ಏಮ್ಸ್‌ಗಾಗಿ ಐಕ್ಯ ಹೋರಾಟ ಅಗತ್ಯ

ರಾಯಚೂರು.ಫೆ.೦೯- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೬೩೮ ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ನಡೆದ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ನಿವೃತ್ತ ಪ್ರಾಚಾರ್ಯ ಅಮರೇಗೌಡ ರವರು ಭಾಗವಹಿಸಿ ಮಾತನಾಡಿ “ನಮ್ಮ ಜಿಲ್ಲೆಯು ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದರು ಜನಪ್ರತಿನಿಧಿಗಳ ನಿರ್ಲಕ್ಷತನ ಧೋರಣೆಯಿಂದ ತೀರ ಹಿಂದುಳಿದಿದೆ, ಇದರಲ್ಲಿ ಪ್ರಜೆಗಳಾದ ನಾವು ಕೂಡ ಉದಾಸೀನತೆಯಿಂದ ಹಿಂದುಳಿಕೆಗೆ ಪಾಲುದಾರರಾಗಿದ್ದೇವೆ ನಾವೆಲ್ಲರೂ ಐಕ್ಯತೆಯಿಂದ ಹೋರಾಡಲೇಬೇಕು ಏಮ್ಸ್ ಆರೋಗ್ಯ ಸಂಸ್ಥೆಯನ್ನು ಪಡೆಯಲೇಬೇಕು ಅಲ್ಲಿಯವರೆಗೆ ಹೋರಾಟ ನಿಲ್ಲಕೂಡದು”, ಎಂದು ಕರೆ ನೀಡಿದರು .
ಡಾ ಶಿವರಾಜ್ ಕೊರವಿಹಾಳ ರವರು ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿ, ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯು ೨೧ ತಿಂಗಳಿಂದ ನಡೆಯುತ್ತಿರುವ ಈ ಚಳಿವಳಿಯನ್ನ ಕೇಂದ್ರ ಸರ್ಕಾರ ಮಾನ್ಯತೆ ನೀಡಿ, ಬೇಗ ಬೇಡಿಕೆ ಈಡೇರಿಸಲು ಹೋರಾಟಗಾರ ಒತ್ತಾಯವಾಗಿದೆ. ಮಹಾತ್ವಾಕಾಂಕ್ಷಿ ಜಿಲ್ಲೆ ರಾಯಚೂರು ಎಂದು ಘೋಷಿಸಿದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ನಂತರ ಯಾವ ಮಹತ್ವಕಾಂಕ್ಷಿ ಯೋಜನೆ ನೀಡಿಲ್ಲ. ಈಗಲಾದರೂ ರಾಯಚೂರು ಜನತೆಯ ಬೇಡಿಕೆಯನ್ನು ಈಡೇರಿಸಿ, ಏಮ್ಸ್ ಘೋಷಣೆ ಮಾಡಿದರೆ ಮಹಾತ್ವಾಕಾಂಕ್ಷಿ ಜಿಲ್ಲೆ ಎಂಬ ಹೆಸರಿಗೆ ಒಂದು ಅರ್ಥ ಬರುತ್ತದೆ ಎಂದು ಕರೆ ನೀಡಿದರು.
ಇಂದಿನ ಹೋರಾಟದ ಡಾ. ಬಸವರಾಜ್ ಕಳಸ, ಕಾಮರಾಜ ಪಾಟೀಲ್, ಡಾ.ಎಸ್‌ಎಸ್‌ಪಾಟೀಲ್, ಡಾ.ಶಿವರಾಜಪ್ಪ ಕೊರ್ವಿಹಳ್ , ಜಾನ್ ವೆಸ್ಲಿ, ನರಸಪ್ಪ ಬಾಡಿಯಲ್, ಜಗದೀಶ್ ಪುರತಿಫ್ಲಿ, ಸುಲೋಚನಾ ಸಂಘ, ವೀರೇಶ್ ಆ ವಕೀಲರು, ಅಮರೇಗೌಡ ನಿವೃತ್ತ ಪ್ರಾಚಾರ್ಯರು, ವೆಂಕಯ್ಯ ಶೆಟ್ಟಿ ಹೊಸಪೇಟೆ, ಜ್ಸ್ವಂತ್ ರಾವ್ ಕಲ್ಯಾಣಕಾರಿ, ರಮೇಶ್ ಕಲ್ಲೂರ್ಕರ್, ವೆಂಕಟರೆಡ್ಡಿ ದಿನ್ನಿ, ನಾಸೀರ್ ಹೊಸೂರ್, ಸಾದಿಕ್ ಖಾನ್, ಸಂತೋಷ್ ಜೈನ್, ಸತ್ಯನತ್, ರವಿ ಕುಮಾರ್ ಮುಂತಾದವರೆಲ್ಲ ಭಾಗವಹಿಸಿದ್ದರು.