ಏರ್‌ಪೋರ್ಟ್‌ನಲ್ಲಿ ಬಾತ್ ಟವೆಲ್‌ನಲ್ಲಿ ಉರ್ಫಿ ಜಾವೇದ್ ರನ್ನು ನೋಡಿದ ನೆಟ್ಟಿಗರ ಪ್ರಶ್ನೆ ಒಳಗೆ ಏನನ್ನಾದರೂ ಧರಿಸಿದ್ದೀರಾ ಇಲ್ಲವಾ….!!

ಉರ್ಫಿ ಜಾವೇದ್ ಬಾತ್ ಟವೆಲ್ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಕ್ಕಾಗಿ ಮತ್ತೊಮ್ಮೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅವರ ಹೊಸ ವೀಡಿಯೊವನ್ನು ನೋಡಿದ ನಂತರ ನೆಟ್ಟಿಗರು ಅವರನ್ನು ಗೇಲಿ ಮಾಡುತ್ತಿದ್ದಾರೆ.
ಸಾಮಾಜಿಕ ಮಾಧ್ಯಮವು ರಾತ್ರೋರಾತ್ರಿ ಅನೇಕ ಜನರನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತಿದೆ ಮತ್ತು ಉರ್ಫಿ ಜಾವೇದ್ ಅವರ ಹೆಸರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಮ್ಮೆ ನಟಿ ತನ್ನ ಹೊಸ ಸಾಧನೆಯಿಂದ ಬೆಳಕಿಗೆ ಬಂದಿದ್ದಾರೆ. ಉರ್ಫಿ ಜಾವೇದ್ ಅವರ ವೀಡಿಯೊ ವೈರಲ್ ಆಗುತ್ತಿದೆ, ಅದರಲ್ಲಿ ಅವರು ವಿಮಾನ ನಿಲ್ದಾಣದಲ್ಲಿ ಬಾತ್ ಟವೆಲ್ ಧರಿಸಿದ್ದಾರೆ. ಅಷ್ಟೇ ಅಲ್ಲ, ಟವೆಲ್ ನ್ನು ಬಿಚ್ಚಿ ಫೋಟೋಗ್ರಾಫರ್ ಗಳ ಮುಂದೆ ನಂತರ ಎಸೆದಿದ್ದಾರೆ. ಈಕೆಯ ಈ ಕ್ರಮದಿಂದಾಗಿ ಉರ್ಫಿ ಟ್ರೋಲ್‌ಗೆ ಬಲಿಯಾಗಿದ್ದು, ನೆಟಿಜನ್‌ಗಳು ಆಕೆಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.


ಉರ್ಫಿ ವಿಮಾನ ನಿಲ್ದಾಣದಲ್ಲಿ ಬಾತ್ ಟವೆಲ್ ನಲ್ಲಿ ಕಂಡಾಗ:
ಉರ್ಫಿ ಜಾವೇದ್ ಅವರ ವೀಡಿಯೊವನ್ನು ಇನ್‌ಸ್ಟಂಟ್ ಬಾಲಿವುಡ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಉರ್ಫಿ ಪಿಂಕ್ ಟವೆಲ್ ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಉರ್ಫಿ ಫೋಟೋಗ್ರಾಫರ್ ಗಳ ಮುಂದೆ ಬಂದ ತಕ್ಷಣ, ಆಕೆ ತನಗೆ ಸೆಖೆಯಾಗುತ್ತಿದೆ ಎಂದು ಹೇಳುತ್ತಾರೆ ಮತ್ತು ತನ್ನ ಟವೆಲ್ ನ್ನು ಬಿಚ್ಚಿಹಾಕಲು ಪ್ರಾರಂಭಿಸುತ್ತಾರೆ.


