ಏಮ್ಸ್‌ಗಾಗಿ ಪ್ರಧಾನ ಮಂತ್ರಿ ಭೇಟಿ ಮಾಡಿಸದಿದ್ದರೆ ದೆಹಲಿಯಲ್ಲಿ ಹೋರಾಟ

(ಸಂಜೆವಾಣಿ ವಾರ್ತೆ)
ರಾಯಚೂರು,ಫೆ.೧೯-
ಜಿಲ್ಲೆಗೆ ಏಮ್ಸ್ ಮಂಜೂರು ಕುರಿತಂತೆ ಮನವರಿಕೆ ಮಾಡಿಕೊಡಲು ಏಮ್ಸ್ ನಿಯೋಗಕ್ಕೆ ಪ್ರಧಾನ ಮಂತ್ರಿಗಳ ಭೇಟಿಗೆ ಸ್ಥಳೀಯ ಸಂಸದರು ಅವಕಾಶ ಕಲ್ಪಿಸದಿದ್ದರೆ ದೆಹಲಿಯಲ್ಲಿ ಹೋರಾಟ ಅನಿವಾರ್ಯ ಎಂದು ಏಮ್ಸ್ ಹೋರಾಟ ಸಮಿತಿ ಮುಖಂಡ ಬಸವರಾಜ ಕಳಶ ಎಚ್ಚರಿಸಿದರು.
ರಾಯಚೂರು ಏಮ್ಸ್ ಮಂಜೂರಿಗೆ ಒತ್ತಾಯಿಸಿ, ಕಳೆದ ೬೪೦ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರು ಹೋರಾಟವನ್ನು ಗಂಭೀರವಾಗಿ ಪರಿಗಣಿಸದಿರುವುದು ದುರಾದೃಷ್ಟಕರ ವೆಂದು ಬಸವರಾಜು ಕಳಶ ಸುದ್ಧಿಗೋಷ್ಟಿಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಸಂಸದ ಅಮರೇಶ್ ನಾಯಕರು ಫೆ.೨೩ ರೊಳಗೆ ಸ್ಥಳೀಯ ಏಮ್ಸ್ ನಿಯೋಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಬೇಕು. ನಿರ್ಲಕ್ಷ್ಯಿಸಿದರೆ ಫೆ. ೨೬ ರಂದು ದೆಹಲಿ ಜಂತರ್ -ಮಂತರ್ ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಏಮ್ಸ್ ಹೋರಾಟ ನಿಯೋಗಕ್ಕೆ ಕೇಂದ್ರ ನಾಯಕರನ್ನು ಭೇಟಿ ಮಾಡಲು ಇದುವರೆಗೂ ಅವಕಾಶ ಕಲ್ಪಿಸಲು ಸ್ಥಳೀಯ ಸಂಸದರಿಗೆ ಸಾಧ್ಯವಾಗಿಲ್ಲ. ಆದರೆ ಹೋರಾಟ ನಿರಂತರವಾಗಿ ನಡೆಯಲಿದ್ದು ಸಂಸದರು ಈ ವಿಷಯವನ್ನು ಗಂಭೀವಾಗಿ ಪರಿಗಣಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದ ಅವರು ಜ. ೨೮ ರಂದು ಮಂತ್ರಾಲಯ ಶ್ರೀಗಳ ಎದುರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿಸುವುದಾಗಿ ಹೇಳಿದರು. ಆದರೆ ಕಾರ್ಯಕ್ರಮ ರದ್ಧಾದ ಹಿನ್ನೆಲೆಯಲ್ಲಿ ಭೇಟಿ ಸಾಧ್ಯವಾಗಲಿಲ್ಲ ಎಂದು ಕಳಶ ತಿಳಿಸಿದರು.
ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಕುರಿತಂತೆ ರಾಜ್ಯದಿಂದ ಪ್ರಸ್ತಾವನೆ ಸಲ್ಲಿಕೆ ಆಗದಿದ್ದg ನಾವು ಏನು ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಕೇಂದ್ರಕ್ಕೆ ೩ ಬಾರಿ ಪತ್ರ ಬರೆದಿದ್ದಾರೆ. ಏಮ್ಸ್ ನಿಯೋಗ ಕೇಂದ್ರ ನಿಯಮ ಸಚಿವ ಕೂಬಾ ಸೇರಿದಂತೆ ರಾಜ್ದದ ಇಬ್ಬರು ಸಚಿವರಿಗೂ ಮನವರಿಕೆ ಮಾಡಲಾಗಿದೆ. ಏಮ್ಸ್ ಮಂಜೂರಾತಿಗೆ ಅವಶ್ಯಕವಿರುವ ಅಂಶಗಳನ್ನು ಮನವರಿಕೆ ಮಾಡಿಕೊಡಲಾಗಿದೆ.
ಸುದ್ಧಿಗೋಷ್ಟಿಯಲ್ಲಿ ಎಂ. ಮಹಾವೀರ್, ಎಸ್.ಎಸ್. ಪಾಟೀಲ್, ರಮೇಶ್ ಕಲ್ಯಾಣ್‌ಕರ್, ಸ್ನೇಹಾ, ವಿನಯ್, ರಮೇಶ್ ಸೇರಿದಂತೆ ಇತತರು ಇದ್ದಾರೆ.