ಏರ್ ಇಂಡಿಯಾ ಪುನಶ್ಚೇತನಕ್ಕೆ ೧೦೦ ದಿನಗಳ ನೀಲ ನಕ್ಷೆ

ನವದೆಹಲಿ,ಡಿ.೬- ಏರ್ ಇಂಡಿಯಾ ಸುಧಾರಣೆಗೆ ಟಾಟಾ ಸಮೂಹ ಸಂಸ್ಥೆ ೧೦೦ ದಿನಗಳ ನೀಲನಕ್ಷೆ ಯೋಜನೆಯನ್ನು ಸಿದ್ಧಪಡಿಸಿದೆ.
ಇದರ ಒಂದು ಭಾಗವಾಗಿ ಪ್ರಯಾಣಿಕರ ದೂರುಗಳು, ಕಾಲ್ ಸೆಂಟರ್‌ಗಳ ದೂರುಗಳು ಮತ್ತು ಸಮಯ ಪರಿಪಾಲನೆಗೆ ಸಂಬಂಧಿಸಿದ ವಿಷಯಗಳಲ್ಲಿ ಸುಧಾರuಗೆ ಕ್ರಮಗಳನ್ನು ತರಲು ಮುಂದಾಗಿದೆ.
೧೦೦ ದಿನಗಳ ಯೋಜನೆಯ ಭಾಗವಾಗಿ ಪ್ರಮುಖವಾಗಿ ಮೂಲ ಸೇವಾ ಗುಣಮಟ್ಟದಲ್ಲಿ ಸುಧಾರಣೆ ತರುವುದು ಟಾಟಾ ಸಮೂಹ ಸಂಸ್ಥೆಯ ಹೆಗ್ಗುರಿಯಾಗಿದೆ, ಮೊದಲ ೧೦೦ ದಿನಗಳಲ್ಲಿ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ಸುಧಾರಿಸಲು ಸಾಧ್ಯವಾಗದಿದ್ದರೂ ಸುಧಾರಣೆಗಳು ಸಂಭವಿಸಬಹುದು.
ಈ ಸಂಖ್ಯೆಗಳು (ಸಮಯದ ಕಾರ್ಯ ಕ್ಷಮತೆ ಪ್ರಯಾಣಿಕರ ದೂರುಗಳು, ಇತ್ಯಾದಿ) ಮಾಸಿಕವಾಗಿ ವರದಿಯಾಗುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಟಾಟಾ ಸಮೂಹ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.
ಏರ್‌ಇಂಡಿಯಾ ಷೇರು ಖರೀದಿ ವಹಿವಾಟು ನಡೆಯುತ್ತಿದ್ದು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಜತೆ ಕಾರ್ಯನಿರ್ವಹಿಸಬೇಕಾಗಿದೆ. ಅಲ್ಲಿಯವರೆಗೂ ಊಹಾ-ಪೋಹಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಟಾಟಾ ಗ್ರೂಪ್ ಇ-ಮೇಲ್ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.