ಏಪ್ರೀಲ್ 23 ರಂದು ಹಸ್ತಾಂತರ, ಉದ್ಘಾಟನಾ ಕಾರ್ಯಕ್ರಮ

ಹುಬ್ಬಳ್ಳಿ,ಏ21: “ದ ರೋಟರಿ ಫೌಂಡೇಶನ್” ನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ಕಿಮ್ಸ್ ಗೆ ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮತ್ತು ಡಯಾಲಿಸಿಸ್ ಮಾಡಲು ಬೇಕಿರುವ ಯಂತ್ರ ಮತ್ತು ಪರಿಕರಗಳನ್ನು ನೀಡಲಾಗುತ್ತಿದ್ದು, ಹಸ್ತಾಂತರ ಮತ್ತು ಉದ್ಘಾಟನೆ ಕಾರ್ಯಕ್ರಮ ಎಪ್ರಿಲ್ 23 ರಂದು ನಡೆಯಲಿದೆ ಎಂದು ಕ್ಲಬ್ ನ ಅಧ್ಯಕ್ಷ ಸಿ.ಎ.ಸುರೇಂದ್ರ ಪೆÇೀರವಾಲ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯ ಮಾಡಲಾಗುತ್ತಿದ್ದು, ಈ ವರೆಗೆ ಕಿಮ್ಸ್ ಗೆ ಸುಮಾರು ಒಂದೂವರೆ ಕೋಟಿ ರೂಪಾಯಿಯ ಯಂತ್ರೋಪಕರಣಗಳನ್ನು ನೀಡಲಾಗಿದೆ. ಅದರಂತೆ ಇದೀಗ 40 ಲಕ್ಷ ವೆಚ್ಚದಲ್ಲಿ ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಕಿಮ್ಸ್ ನಲ್ಲಿ ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮಾಡಲು ಮೂತ್ರಪಿಂಡ ಕಸಿ ಮಾಡುವಿಕೆಯ ಪರಿಗಳನ್ನು ನೀಡಲಾಗುತ್ತಿದೆ ಎಂದರು.
ಇನ್ನೂ ಈ ಉದ್ಘಾಟನೆ ಮತ್ತು ಹಸ್ತಾಂತರ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಆಗಮಿಸಲಿದ್ದಾರೆ ಎಂದರು. ಡಾ.ವೆಂಕಟೇಶ ಮೂಗಾರ, ಬಿ.ಬಿ.ಪಾಟೀಲ್, ಅರವಿಂದ ಕುಬಸದ್, ಜಿತೇಂದ್ರ ಪೂಜಾರ ಸೇರಿದಂತೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.