ಏರ್ ಇಂಡಿಯಾ ಕಟ್ಟಡ ಖರೀದಿಗೆ ಮಹಾ ನಿರ್ಧಾರ

ಮುಂಬೈ, ಏ. ೫- ನಾರಿಮನ್ ಪಾಯಿಂಟ್‌ನಲ್ಲಿರುವ “ಐಕಾನಿಕ್ ಏರ್ ಇಂಡಿಯಾ” ಕಟ್ಟಡವನ್ನು ಮಹಾರಾಷ್ಟ್ರ ಸರ್ಕಾರ ಖರೀದಿಸಲು ಮುಂದಾಗಿದೆ.
೧೬೦೦ ಕೋಟಿ ರೂಪಾಯಿ ಮೊತ್ತದ ಕಟ್ಟಡವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ನೀಡಬೇಕು ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಏರ್ ಇಂಡಿಯಾ ಕಟ್ಟಡವನ್ನು ಮಾರಾಟ ಮಾಡುವ ಪ್ರಕ್ರಿ ಪ್ರಯತ್ನದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.
“ಕಟ್ಟಡವನ್ನು ಹೊಂದಿರುವ ಅಲ್ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್, ಅದನ್ನು ನಮಗೆ ನೀಡಲು ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ತಿಳಿಸಿದ್ದು ಪ್ರಸ್ತಾಪ ಷರತ್ತು ಬದ್ಧವಾಗಿದೆ. .ಕೆಲವು ಮಹಡಿಗಳು ಸರ್ಕಾರಿ ಸ್ವಾಮ್ಯದ ಕಂಪನಿಯಲ್ಲಿವೆ ಮತ್ತು ಒಂದು ಮಹಡಿಯಲ್ಲಿ ಕಲಾ ಸಂಗ್ರಹಗಳು ಮತ್ತು ಇತರ ವಸ್ತುಗಳನ್ನು ಹೊಂದಿದೆ ಎಂದು ಹೇಳಲಾಗಿದೆ.
ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಕಟ್ಟಡವನ್ನು ಪಡೆದರೆ, ಬಾಡಿಗೆಯನ್ನು ಉಳಿಸಿಕೊಳ್ಳಬಹುದು ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
“ದಕ್ಷಿಣ ಮುಂಬೈನಾದ್ಯಂತ ಹಲವಾರು ರಾಜ್ಯ ಕಚೇರಿಗಳು ಖಾಸಗಿ ಜಾಗದಲ್ಲಿವೆ ಮತ್ತು ಪ್ರತಿ ತಿಂಗಳು ದೊಡ್ಡ ಮೊತ್ತವನ್ನು ಬಾಡಿಗೆಗಾಗಿ ವೆಚ್ಚ ಮಾಡುತ್ತಿದೆ. ಕಟ್ಟಡ ಖರೀದಿ ಯಿಂದ ಆ ಮೊತ್ತ ಉಳಿಯಲಿದೆ ಎಂದಿದ್ದಾರೆ.
ಕಟ್ಟಡ ಸಂಪೂರ್ಷ ಖಾಲಿಯಾಗಿದ್ದರೆ ಮಾತ್ರ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ ಅವರು ಫಡ್ನವೀಸ್ ಅವರ ಮುಖ್ಯಮಂತ್ರಿಯಾಗಿದ್ದಾಗ ಕಟ್ಟಡವನ್ನು ಖರೀದಿಸಲು ಮೊದಲ ಪ್ರಸ್ತಾಪವನ್ನು ನೀಡಿದ್ದರು.
ಸಚಿವರ ಕಚೇರಿಗಳನ್ನು ಏರ್ ಇಂಡಿಯಾ ಕಟ್ಟಡಕ್ಕೆ ಸ್ಥಳಾಂತರಿಸಬಹುದು ಮತ್ತು ಪ್ರಸ್ತುತ ಖಾಸಗಿ ಕಟ್ಟಡಗಳಲ್ಲಿರುವ ಎಲ್ಲಾ ಕಚೇರಿಗಳನ್ನು ಮಂತ್ರಾಲಯದಲ್ಲಿ ಇರಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಮಂತ್ರಾಲಯ ಮತ್ತು ಏರ್ ಇಂಡಿಯಾ” ಕಟ್ಟಡಕ್ಕೆ ಸಂಪರ್ಕ ಕಲ್ಪಿಸುವ ಕೆಲವು ಯೋಜನೆಗಳಿದ್ದು, ಅದು ಇನ್ನೂ ಚರ್ಚೆಯ ಹಂತದಲ್ಲಿದೆ.