ಏಮ್ಸ್ ಮಂಜೂರು ಆಗದಿದ್ದರೆ ದೆಹಲಿಯಲ್ಲಿ ಹೋರಾಟ

ರಾಯಚೂರು.ಏ.೧೨- ಏಮ್ಸ್ ಮಂಜೂರು ಆಗದಿದ್ದರೆ ದೆಹಲಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ರಾಜ್ಯೋಸ್ತವ ಪುರಸ್ಕೃತ ಜಯಲಕ್ಷ್ಮಿ ಮಂಗಳಮೂರ್ತಿ ಹೇಳಿದರು.
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶೇಷ ಸ್ಥಾನಮಾನ ಕೊಳಪಟ್ಟ ಮಹತ್ವಕಾಂಕ್ಷಿ ಜಿಲ್ಲೆ ಐಐಟಿ ಇಂದ ವಂಚಿತಗೊಂಡ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕು, ಇಲ್ಲದಿದ್ದರೆ ನಾವೆಲ್ಲರೂ ದೆಹಲಿಯಲ್ಲಿ ರಣಕಹಳೆಯನ್ನು ಮೊಳಗಿಸಬೇಕಾಗುತ್ತದೆ ಎಂದು ಕೇಂದ್ರ ಸರಕಾರವನ್ನು ಎಚ್ಚರಿಸಿದರು.
ಸ್ವಾತಂತ್ರ್ಯ ನಂತರ ಪ್ರಾದೇಶಿಕ ಅಸಮತೋಲನೆ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಹೆಸರಿನಲ್ಲಿ ಧಾರವಾಡದ ಕೆಲವು ಕುತಂತ್ರ ರಾಜಕೀಯ ಶಕ್ತಿ ಗಳಿಂದಾಗಿ ರಾಯಚೂರು ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರಬೇಕಾದ ಅನುದಾನ ಯೋಜನೆಗಳಲ್ಲಿ ಭಾರಿ ಅನ್ಯಾಯವಾಗುತ್ತಿದೆ. ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಆಗಬೇಕಾಗಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಧಾರವಾಡದ ಪ್ರಬಲ ರಾಜಕೀಯ ಹಿತಾಸಕ್ತಿಗೆ ಬಲಿಯಾಗಿ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಯಿತು. ವಂಚಿತಗೊಂಡ ರಾಯಚೂರಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರವೇ ಘೋಷಣೆ ಮಾಡಿದಂತೆ ಮಹತ್ವಕಾಂಕ್ಷಿ ಜಿಲ್ಲೆಗೆ ವಿಶೇಷ ಸ್ಥಾನಮಾನ ಕೊಳಪಟ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕು ತನ್ಮೂಲಕ ಇಡೀ ಕಲ್ಯಾಣ ಕರ್ನಾಟಕ ಮತ್ತು ಸಮಸ್ತ ಕನ್ನಡ ನಾಡಿಗೆ ಪ್ರತಿ ಬಡವರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವದಾಗಿ ಘೋಷಿಸಬೇಕು. ಇಲ್ಲದಿದ್ದರೆ ದೆಹಲಿಯಲ್ಲಿ ಉಗ್ರ ಹೋರಾಟದ ರಣಕಹಳೆಯನ್ನು ಮೊಳಗಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಎಸ್.ಮಾರಪ್ಪ ವಕೀಲರು, ಜಾನ್ ವೆಸ್ಲಿ, ಎಂ.ಆರ್.ಭೇರಿ, ಬಾಬುರಾವ್ ಶೇಗುಣಸಿ, ವೀರಣ್ಣ ಶೆಟ್ಟಿ ಭಂಡಾರಿ, ಶ್ರೀನಿವಾಸ ನಾಗಲದಿನ್ನಿ, ಡಾ. ಶಾರದಾ ಹುಲಿ ನಾಯಕ್ ಮುಂತಾದವರು ಮಾತನಾಡಿದರು. ಇಂದಿನ ಸತ್ಯಾಗ್ರಹದಲ್ಲಿ ಡಾ.ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ರಮೇಶ್ ರಾವ್ ಕಲ್ಲೂರ್ಕರ್, ಎಸ್.ತಿಮ್ಮಾರೆಡ್ಡಿ, ಜಸವಂತ್ ರಾವ್ ಕಲ್ಯಾಣಕಾರಿ, ವೆಂಕಟರೆಡ್ಡಿ ದಿನ್ನಿ, ಮಲ್ಲನಗೌಡ ಹದ್ದಿನಾಳ, ಚಂದ್ರಶೇಖರ್ ಭಂಡಾರಿ, ವೀರಭದ್ರಯ್ಯ ಸ್ವಾಮಿ, ವೀರೇಶ್ ಬಾಬು, ಪಂಪಣ್ಣಗೌಡ, ಉದಯಕುಮಾರ್, ಪ್ರಭುನಾಯಕ, ಎಮ್.ಬಸವರಾಜ, ನರಸಪ್ಪ ಬಾಡಿಯಾಲ್, ಶ್ರೀನಿವಾಸ ಕಲ್ವಲದೊಡ್ಡಿ, ಹೇಮರಾಜ್ ಅಸ್ಕಿಹಾಳ, ಆಂಜನೇಯ ಕುರುಬದೊಡ್ಡಿ, ವೆಂಕಯ್ಯ ಶೆಟ್ಟಿ ಹೊಸಪೇಟೆ, ಮಲ್ಲಿಕಾರ್ಜುನ್, ರಾಘವೇಂದ್ರ ಗೌಡ, ಬೆಟ್ಟಪ್ಪ ಹೊಕ್ರಾಣಿ ಮುಂತಾದವರು ಭಾಗವಹಿಸಿದ್ದರು.