ಏಮ್ಸ್‌ಗಾಗಿ ಪಕ್ಷೇತರಅಭ್ಯರ್ಥಿಯಾಗಿ ಬಸವರಾಜ ಕಳಸ ಸ್ಪರ್ಧೆ

ರಾಯಚೂರು,ಏ.೮- ಏಮ್ಸ್‌ಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಅವರನ್ನು ರಾಯಚೂರು ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಹೋರಾಟ ಸಮಿತಿ ತೀರ್ಮಾನಿಸಲಾಗಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಅಶೋಕ ಕುಮಾರ ಜೈನ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಏಮ್ಸ್ ಗಾಗಿ ಜಿಲ್ಲೆಯ ಶಾಸಕರು ಯಾರು ಕೂಡ ಏಮ್ಸ್ ಹೊರಕ್ಕೆ ಧ್ವನಿಯಾಗಲಿಲ್ಲ.ಕೆಲ ಶಾಸಕರು ಮಾತ್ರ ಧ್ವನಿಯಾಗಿದ್ದಾರೆ ಆದರೆ ಅವರು ಕಾಟಾಚಾರಕ್ಕೆ ಮಾಡಿದ್ದಾರೆ ಈ ನಿಟ್ಟಿನಲ್ಲಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರನ್ನು ಚುನಾವಣೆ ಸ್ಪರ್ಧೆಗೆ ಇಳಿಸಲಿದ್ದೇವೆ ಆದ್ದರಿಂದ ನಗರ ಜನರು ಏಮ್ಸ್ ಗಾಗಿ ಮತ ನೀಡಿ ಈ ಬಾರಿ ಸ್ವತಂತ್ರ ಅಭ್ಯರ್ಥಿ ಬಸವರಾಜ ಕಳಸ ಅವರನ್ನು ಗೆಲ್ಲಿಸಿ ರಾಯಚೂರಿನ ಶಕ್ತಿಯನ್ನು ತೋರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಂ.ಆರ್. ಬೇರಿ,ಎನ್ ಮಹಾವೀರ,ಉದಯಕುಮಾರ,ವೆಂಕಟೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.