
ರಾಯಚೂರು,ಏ.೨- ಎಲ್ಲಾ ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ಜಿಲ್ಲೆಗೆ ಏಮ್ಸ್ ತೆಗೆದುಕೊಂಡು ಬರಬೇಕು ಎಂದು ಹೋರಾಟ ಸಮಿತಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಎನ್.ಮಹಾವೀರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಮಾರ್ಚ್ ೩೦ ರಂದು ಸಿಂದನೂರು ಶಾಸಕ ವೆಂಕಟರಾವ್ ನಾಡಗೌಡ ಅವರು ಏಮ್ಸ್ ನಿಯೋಗವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಬೇಟಿ ಮಾಡಿಸಿದಾಗ ನಮ್ಮ ಬೇಡಿಕೆಯನ್ನು ಅವರ ಮುಂದೆ ಹೇಳಿದಾಗ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.ಅದೇ ರೀತಿ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಜಿ.ಮರಮೇಶ್ವರ ಅವರನ್ನು ಕೂಡ ಬೇಟಿ ಮಾಡಿದಾಗ ಅವರು ಕೂಡ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದ ಅವರು,ಇವರು ಕೂಡ ಕೇವಲ ಭರವಸೆಗಳನ್ನು ನೀಡಿದರೆ ಏಮ್ಸ್ ಗಾಗಿ ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ.ನಮ್ಮ ಈ ಹೋರಾಟ ನಿರಂತರವಾಗಿರುತ್ತೆ ಎಂದರು.
೩೨೫ ದಿನಗಳಿಂದ ಈ ನಮ್ಮ ಹೋರಾಟ ನಿರಂತರವಾಗಿದೆ.ಕಳೆದ ೭೪ ದಿನಗಳಿಂದ ಉಪವಾಸ ಸರಣಿ ಕೂಡ ಪ್ರಾರಂಭ ಮಾಡಲಾಗಿದೆ.ಮಾರ್ಚ್ ೨೪ ರಂದು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ರಾಯಚೂರು ನಗರ ಬಂದ್ ಮಾಡಲಾಗಿತ್ತು. ಈ ಬಂದ್ ಗೆ ಎಲ್ಲಾ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚಂದಪಾಷ,ಜಾನ್ ವೆಸ್ಲಿ, ಗುರುರಾಜ ಕುಲಕರ್ಣಿ,ಬಸವರಾಜ, ಎಂ.ಆರ್.ಬೇರಿ, ಪ್ರಭು ನಾಯಕ,ಉದಯಕುಮಾರ ಇದ್ದರು.