ಏಮ್ಸ್ ಮಂಜೂರಾತಿ, ವಿ.ವಿ.ಗೆ ಅನುದಾನ ಬಿಡುಗಡೆ-ಪ್ರತಿಭಟನೆ

ರಾಯಚೂರು.ಸೆ.16- ಏಮ್ಸ್ ಮಂಜೂರಾತಿಗೆ ಮತ್ತು ರಾಯಚೂರು ವಿ.ವಿ ಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ ಎಸ್‌ಎಫ್ಐ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು
ದೇಶದಲ್ಲೆ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ರಾಯಚೂರು ಜಿಲ್ಲೆಗೆ ಅಗತ್ಯ ಮತ್ತು ಅನಿವಾರ್ಯತೆ ಇದ್ದರು ಹಿಂದೆ ಕಾರಣಾಂತರ ಹಾಗೂ ರಾಜಕೀಯ ಇಚ್ಛಾ ಶಕ್ತಿ ಮತ್ತು ಮೋಸಗಾರಿಕೆಯಿಂದ ಐಐಟಿ ಎಂಬ ಶಿಕ್ಷಣ ಸಂಸ್ಥೆ ಕೈ ತಪ್ಪಿತು ಈಗ ಆ ಸರದಿಯಲ್ಲಿ ಏಮ್ಸ್ ಸೇರುವ ಸಾಧ್ಯತೆ ಎದ್ದು ಕಾಣುತ್ತಿದೆ. ರಾಯಚೂರು ಜಿಲ್ಲೆ ಬಡತನದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಈಗಲೂ ಈ ಭಾಗದ ಜನತೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಶಿಕ್ಷಣ ಲಭಿಸುತ್ತಿಲ್ಲ, ಉತ್ತಮ ಚಿಕಿತ್ಸೆ ಮತ್ತು ವೈದ್ಯಕೀಯ ವಿದ್ಯಾಭ್ಯಾಸ ಕ್ಕಾಗಿ ದೂರದ ಹೈದ್ರಾಬಾದ್, ಬೆಂಗಳೂರು, ಚೆನ್ನೈ, ಪುಣೆ ಮತ್ತು ಬಾಂಬೆ ಯಂತಹ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಕಾರಣದಿಂದ ಈ ಭಾಗದ ಜನತೆಯು ಅನಾರೋಗ್ಯ ಕ್ಕೆ ತುತ್ತಾದ ಮೇಲೆ ಚೇತರಿಸಿಕೊಳ್ಳುವ ಬದಲು ಸಾವಿಗೆ ತುತ್ತಾಗೊದೆ ಹೆಚ್ಚಿದೆ. ಇನ್ನೂ ವೈದ್ಯಕೀಯ ಶ ಚಿಕಿತ್ಸೆ ಶಿಕ್ಷಣ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಬಡತನ, ಭಾಷೆ ಮತ್ತು ಪ್ರಾದೇಶಿಕ ಸಮಾನತೆ ಹಾಗೂ ಭೌಗೋಳಿಕ ಪ್ರದೇಶದ ವಾತವರಣದ ಕಾರಣದಿಂದ ಕಲಿಕೆಯಿಂದ ದೂರ ಉಳಿಯುವಂತಾಗಿದೆ. ಇನ್ನೂ ನಂಜುಡಪ್ಪ ವರದಿ ಸೇರಿ ಅನೇಕ ಅಧ್ಯಯನ ವರದಿಗಳು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಬೇಕು ಅನ್ನುವ ಅಂಶವನ್ನು ಹೇಳಿವೆ ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ರು ಸೇರಿ ಕೇಂದ್ರದ ತಂಡ ಸ್ಥಳ ಪರಿಶೀಲನೆ ಸೇರಿ ಒಂದಷ್ಟು ಸಮಾಲೋಚನೆ ಯನ್ನು ಮಾಡಿದೆ. ನಂತರ ಏಮ್ಸ್ ಮಂಜೂರಾತಿಗಾಗಿ ಜಿಲ್ಲೆಯ ಜನಾಗ್ರಹವು ಇದೆ. ಇದನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ ಜಿಲ್ಲೆಗೆ ಏಮ್ಸ್ ಸಂಸ್ಥೆ ಯನ್ನು ಮಂಜೂರು ಮಾಡಬೇಕು. ಹಾಗೂ ಅನೇಕ ಹೋರಾಟ ಗಳ ಪ್ರತಿಫಲವಾಗಿ ಕಳೆದ ಕೆಲವು ತಿಂಗಳ ಹಿಂದೆ ಯರಗೇರಾ ಸ್ನಾತಕೋತ್ತರ ಅಧ್ಯಯನ ಕೇಂದ್ರವು ರಾಯಚೂರು ನೂತನ ವಿಶ್ವವಿದ್ಯಾಲಯವಾಗಿ ಘೋಷಣೆ ಆಗಿದೆ ‌ ಆದರೆ ಘೋಷಣೆ ಆಗಿ ಐದು ತಿಂಗಳು ಕಳೆದರು ಇಂದಿಗೂ ವಿಶ್ವವಿದ್ಯಾಲಯದ ನೂತನ ಪ್ರಕ್ರಿಯೆ ಸೇರಿ ಅಭಿವೃದ್ಧಿಯ ಯಾವ ಕೆಲಸಗಳು ನಡೆಯುತ್ತಿಲ್ಲ ಕಾರಣ ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಯುಜಿಸಿ ಯಿಂದ ಬರಬೇಕಾದ ಅನುದಾನ ಬಂದಿಲ್ಲ ಇದರಿಂದ ಯೂನಿವರ್ಸಿಟಿ ಶೈಕ್ಷಣಿಕ ಚಟುವಟಿಕೆಗಳು ಸೇರಿ ಎಲ್ಲಾದಕ್ಕೂ ಗ್ರಹಣ ಹಿಡಿದಂತಾಗಿದೆ.
ಆದಕಾರಣ ಕೂಡಲೇ ತಾವುಗಳು ಅನುದಾನವನ್ನು ಬಿಡುಗಡೆ ಮಾಡಿ ಶೈಕ್ಷಣಿಕ ಚಟುವಟಿಕೆಗಳು ಸೇರಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ನಮ್ಮ ಸಮುದಾಯದೊಂದಿಗೆ ಉಗ್ರವಾದ ಹೋರಾಟವನ್ನು ನಡೆಸಲಾಗುತ್ತದೆಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ಉಪಾಧ್ಯಕ್ಷರಾದ ಬಸವರಾಜ ದೀನಸಮುದ್ರ, ಮಹಾಲಿಂಗ ದೊಡ್ಡಮನಿ, ಗೌರಿ ರಾಯಚೂರು, ಬಸವಂತ್ ಮಸ್ಕಿ, ಮಹೇಶ್ವರಿ, ಮೌನೇಶ ಬುಳ್ಳಾಪುರ, ವೆಂಕಟೇಶ ಕವಿತಾಳ, ನಾಗಮೋಹನ್ ಸಿಂಗ್, ಅಮರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.