ಉರ್ಫಿ ತನ್ನ ಬಾತ್ ಟವೆಲ್ ತೆಗೆದ ತಕ್ಷಣ, ಅವರ ಕೆಂಪು ಬಣ್ಣದ ಟಿ-ಶರ್ಟ್ ಮತ್ತು ಒಳಗಿನಿಂದ ಶಾರ್ಟ್ಸ್ ಧರಿಸಿದ್ದು ಕಾಣುತ್ತದೆ. ಏರ್‌ಪೋರ್ಟ್‌ನಲ್ಲಿ ಎಲ್ಲರ ಮುಂದೆ ಉರ್ಫಿ ಈ ರೀತಿ ಬಟ್ಟೆ ಬದಲಾಯಿಸಿರುವುದು ಜನರಿಗೆ ಇಷ್ಟವಾಗಲಿಲ್ಲ.
ಟ್ರೋಲರ್‌ಗಳು ತಮಾಷೆ ಮಾಡಿದರು:
ಉರ್ಫಿ ಜಾವೇದ್ ಅವರ ಈ ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಂದ ತಕ್ಷಣ, ಕೋಲಾಹಲ ಉಂಟಾಗಿದೆ ಮತ್ತು ಜನರು ಅವರ ವೀಡಿಯೊಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಉರ್ಫಿಯನ್ನು ಬಾತ್ ಟವೆಲ್‌ನಲ್ಲಿ ನೋಡಿ ಕೆಲವರು ಕೋಪಗೊಂಡರೆ, ಕೆಲವರು ಅವರ ಹೊಸ ಶೈಲಿಯನ್ನು ಇಷ್ಟಪಡುತ್ತಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮದಲ್ಲಿದ್ದವರು ಉರ್ಫಿಯ ಈ ಕ್ರಮವನ್ನು ಗೇಲಿ ಮಾಡುತ್ತಿದ್ದಾರೆ. ಒಬ್ಬರು, ’ಅವಳು ನನ್ನ ಟವೆಲ್ ನ್ನು ತೆಗೆದುಕೊಂಡಿದ್ದಾಳೆ’ ಎಂದು ತಮಾಷೆಯಾಗಿ ಹೇಳಿದರು.
ಇನ್ನೊಬ್ಬರು, ’ಅವಳು ಒಳಗೆ ಏನನ್ನಾದರೂ ಧರಿಸಿದ್ದರೆ ಒಳ್ಳೆಯದು’ ಎಂದು ವ್ಯಂಗ್ಯ ಬರೆದಿದ್ದಾರೆ. ಆಗ ಮತ್ತೊಬ್ಬರು ಹೇಳಿದರು- ’ಬಾತ್ರೂಮ್….. ಮುಂದಿನ ಬಾರಿ ತನ್ನೊಂದಿಗೆ ಅದನ್ನು ಸಹ ತರುವರೇನೋ…’.


ಉರ್ಫಿ ಜಾವೇದ್ ಲವ್ ಸೆಕ್ಸ್ ಔರ್ ಧೋಖಾ ೨’ ರಲ್ಲಿ ಕಾಣಿಸಿಕೊಂಡಿದ್ದಾರೆ: ಉರ್ಫಿ ಜಾವೇದ್ ತನ್ನ ಚಮತ್ಕಾರಿ ಫ್ಯಾಶನ್ ಸೆನ್ಸ್‌ನೊಂದಿಗೆ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ ಮತ್ತು ಈಗ ಅವರು ಏಕ್ತಾ ಕಪೂರ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ’ಲವ್ ಸೆಕ್ಸ್ ಔರ್ ಧೋಖಾ ೨’ ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟೀಸರ್ ಹೊರಬಿದ್ದಿದ್ದು, ಉರ್ಫಿಯ ಅಭಿಮಾನಿಗಳು ಆಕೆಯ ನೋಟವನ್ನು ನೋಡಿ ಖುಷಿಯಿಂದ ಕುಣಿದಾಡುತ್ತಿದ್ದಾರೆ. ಟಿವಿ ಜಗತ್ತಿನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಉರ್ಫಿ ಇಂದು ಉದ್ಯಮದಲ್ಲಿ ಚಿರಪರಿಚಿತ ಹೆಸರಾಗಿದೆ.

ಜಾಹ್ನವಿ-ಖುಷಿ ತಮ್ಮ ಸಂಬಂಧವನ್ನು ತಾವೇ ನಿರ್ವಹಿಸಬೇಕು ಎಂದಿದ್ದಾರೆ ಬೋನಿ ಕಪೂರ್

ಬೋನಿ ಕಪೂರ್ ಬಾಲಿವುಡ್‌ಗೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂಡಸ್ಟ್ರಿಯಲ್ಲಿ ಖ್ಯಾತ ನಿರ್ಮಾಪಕರಲ್ಲದೆ, ಅರ್ಜುನ್ ಕಪೂರ್, ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಅವರಂತಹ ತಾರೆಯರ ತಂದೆ ಎಂದೂ ಕರೆಸಿಕೊಂಡಿರುತ್ತಾರೆ.


