ಏಳನೇ ದಿನಕ್ಕೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟಕ್ಕೆ ಭಾವಸಾರ ಕ್ಷತ್ರಿಯ ಸಮಾಜ ಬೆಂಬಲ

ಬಳ್ಳಾರಿ, ಡಿ.20: ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಜಿಲ್ಲಾ ವಿಭಜನೆ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಇಂದು ಏಳನೇ ದಿನಕ್ಕೆ ಕಾಲಿರಿಸಿದ್ದು. ಹೋರಾಟಕ್ಕೆ ಬಳ್ಳಾರಿ ಭಾವಸಾರ ಕ್ಷತ್ರಿಯ ಸಮಾಜ ಇಂದು ಬೆಂಬಲ ವ್ಯಕ್ತಪಡಿಸಿ ಧರಣಿ ಸತ್ಯಾಗ್ರಹಕ್ಕೆ ಸಾಥ್ ನೀಡಿದ್ದರು.
ಧರಣಿಯಲ್ಲಿ ಸಮಾಜದ ಅಧ್ಯಕ್ಷ ಎಸ್.ಚಂದ್ರರಾವ್, ಕಾರ್ಯದರ್ಶಿ ಜಿ.ಶಾಮರಾವ್, ಉಪಾಧ್ಯಕ್ಷ ಡಿ.ವೆಂಕೋಬರಾವ್, ಸದಸ್ಯರುಗಳಾದ ಎಸ್.ಶ್ಯಾಮ್ ಸುಂದರ್, ಜೆ.ಹನುಮಂತರಾವ್, ಜಿ.ಪರಶುರಾಮ ರಾವ್, ಜಿ.ವಿಜಯಕುಮಾರ್, ಎಸ್.ಉಮೇಶ್, ಯುವಕ ಸಮಾಜದ ಹೆಚ್.ಜಯರಾಮ್, ಆರ್.ಸುರೇಶ್, ವಿನಾಯಕ ರಾವ್, ಹೋರಾಟ ಸಮಿತಿಯ ಮುಖಂಡರುಗಳಾದ ಸಿರಿಗೇರಿ ಪನ್ನರಾಜ್, ಮೀನಳ್ಳಿತಾಯಣ್ಣ, ಕಿರಣ್ ಕುಮಾರ್, ಚಾಗನೂರು ಮಲ್ಲಿಕಾರ್ಜನರೆಡ್ಡಿ, ಮೀನಳ್ಳಿ ಚಂದ್ರಶೇಖರ್ ಕಣೇಕಲ್ ಮಾಬುಸಾಬ್, ಎಱ್ರಿಸ್ವಾಮಿ, ರಮೇಶ್ ಬುಜ್ಜಿ, ಚೆಂಚಯ್ಯ, ಮೊದಲಾದವರು ಪಾಲ್ಗೊಂಡಿದ್ದರು.