತನ ಹಿಂದೂ ಧರ್ಮವನ್ನು ವಿಶ್ವ ಗುರುವಾಗಿ ಪರಿಚಯಿಸಿದ ಶಿಕ್ಯಾಗೋ ಸಮ್ಮೇಳನದ ಸುಸಂದರ್ಭವನ್ನು ಕುರಿತು ವಿಧ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ಇದೆ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಎರಿಸ್ವಾಮಿ, ಸುನೀಲ್ ಪಾಟೀಲ್ ಹಾಗೂ ಬಸಮ್ಮ ಮಕ್ಕಳೊಂದಿಗೆ ಕಾರ್ಯಕ್ರಮ ಕುರಿತು ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ, ಎರಿಸ್ವಾಮಿ ಸ್ವಾಮಿ ಸೇರಿದಂತೆ ಸಹ ಶಿಕ್ಷಕರಾದ ಸುನೀಲ್ ಪಾಟೀಲ್, ಬಸಮ್ಮ,ವಿನೂತ, ಪರಿಮಳ, ಶಿವಲೀಲಾ, ತೇಜಸ್ವಿನಿ ಹಾಗೂ ಗಿರಿಯಮ್ಮ ಅಜ್ಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು 8ನೆ ತರಗತಿಯ ವಿದ್ಯಾರ್ಥಿನಿ ರಾಧಿಕಾ ನಿರೂಪಿಸಿ ವಂದಿಸಿದಳು.