ಏರುತ್ತಿದೆ ಚುನಾವಣಾ ಕಾವು: ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ಟಿಕೆಟ್ ಕೈತಪ್ಪಿದವರ ಅಸಮಾಧನವೂ ಸ್ಪೋಟ.


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಏ, 13: ರಾಜ್ಯ ವಿಧಾನ ಸಭೆಯ ಅಧೀಕೃತ ಚುನಾವಣಾ ಅಧಿಸೂಚನೆ ಇಂದಿನಿಂದ ಜಾರಿಯಾಗಿದ್ದು ವಿವಿಧ ಪಕ್ಷಗಳ ಘೋಷಿತ ಹಾಗೂ ಸಂಭಾವ್ಯ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ಭರಸÀು ಏರಲಾರಂಭಿಸಿದೆ.
ಮೊದಲಿನಿಂದಲೂ ತಂದೆಯಂತೆ ಕ್ಷೇತ್ರಾಧಿಪತಿ ವಿರೂಪಾಕ್ಷೇಶ್ವರ ನಾಡತಾಯಿ ಭುವನೇಶ್ವರಿ ಹಾಗೂ ಪಂಪಾಂಭಿಕೆಯರ ದರ್ಶನ ಪಡೆದು ವಿದ್ಯುಕ್ತವಾಗಿ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥಸಿಂಗ್ ಅಣಿಯಾಗಿದ್ದು ನಿನ್ನೆ ದೇವಸ್ಥಾನಗಳ ಸುತ್ತುಹೊಡೆದು  ವಿವಿಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡುವ ಕಾರ್ಯ ಹಾಗೂ ವಿವಿಧ ವಾರ್ಡ್‍ಗಳಲ್ಲಿ ಮತಯಾಚನೆಯನ್ನು ಆರಂಭಿಸಿದ್ದಾರೆ. ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗವಿಯಪ್ಪ ಜಿಲ್ಲಾಧ್ಯಕ್ಷ ಸಿರಾಜ್‍ಶೇಕ್ ನೇತ್ರತ್ವದಲ್ಲಿ ಪಕ್ಷದ ಮುಖಂಡರಾದ ಹೆಚ್.ಎನ್.ಎಫ್ ಇಮಾಮ್, ಮಹಮ್ಮದ್ ನೇತ್ರತ್ವದಲ್ಲಿ ವಾರ್ಡ್‍ವಾರು ಭೇಟಿ ನೀಡಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಇನ್ನು ವಿವಿಧ ಪಕ್ಷಗಳ ಚಿತ್ರಣ ಅಸ್ಪಷ್ಟವಾಗಿದ್ದರೂ ಪಕ್ಷೇತರರು ಸೇರಿದಂತೆ ಜೆಡಿಎಸ್, ಕೆಆರ್‍ಎಸ್, ಕೆಆರ್‍ಪಿ, ಎಡಪಂತಿಯ ಮತ್ತು ಆಪ್ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲವಾದರೂ ತಾವು ಚುನಾವಣಾ ಕಣದಲ್ಲಿದ್ದೇವೆ ಎಂಬ ಸಂದೇಶ ಸಾರಿರುವ ಹಿನ್ನೆಲೆಯಲ್ಲಿ ಚುಟುವಟಿಕೆ ಇವೆಯಾದರೂ ಪ್ರಚಾರದ ತೀವೃತೆಯನ್ನು ಕಾಣದಾಗಿವೆ,
ಉಳಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ ಅಧೀಕೃತ ಅಭ್ಯರ್ಥಿಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಮತ್ತು ನೇರ ಚುನಾವಣಾ ಕಾವು ಹಾಗೂ ಸ್ಪರ್ಧೆಯೂ ಈ ಇಬ್ಬರ ಮಧ್ಯಯೇ ಇರುವುದರಿಂದ ಚುನಾವಣಾ ರಂಗ ಕ್ಷೇತ್ರದಾಧ್ಯಂತ ಕಾಣಸಿಗುತ್ತಿದೆ. ಇಂದು ಸಹ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥಸಿಂಗ್,  ಕಾಂಗ್ರೆಸ್ ಅಭ್ಯರ್ಥಿ ಹೆಚ್.ಆರ್.ಗವಿಯಪ್ಪ ಕೆಲದಿನಗಳಿಂದ ಪ್ರತಿವಾರ್ಡ್, ಸಮಾಜಗಳ ಮುಖಂಡರು ಹಾಗೂ ಮನೆ ಮನೆ ಭೇಟಿ ಆರಂಭಿಸಿದ್ದಾರೆ. 
ಒಟ್ಟಾರೆ ಚುನಾವಣಾ ಕಾವು ನಿತ್ಯ ನಗರದಲ್ಲಿ ಕಾಣಲಾರಂಭಿಸಿದ್ದು ರಾಜಕೀಯ ಚಟುವಟಿಕೆಗಳು ತೀವೃಗೊಳುತ್ತಿವೆ.
ಈ ಮಧ್ಯ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮುಖಂಡರಾದ ಬಿ.ಎಲ್.ರಾಣಿ ಸಂಯುಕ್ತ ತಮ್ಮ ಬೆಂಬಲಿಗರ ಸಭೆ ಕರೆದು ತಮ್ಮ ಮುಂದಿನ ನಡೆಯಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದು ಅನೇಕ ಹಿರಿಯರ ನನ್ನೊಂದಿಗಿದ್ದಾರೆ, ಸಚಿವ ಆನಂದಸಿಂಗ್ ಟಿಕೆಟ್ ನೀಡಿದ್ದರೆ ಪರವಾಗಿಲ್ಲಾ ಆದರೆ ಇತ್ತೀಜೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಹಾಗೂ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ ಅಂತಹ ಯುವಕನಿಗೆ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಉಳಿದಂತೆ ಕಾಂಗ್ರೆಸ್ ಬಂಡಾಯವನ್ನು ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದು ಒಂದು ಹಂತದ ನೆಮ್ಮದಿಗೆ ಕಾರಣವಾಗಿದ್ದು ಬಿಜೆಪಿ ಹೇಗೆ ನಿಭಾಯಿಸುವುದೊ ಕಾದುನೋಡಬೇಕು.