ಏಳುಬೆಂಚಿ ಗ್ರಾಮದಲ್ಲಿ ಅಧಿಕಾರಿಗಳ ಗ್ರಾಮವಾಸ್ತವ್ಯಸಭೆ
ಕುಡಿಯುವನೀರು, ರಸ್ತೆ, ಚರಂಡಿಸ್ವಚ್ಚತೆಗೆ ಹೆಚ್ಚಿನ ಮಹತ್ವನೀಡಲು ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚನೆ


ಸಂಜೆವಾಣಿ ವಾರ್ತೆ
ಕುರುಗೋಡು.ಜು. 17 ಸಮೀಪದ ಏಳುಬೆಂಚಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವನೀರು, ಚರಂಡಿಸ್ವಚ್ಚತೆ, ಸಿಸಿರಸ್ತೆ, ವಿದ್ಯುತ್‍ದೀಪ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಅಧಿಕಾರಿಗಳ ಜನರಿಗೆ ತಲುಪುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಕುರುಗೋಡು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಕುರುಗೋಡು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯಕಡೆ ಸಾರ್ವಜನಿಕರ ಅಹವಾಲುಸ್ವೀಕಾರ ಮತ್ತು ಪರಿಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯಲ್ಲಿ ವೇಣಿವೀರಾಪುರ ಗ್ರಾಮದ ಗ್ರಾಪಂ. ಸದಸ್ಯ ಮಲ್ಲಿಕಾರ್ಜುನ,
ಸಭೆಯ ಮದ್ಯದಲ್ಲಿ ಕಿರಿಯ ಇಂಜಿನಿಯರ್ ಸುರೇಶ ಮಾತನಾಡಿ, ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಇಂಜಿನಿಯರ್ ಸುರೇಶ ಮಾತನಾಡಿ, ಏಳುಬೆಂಚಿ, ತಿಮ್ಮಲಾಪುರ, ಬಸವಣ್ಣಕ್ಯಾಂಪು, ಮಲ್ಲಯ್ಯಕ್ಯಾಂಪು ಗಳಲ್ಲಿ 4.90 ಕೋಟಿ ರೂ. ವೆಚ್ಚದ ಜೆಜೆಎಂ ಯೋಜನೆಯಡಿ ಪ್ರತಿಮನೆಗಳಿಗೆ ನಳಸಂಪರ್ಕ ಕಲ್ಪಿಸಿ, ನೀರಿನ ಸಮಸ್ಯೆಯನ್ನು ನೀಗಿಸಲಾಗುವುದು ಎಂದು ಭರವಸೆ ನೀಡಿದರು. ವೇಣಿವೀರಾಪುರ ಗ್ರಾ.ಪಂ. ಸದಸ್ಯ ಜಗದೀಶ, ಮುಖಂಡ ನಾರಾಯಣಪ್ಪ, ನಾಗೇಶ, ಮಲ್ಲಿಕಾರ್ಜುನ, ಆದಿಮೂರ್ತಿ ಇತರರು ತಮ್ಮ ಗ್ರಾಮದ ಸಮಸ್ಯೆಗಳಾದ ಕುಡಿಯುವನೀರು, ಚರಂಡಿವ್ಯವಸ್ಥೆ, ಬಸ್ಸ್‍ನಿಲುಗಡೆ, ಶೌಚಾಲಯ, ಕೈಗಾರಿಕೆಗಳ ಧೂಳು ಸೇರಿದಂತೆ ಇತರೆ ಸಮಸ್ಯೆಗಳನ್ನು ಈಡೇರಿಸಬೇಕೆಂದು  ಅಗ್ರಹಿಸಿದರು. ಇದಕ್ಕೆ ನೆರೆದ ತಹಶೀಲ್ದಾರ್ ರವರು ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಹಸಿರುಸೇನೆಯ ರಾಜ್ಯರೈತಸಂಘದ ಏಳುಬೆಂಚಿ ಗ್ರಾಮಘಟಕ ಅದ್ಯಕ್ಷ ಕೆಎಂ.ರಾಮಚಂದ್ರಪ್ಪ ಮಾತನಾಡಿ, ಡಿಪಿ-7 ಉಪಕಾಲುವೆಯಲ್ಲಿ ಜಂUಲ್ ಕಟಿಂಗ್ ಮಾಡಿ ರೈತರಿಗೆ ಅನುಕೂಲಕಲ್ಪಿಸಬೇಕು, ಮತ್ತು ಮೂಲಭೂತ ಸಮಸ್ಯೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಏಳುಬೆಂಚಿ ಗ್ರಾಮಪಂಚಾಯಿತಿ ಅದ್ಯಕ್ಷೆ ರೇಣುಕಮ್ಮ ಡಿ.ಹೇಮಚಂದ್ರದಾಸ್ ಗ್ರಾಮವಾಸ್ತವ್ಯಸಭೆಯ ಅದ್ಯಕ್ಷತೆ ವಹಿಸಿದ್ದರು. ಊರಿನ ಮುಖಂಡರು ಸಹ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿಸಲ್ಲಿಸಿದರು. ಸಭೆಯಲ್ಲಿ ಒಟ್ಟು 114 ಅರ್ಜಿಸಲ್ಲಿಕೆಯಾಗಿದ್ದು, ಇದರಲ್ಲಿ 46 ಅರ್ಜಿಗಳನ್ನು ಇಥ್ಯರ್ಥಗೊಳಿಸಲಾಯಿತು. ಏಳುಬೆಂಚಿ ಗ್ರಾಮಲೆಕ್ಕಾದಿಕಾರಿ ನಾಗರಾಜ ಸಭೆಯನ್ನು ನಿರೂಪಿಸಿದರು.
ತಾಪಂ.ಕಾರ್ಯನಿರ್ವಾಹಕರಾದ ನಿರ್ಮಲ, ಗ್ರೇಡ್2 ತಹಶೀಲ್ದಾರ್ ಮಲ್ಲೇಶಪ್ಪ, ಉಪತಹಶೀಲ್ದಾರ್ ವಿಜಯಕುಮಾರ್, ಶಿವರತ್ನಮ್ಮ  ಆರ್‍ಐ. ಸುರೇಶ,  ಗ್ರಾಪಂ. ಉಪಾದ್ಯಕ್ಷ ಪೋತಲಿಂಗಪ್ಪ, ಎಇಇ. ಸುರೇಂದ್ರರೆಡ್ಡಿ, ಎಸಿಡಿಪಿಒ. ಮಾಲುಂಬಿ, ಕೃಷಿ ಅಧಿಕಾರಿ ಎಂ.ದೇವರಾಜ್, ಆಹಾರ ಇಲಾಖೆಯ ಅನಿಲ್‍ಕುಮಾರ್, ಇಂಜಿನಿಯರ್ ಗವಿಯಪ್ಪ, ಬಿಇಒ. ವೆಂಕಟೇಶ್‍ರಾಮಚಂದ್ರಪ್ಪ,  ಎಡಿ.ಶಿವರಾಮರೆಡ್ಡಿ, ನಿಯಲಪಾಲಕ ಗೋವಿಂದಪ್ಪ,  ಗ್ರಾಪಂ ಸದಸ್ಯರು, ಊರಿನ ಮುಖಂಡರು ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.