ಏಮ್ಸ್ ಹೋರಾಟ ೧೩೨ ನೇ ದಿನಕ್ಕೆ ಮುಂದುವರಿದಿದೆ

ರಾಯಚೂರು.ಸೆ.೨೧- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೧೩೨ ನೇ ದಿನಕ್ಕೆ ಮುಂದುವರಿದಿದೆ .
ಸ್ವಚ್ಛ ವಿಧಾನಸಭೆ ಅಭಿಯಾನ ಪಾದಯಾತ್ರೆಯ ಮೂಲಕ ರಾಯಚೂರಿಗೆ ಆಗಮಿಸಿದ ನಾಗರಾಜ್ ಕಲಕೂಟಗರ ಬಾಗಲಕೋಟೆ ಇವರು ಏಮ್ಸ್ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ “ಅತ್ಯಂತ ಗೌರವಾನ್ವಿತ ಎಲ್ಲರ ಅಭಿಮಾನದ ಸಂಕೇತ ವಿಧಾನಸೌಧ ಇಂದು ಭ್ರಷ್ಟ ಶಾಸಕರ ಕೇಂದ್ರವಾಗಿದೆ , ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಭ್ರಷ್ಟಾಚಾರ ಮುಕ್ತ ಶಾಸಕರನ್ನು ವಿಧಾನಸಭೆಗೆ ಚುನಾಯಿಸಿ ಕಳುಹಿಸಬೇಕು ,ಎಮ್ಸ ಗಾಗಿ ಸುದೀರ್ಘ ಹೋರಾಟ ನಡೆಯುತ್ತಿದ್ದು ಕೂಡಲೇ ಸರಕಾರ ಎಚ್ಚೆತ್ತು ಹಿಂದುಳಿದ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದು” ಆಗ್ರಹಿಸಿದರು.
ಹೋರಾಟ ಸಮಿತಿಯ ಡಾ .ಬಸವರಾಜ ಕಳಸ ಅಶೋಕಕುಮಾರ್ ಜೈನ್ ಎಸ್. ಮಾರೆಪ್ಪ ವಕೀಲರು ವೆಂಕಟೇಶಆಚಾರಿ , ಕಾಮ್ ರಾಜಪಾಟೀಲ್ ಬಸಿರಹಮ್ಮದ ಹೊಸಮನಿ , ಗುರುರಾಜ ಕುಲಕರ್ಣಿ, ಬಿ .ಶಾಮ್ ಪರುಶುರಾಮ್, ಅಮರೇಶ್ ,ಖಾಜಾ ಅಸ್ಲಾಂ, ಭೀಮನಗೌಡ ಎಸ್‌ಎಫ್‌ಐ ನರಸಪ್ಪ ಶರಶ್ಚಂದ್ರ ವಕೀಲರು ಆಂಜನೇಯ ಜಾನ್ ವೆಸ್ಲೆ ಅಬ್ದುಲ್ ಮತೀನ್, ಸಯ್ಯದ್ ನಹೀಮ್ ಪಾಷಾ, ಶೇಖ್ ನಜೀರ್ ಅಹ್ಮದ್ ರವಿ ದಾಸ್, ಎಸ್ .ರಾಮಣ್ಣ ಶಿವರಾಜ ಮಡಿವಾಳ ಬಸವರಾಜ ಮಿಮಿಕ್ರಿ ಚಂದ್ರಶೇಖರ್ ಭಂಡಾರಿ ವೆಂಕಟೇಶ ದಿನ್ನಿ ಶರಣಪ್ಪಅಸ್ಕಿಹಾಳ ಮುಂತಾದವರು ಭಾಗವಹಿಸಿದ್ದರು.