ಬೋನಿ ಕಪೂರ್ ಅವರ ಮಕ್ಕಳಾದ ಅರ್ಜುನ್ ಮತ್ತು ಜಾಹ್ನವಿ ಅವರ ಸಂಬಂಧಕ್ಕಾಗಿ ಆಗಾಗ್ಗೆ ಸುದ್ದಿ ಮಾಡುತ್ತಾರೆ. ಇತ್ತೀಚೆಗೆ, ಬೋನಿ ಕಪೂರ್ ಸಂದರ್ಶನವೊಂದರಲ್ಲಿ ತಮ್ಮ ಮಕ್ಕಳು ಮತ್ತು ಅವರ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಬೋನಿ ಕಪೂರ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ’ತಂದೆ’ ಎಂದು ಪ್ರಸಿದ್ಧರಾಗಿದ್ದಾರೆ. ಅವರ ದಿವಂಗತ ಪತ್ನಿ ನಟಿ ಶ್ರೀದೇವಿಯವರ ಮರಣದ ನಂತರ, ಅವರು ತಮ್ಮ ಇಬ್ಬರು ಪುತ್ರಿಯರಾದ ಜಾಹ್ನವಿ ಮತ್ತು ಖುಷಿಯನ್ನು ನಿಭಾಯಿಸಿದ ರೀತಿಗೆ ಅವರ ಸ್ವಂತ ಮಕ್ಕಳೇ ಅವರನ್ನು ಅನೇಕ ಸಂದರ್ಭಗಳಲ್ಲಿ ಪ್ರಶಂಸಿಸುತ್ತಿರುವುದು ಕಂಡುಬಂದಿದೆ. ಇತ್ತೀಚೆಗೆ ಬೋನಿ ಕಪೂರ್ ಅವರಿಗೆ “ತಮ್ಮ ಮಕ್ಕಳಿಗೆ ಸಂಬಂಧಗಳ ಬಗ್ಗೆ ಸಲಹೆ ನೀಡುತ್ತೀರಾ” ಎಂದು ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೋನಿ, ’ಇಲ್ಲ, ನಾನು ನನ್ನ ನಿರ್ಧಾರಗಳನ್ನು ಅವರ ಮೇಲೆ ಹೇರುವುದಿಲ್ಲ.’ ಎಂದರು.


“ಹಾ.ಅವರು ತಮ್ಮ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು” ಎನ್ನುತ್ತಾ ಬೋನಿ ಮುಂದುವರಿಸಿದರು- ’ಮೊದಲು ಕೆಲವೊಮ್ಮೆ ನಾನು ಕೋಪಗೊಳ್ಳುತ್ತಿದ್ದೆ, ಆದರೆ ನಾನು ಅರ್ಜುನ್ ಅಥವಾ ಜಾಹ್ನವಿಗೆ ನೀನು ಹೀಗೆ ಮಾಡು….ಅಥವಾ ಅದನ್ನು ಹಾಗೆ ಮಾಡಬೇಡ ಎಂದೆಲ್ಲ ಏನೂ ಹೇಳಲಿಲ್ಲ. ಅವರು ತಮ್ಮ ಸ್ವಂತ ತಪ್ಪುಗಳಿಂದ ಕಲಿಯುತ್ತಾರೆ. ನಿಮ್ಮ ಸಂಬಂಧಗಳನ್ನು ನೀವೇ ನಿರ್ವಹಿಸಬೇಕು ಎಂದು ನಾನು ಸ್ಪಷ್ಟವಾಗಿ ಅವರಿಗೆ ಹೇಳಿದ್ದೇನೆ’ ಎಂದರು.


ಬೋನಿ ಅವರ ಪುತ್ರ ಅರ್ಜುನ್ ಕಪೂರ್ ಹಲವಾರು ಸಂದರ್ಭಗಳಲ್ಲಿ ನಟಿ ಮಲೈಕಾ ಅರೋರಾ ಅವರೊಂದಿಗಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಜಾಹ್ನವಿ ಮತ್ತು ಖುಷಿ ಕೂಡ ’ಕಾಫಿ ವಿತ್ ಕರಣ್’ ನಲ್ಲಿ ಸನ್ನೆಗಳ ಮೂಲಕ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮಕ್ಕಳ ಪ್ರೇಮ ಜೀವನದ ಬಗ್ಗೆ ಮಾತನಾಡಿದ ಬೋನಿ, ’ನಾನು ಅವರ ವೈಯಕ್ತಿಕ ಜೀವನವನ್ನು ತುಂಬಾ ಗೌರವಿಸುತ್ತೇನೆ. ಅವರು ನನ್ನ ಮಕ್ಕಳು, ಆದರೆ ಅವರು ತಮ್ಮದೇ ಆದ ಜೀವನವನ್ನು ಹೊಂದಿದ್ದಾರೆ ಮತ್ತು ಅವರು ಪ್ರತಿ ನಿರ್ಧಾರವನ್ನು ತೆಗೆದುಕೊಳ್ಳಲು ಸ್ವತಂತ್ರರು ಎಂದು ಸ್ಪಷ್ಟವಾಗಿ ಹೇಳಿದರು.