ಏಮ್ಸ್ ಹೋರಾಟ ೭೦ ನೇ ದಿನಕ್ಕೆ – ಸೇವಾ ಕಾಲೇಜಿನ ವಿದ್ಯಾರ್ಥಿಗಳು ಭಾಗಿ

ರಾಯಚೂರು.ಜು.೨೧- ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೭೦ ನೇ ದಿನಕ್ಕೆ ಕಾಲಿಟ್ಟಿದೆ. ರಾಯಚೂರಿನಲ್ಲಿಯೇ ಏಮ್ಸ ಸ್ಥಾಪಿಸಬೇಕೆಂದು ಒತ್ತಾಯಿಸಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ನಗರದ ಸೇವಾ ಕಾಲೇಜಿನ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ ರಕ್ತದಲ್ಲಿ ಸಹಿ ಮಾಡಿ, ತಮ್ಮ ಬೆಂಬಲವನ್ನು ಸೂಚಿಸಿದರು. ಧರಣಿಯನ್ನು ಉದ್ದೇಶಿಸಿ ಕಾಲೇಜಿನ ಪ್ರಾಚಾರ್ಯ ಮಾರುತಿ ಮತ್ತು ಹೋರಾಟ ಸಮಿತಿಯ ಎಂ.ಆರ್. ಭೇರಿ, ಎಸ್.ಮಾರೆಪ್ಪ ವಕೀಲರು ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಭೀಮರಾಯ ರಸ್ತಾಪುರ, ತಿಮ್ಮಪ್ಪ ಅಸ್ಕಿಹಾಳ್ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ಮಹೇಶ್, ಲಿಂಗಪ್ಪ, ನಾಗರಾಜ್, ಉದಯ, ಪ್ರವೀಣ್ ಕುಮಾರ್, ನರಸಿಂಹ, ತಾಯಪ್ಪ, ಉದಯ್ ಕುಮಾರ್, ರಾಘವೇಂದ್ರ, ಉರುಕುಂದಪ್ಪ, ಅಂಜಿನಯ್ಯ, ಕೃಷ್ಣ, ತಾಯಪ್ಪ, ಈರೇಶ್, ಸುನೀಲ್, ಭೀಮೇಶ್, ಮಲ್ಲೇಶ್, ರಾಮನಗೌಡ, ಮಹೇಂದ್ರ, ಪ್ರಕಾಶ್, ರಂಗನಾಥ್ , ರಾಘವೇಂದ್ರ, ಸಿದ್ಧಲಿಂಗ, ದೇವೇಂದ್ರ, ಶೋಭಾ, ಮಹೇಶ್ವರಿ, ಸರಿತಾ, ಉರುಕುಂದಮ್ಮ , ತೇಜೇಶ್ವರಿ ಸೇರಿದಂತೆ ಇನ್ನೂ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಹೋರಾಟ ಸಮಿತಿಯ ಡಾ.ಬಸವರಾಜ ಕಳಸ, ಅಶೋಕಕುಮಾರ್ ಜೈನ್, ಶೇಖರ್ ರೆಡ್ಡಿ, ವೆಂಕಟೇಶ ಆಚಾರ್ಯ, ಕಾಮ್ ರಾಜ್ ಪಾಟೀಲ್, ಬಶೀರ್ ಅಹ್ಮದ್ ಹೊಸಮನಿ, ಚಂದ್ರಶೇಖರ ಭಂಡಾರಿ, ಸಂತೋಷ್ ಜೈನ್, ಪ್ರಸಾದ್ ಭಂಡಾರಿ, ಬಸವರಾಜ ಮಿಮಿಕ್ರಿ, ಡಿ.ಮಹೆಬೂಬ್ ಮುಂತಾದವರು ಭಾಗವಹಿಸಿದ್ದರು.