ಏಮ್ಸ್ ಆಸ್ಪತ್ರೆಯಲ್ಲಿ ಸೈಬರ್ ದಾಳಿ: ಅಲ್ಲಗಳೆದ ಕೇಂದ್ರ

ನವದೆಹಲಿ,ಜೂ.7- ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ- ಎಮ್ಸ್ ನಲ್ಲಿ ಮದ್ಯರಾತ್ರಿ ಸೈಬರ್ ದಾಳಿ ಪತ್ತೆ ಮಾಡಲಾಗಿದ್ದು ಅದನ್ನು ವಿಫಲಗೊಳಿಸಿದೆ ಎಂದು ಏಮ್ಸ್ ತಿಳಿಸಿದೆ.

ಏಮ್ಸ್ ಟ್ವೀಟ್ ಪ್ರಕಾರ, ಸೈಬರ್ ದಾಳಿಯನ್ನು ಮದ್ಯರಾತ್ರಿ 2.50 ಕ್ಕೆ ಪತ್ತೆಹಚ್ಚಿ ದಾಳಿ ಪ್ರಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಲಾಯಿತು ಮತ್ತು ಬೆದರಿಕೆಯನ್ನು ತಟಸ್ಥಗೊಳಿಸಲಾಗಿದೆ ಎಂದು ಹೇಳಿದೆ.

ದೆಹಲಿಯ ಏಮ್ಸ್‍ನ ಟ್ವಿಟ್ಟರ್‍ನಲ್ಲಿ, “ನವದೆಹಲಿಯ ಏಮ್ಸ್‍ನಲ್ಲಿರುವ ಸೈಬರ್-ಸೆಕ್ಯುರಿಟಿ ಸಿಸ್ಟಮ್‍ಗಳಲ್ಲಿ ಮಧ್ಯರಾತ್ರಿ 2.30ಕ್ಕೆ ಗಂಟೆಗಳಲ್ಲಿ ಮಾಲ್‍ವೇರ್ ದಾಳಿಯನ್ನು ಪತ್ತೆಹಚ್ಚಿ ದಾಳಿ ತಪ್ಪಿಸಲಾಗಿದೆ.ಇ-ಹಾಸ್ಪಿಟಲ್ ಸೇವೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

ದಾಳಿ ಅಲ್ಲಗಳೆದ ಕೇಂದ್ರ:

ಸಂಭಾವ್ಯ ಮಾಲ್‍ವೇರ್ ದಾಳಿಯ ಕುರಿತು ಎಮ್ಸ್ ಟ್ವೀಟ್ ಮಾಡಿದ ನಂತರ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು ಯಾವುದೇ ಸೈಬರ್ ದಾಳಿ ನಡೆದಿಲ್ಲ ಎಂದಿದೆ.ದೋಷದಿಂದ ಕೂಡಿದ ಸಂದೇಶ, ಯಾವುದೇ ಸೈಬರ್ ದಾಳಿ ಆಗಿಲ್ಲ ಎಂದು ಹೇಳಿದೆ.

ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಯಾರೋ ಒಬ್ಬರು ಆಂತರಿಕ ಪೋರ್ಟಲ್ ಪ್ರವೇಶಿಸಲು ಪ್ರಯತ್ನಿಸಿರಬಹುದು ಮತ್ತು ಬಳಸುವ ಭದ್ರತಾ ಪದರದಿಂದಾಗಿ ಎಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಇಂಟರ್‍ನೆಟ್ ಬಳಕೆದಾರರಿಗೆ ಲಭ್ಯವಿಲ್ಲದ ಆಂತರಿಕ ಅಪ್ಲಿಕೇಶನ್ ಆಗಿದೆ. ಯಾರಾದರೂ ಈ ಪೆÇೀರ್ಟಲ್ ಅನ್ನು ಪ್ರವೇಶಿಸಲು ಪ್ರಯತ್ನಿಸಿರಬಬಹುದು ಮತ್ತು ಭದ್ರತಾ ಪದರದ ಕಾರಣದಿಂದ ಎಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ.