ಏಮ್ಸ್ ಹೋರಾಟ ಸಮತಿಗೆ ಬಾಬುರಾವ್ ಅಭಿನಂದನೆ

ರಾಯಚೂರು, ಮಾ.೦೯- ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಯ ಹೋರಾಟ ಇಂದಿಗೂ ೩೦೦ ದಿನಕ್ಕೆ ಮುಂದುವರಿದಿದೆ. ಹೋರಾಟಕ್ಕೆ ಬೆಂಬಲ ನೀಡಿದ ಮತ್ತು ನಿರಂತರವಾಗಿ ಮುಂದುವರಿಸಿದ ಏಮ್ಸ್ ಹೋರಾಟ ಸಮತಿಗೆ ರೈಲ್ವೆ ಬೋರ್ಡ್ ಸದಸ್ಯ ಬಾಬುರಾವು ಅಭಿನಂದನೆ ಸಲ್ಲಿಸಿದ್ದಾರೆ.
ಮೊದಲು ರಾಯಚೂರಿನ ನಾನೊಬ್ಬ ನಾಗರಿಕನಾಗಿ ನನ್ನ ಒಂದು ಮನಪೂರ್ವಕ ನಮನಗಳು. ಇಂದಿಗೆ ೩೦೦ ದಿನಕ್ಕೆ ನಿರಂತರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮುಂದುವರೆದಿದೆ. ಅದಲ್ಲದೆ ಎರಡನೆಯ ಹಂತದ ೫೦ ದಿನಗಳ ಸರದಿ ಉಪವಾಸ ಸತ್ಯಾಗ್ರಹ ಕೂಡ ಮುಂದುವರೆದಿದೆ. ೫೦ ದಿನಗಳ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಇಬ್ಬರು ೨೪ ಗಂಟೆಗಳಕಾಲ ವೇದಿಕೆಯಲ್ಲಿ ಬರೀ ನೀರಲ್ಲಿ ಇದ್ದು,ಇಂದಿಗೆ ೧೦೦ ಜನಗಳ ಈ ಸರದಿ ಉಪವಾಸಕ್ಕೆ ನನ್ನ ವೈಯಕ್ತಿಕ ಹಾಗೂ ರಾಯಚೂರ ಜನರ ಪರವಾಗಿ ಹೋರಾಟಗಾರರಿಗೆ ನಮನಗಳು. ಡಾ. ಬಸವರಾಜ ಕಳಸ ಮತ್ತು ಅಶೋಕಕುಮಾರ ಸಿ. ಕೆ. ಜೈನ ರವರ ನೇತ್ರತ್ವದಲ್ಲಿ ರಾಯಚೂರಿನಲ್ಲಿಯೇ ಇತಿಹಾಸ ನಿರ್ಮಿಸಿರುವ ಈ ಹೋರಾಟ ಪ್ರಶಂಸನಿಯ. ಜನ ಸಾಮಾನ್ಯರು ಒಂದು ಘಂಟೆ ಅಥವಾ ಅರ್ಧ ಘಂಟೆಗಳ ಕಾಲ ಯಾವುದೆ ಧರಣಿ, ಹೋರಾಟ, ಸಭೆ ಸಮಾರಂಭದಲ್ಲಿ ಭಾಗವಹಿಸಲು ಜನರಿಗೆ ಸಮಯವಿಲ್ಲ. ಆದರೆ ಇಂದು ೩೦೦ ದಿನಗಳ ಏಮ್ಸ್ ಹೋರಾಟಕ್ಕೆ ಸ್ಪಂದಿಸದಿರುವುದು ರಾಯಚೂರ ಜಿಲ್ಲೆಯ ದುರಾದೃಷ್ಟ. ನಾನೊಬ್ಬ ಎ ಪಿ ಎಂ ಸಿ ಮಾಜಿ ಉಪಾಧ್ಯಕ್ಷನಾಗಿ ಸನ್ಮಾನ್ಯ ಪ್ರಧಾನಿ ಶ್ರೀ ನರೆಂದ್ರ ಮೊದಿಜಿಯವರ ಮನವಿಗೆ ತರುವದೆನೆಂದರೆ, ರಾಯಚೂರು ಜಿಲ್ಲೆಯು ಮಹಾತ್ವಾಕಾಂಕ್ಷಿ ಜಿಲ್ಲೆ ಆಗಿದೆ. ೩೭೧ ಜೆ ಕಲಂ ಅಡಿಯಲ್ಲಿ ಬರುವ ಜಿಲ್ಲೆ. ಅಪೌಷ್ಠಿಕ ಕೊರತೆಯಿಂದ ಗರ್ಬಿಣಿ ಹೆಣ್ಣು ಮಕ್ಕಳ ಸಾವು ಮತ್ತು ಹುಟ್ಟುವ ಶಿಶುಗಳ ಅಪೌಷ್ಠಿಕ ಕೊರತೆಯಿಂದ ಮರಣ. ಎರಡೆರಡು ಕಲ್ಲಿದ್ದಲು ಘಟಕಗಳಿಂದ ವಿದ್ಯುತ ಉತ್ಪಾದಿಸಿ ಪರಿಸರದ ಮೇಲೆ ಪರಿಣಾಮ.
ಎರಡೆರಡು ನದಿಗಳು ಕ್ರಿಷ್ಣ – ತುಂಗಭದ್ರಾ ನೀರಿನ ಕೊರತೆ ಇಲ್ಲದ ಜಿಲ್ಲೆ. ರಾಷ್ಟ್ರದಲ್ಲೆ ಏಕೈಕ ಚಿನ್ನದ ಗಣಿ ಹೊಂದಿರುವ ಜಿಲ್ಲೆ, ಭತ್ತದ ಕಣಜ, ಏಷ್ಯಾದಲ್ಲೆ ಅತಿ ಹೆಚ್ಚು ಹತ್ತಿ ಮಾರಾಟವಾಗುವ ಜಿಲ್ಲೆಯಾಗಿದೆ. ನಂಜುಂಡಪ್ಪ ವರದಿ ಅನುಸಾರವಾಗಿ ಐ ಐ ಟಿ ನಮಗೆ ಬರುವದನ್ನ ಹುಬ್ಬಳಿ ಧಾರವಾಡಗೆ ಹೋಯಿತು, ನಮಗೆ ಬರಬೇಕಾದ ಏಮ್ಸ್ ಮತ್ತೆ ಧಾರವಾಡಕ್ಕೆ ಬೇಕೆಂದರೆ ಯಾವ ನ್ಯಾಯ?. ಆದ್ದರಿಂದ ಮಾನ್ಯ ಪ್ರಧಾನಿಯವರು ಈ ಕುರಿತು ವಿಷೇಶ ಗಮನ ಹರಿಸಿ ನಮ್ಮರಾಯಚೂರು ಜಿಲ್ಲೆಗೆ ನ್ಯಾಯ ಒದಗಿಸ ಬೇಕೆಂದು ನನ್ನ ಸವಿನಯ ಪ್ರಾರ್ಥನೆ. ಈ ೩೦೦ ದಿನಗಳ ಹೋರಾಟದಲ್ಲಿ ೫೦ ದಿನಗಳ ಸರದಿ ಉಪವಾಸದಲ್ಲಿ ಭಾಗವಹಿಸಿರುವ ಕೆಲವು ಇಲಾಖೆಯ ನಿವೃತ್ತ ಜನರಿಗೆ ಮಹಿಳೆಯರಿಗೆ, ಸಂಘ ಸಂಸ್ಥೆಗಳಿಗೆ ಹೋರಾಟದ ಪ್ರತಿಯೊಬ್ಬರಿಗೂ ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.