ಏರುತ್ತಿರುವ ಬಿಸಿಲ ಬೇಗೆ

ಲಕ್ಷ್ಮೇಶ್ವರ,ಮಾ31: ಪಟ್ಟಣದಲ್ಲಿ ಕಳೆದ 48 ತಾಸುಗಳ ಹಿಂದೆ ಬಿಸಿಲಿನ ಬೇಗೆಗೆ ತತ್ತರಿಸಿರುವ ಜನತೆ ಹೈರಾಣವಾಗಿದ್ದಾರೆ. ಬುಧವಾರ ಪಟ್ಟಣದಲ್ಲಿ ಮಧ್ಯಾಹ್ನದ ವೇಳೆಗೆ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ ಗುರುವಾರ ಮಧ್ಯಾಹ್ನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಇದರಿಂದಾಗಿ ಬೆಂದು ಬಸವ ಳಿದಿದ್ದ ಜನತೆ ಕಲ್ಲಂಗಡಿ ಹಣ್ಣು ಕರಬೂಜಿ ಹಣ್ಣು ಶರಬತ್ತು ತಂಡಪಾನೀಯಗಳು ಲಸ್ಸಿ, ಮಜ್ಜಿಗೆಗಳಿಗೆ ಮೊರೆ ಹೋಗುತ್ತಿದ್ದಾರೆ.
ಮಾರ್ಚ್ ಕೊನೆಯ ವಾರದಲ್ಲಿ ಬಿಸಿಲಿನ ಪ್ರಕಾರತೆ ದಿನದಿಂದ ದಿನಕ್ಕೆಏರತೋಡಗಿದ್ದು ಪಟ್ಟಣದಲ್ಲಿ ಎಲ್ಲಿಯೂ ಸಾರ್ವಜನಿಕರಿಗೆ ನೀರಿನ ಅರವಟ್ಟಿಗೆಗಳು ಇಲ್ಲದಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಕುಡಿಯಲು ನೀರು ಪಡೆಯಲು ಚಹಾದಂಗಡಿಗಳಲ್ಲಿ ಒಂದು ಕಪ್ಪು ಚಹಾ ಕುಡಿದು ಕುಡಿಯುವ ಅವಶ್ಯಕತೆ ಎದುರಾಗಿದೆ.
ಪಟ್ಟಣಕ್ಕೆ ಪ್ರತಿನಿತ್ಯ ಏನಿಲ್ಲವೆಂದರು 25 ರಿಂದ 30,000 ಜನ ಬಂದು ಹೋಗುತ್ತಿದ್ದು ಈ ಎಲ್ಲಾ ಗ್ರಾಮೀಣ ಪ್ರದೇಶದ ಜನರಿಗೆ ಸೂಕ್ತವಾದ ನಾಗರಿಕ ಸೌಲಭ್ಯಗಳು ಅದರಲ್ಲೂ ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆ ಎಲ್ಲಿಯೂ ಕಾಣದಿರುವುದರಿಂದ ಅನಿವಾರ್ಯವಾಗಿ ಹಣ್ಣು ಹಂಪಲು ಗಳಿಗೆ ಮೊರೆ ಹೋಗುತ್ತಿದ್ದಾರೆ.
ಇನ್ನೂ ಎರಡು ತಿಂಗಳು ಬಿಸಿಲಿನ ಪ್ರಖರತೆ ತಾರಕಕ್ಕೇರಲಿದ್ದು ಒಂದು ಕಡೆ ರಾಜಕೀಯ ಕಾವು ಮತ್ತೊಂದು ಕಡೆ ಬಿಸಿಲಿನ ಕಾವು ಹೆಚ್ಚುತ್ತಿದ್ದು ಮುಂಗಾರು ಮಳೆ ಸುರಿಯವರೆಗೆ ಬಿಸಿಲ ತಾಪ ತಪ್ಪಿದ್ದಲ್ಲ.