ಏಮ್ಸ್ ಸ್ಥಾಪನೆಗೆ ಹೋರಾಟ ಅಗತ್ಯ

ರಾಯಚೂರು,ಜ.೧೪- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೨೪೬ ನೇ ದಿನಕ್ಕೆ ಮುಂದುವರೆದಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲೆಬೇಕೆಂದು ಒತ್ತಾಯಿಸಿ, ಇಂದು ನಡೆದ ಸತ್ಯಾಗ್ರಹದಲ್ಲಿ ರಂಗಭೂಮಿ ನಿರ್ದೇಶಕ ಕಾರ್ಮಿಕ ಮುಖಂಡ ತಾಯಣ್ಣ ಎರಗೇರಾ ಮಾತನಾಡುತ್ತಾ, ಈ ಹಿಂದೆ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ. ಡಿಎಂ ನಂಜುಂಡಪ್ಪ ವರದಿಯ ಶಿಫಾರಸ್ಸಿನಂತೆ ಐಐಟಿ ಸ್ಥಾಪಿಸಬೇಕಾಗಿತ್ತು.
ಆಳುವ ಸರ್ಕಾರಗಳ ಕುತಂತ್ರದಿಂದಾಗಿ ಮತ್ತು ನಮ್ಮ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಕೈತಪ್ಪಿ ಹೋಗಿ ನಾವೆಲ್ಲರೂ ವ೦ಚಿತರಾಗಿದ್ದೇವೆ. ಈ ಚಾರಿತ್ರಿಕ ಒಂದು ಕೆಟ್ಟ ಅನುಭವವನ್ನು ಗಣನೆಗೆ ತೆಗೆದುಕೊಂಡು ಸರಕಾರದ ಯಾವುದೇ ಕುತಂತ್ರಗಳಿಗೆ ಬಲಿಯಾಗಲಾರದೆ ಇನ್ನಷ್ಟು ಉಗ್ರ ಸ್ವರೂಪದ ಹೋರಾಟದಲ್ಲಿ ಧುಮುಕುವುದರ ಮೂಲಕ ಸರಕಾರವನ್ನು ಬಡೆದೆಬ್ಬಿಸಬೇಕಾಗಿದೆ. ಐಐಟಿಯಿಂದ ವಂಚಿತಗೊಂಡ ನಾವು ಜಾಗೃತರಾಗಲೇಬೇಕು. ಸರಕಾರವನ್ನು ಬಡಿದೆಬ್ಬಿಸಲು ಉಗ್ರ ಹೋರಾಟಕ್ಕೆ ಧುಮುಕಲೇಬೇಕು ತಾಯಣ್ಣ ಯರಗೇರಾ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗೊವರೆಗೂ ನಾವು ಬದ್ಧತೆಯಿಂದ ಹಠದಿಂದ ಹೋರಾಟವನ್ನು ಮುಂದುವರಿಸಲೇಬೇಕಾಗಿದೆ ಎಂದು ಹೇಳಿದರು. ಹೋರಾಟ ಸಮಿತಿಯ ಡಾ.ಬಸವರಾಜ ಕಳಸ, ಅಶೋಕ್ ಕುಮಾರ್ ಜೈನ್, ಕಾಮರಾಜ ಪಾಟೀಲ್, ಬಸವರಾಜ ಮಿಮಿಕ್ರಿ, ವೆಂಕಟೇಶ ಆಚಾರಿ, ಬಶೀರ್ ಅಹ್ಮದ್ ಹೊಸಮನಿ, ಅಯ್ಯನಗೌಡ ಪಾಟೀಲ್ ನಂದಿಹಳ್ಳಿ, ಗುರುರಾಜ ಕುಲಕರಣಿ, ವೀರೇಶ್ ಬಾಬು, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ನರಸಪ್ಪ ಬಾಡಿಯಾಳ, ತಿಮ್ಮ ರೆಡ್ಡಿ, ರಮೇಶ್ ರಾವ್ ಕಲ್ಲೂರ್ ಕರ್, ಸಂಗಪ್ಪ ಕಡಿ, ವಿನಯ್ ಕುಮಾರ್ ಚಿತ್ರಗಾರ, ವೆಂಕಟಯ್ಯ ಶೆಟ್ಟಿ ಹೊಸಪೇಟೆ, ರುದ್ರಯ್ಯ ಗುಣಾರಿ, ಮೌನೇಶ ಧನವಂತರಿ, ಸಾಧಿಕ್ ಖಾನ್, ನಾಸೀರ್ ಹೊಸೂರ್, ಜಸವಂತ ರಾವ್ ಕಲ್ಯಾಣಕಾರಿ ,ಆರಿಫ್ ಮಿಯಾ ನೆಲಹಾಳ ವಿವೇಕಾನಂದ, ಎಸ್.ಎಸ್. ಬಿರಾದರ್, ಚಂದ್ರಶೇಖರ್ ಭಂಡಾರಿ, ಸೋಮಶೇಖರ್ ಕಡಿ, ದ್ಯಾಮಪ್ಪ, ಸುಚಿತ್ ಮುಂತಾದವರು ಭಾಗವಹಿಸಿದ್ದರು.