ಏಪ್ರೀಲ್ 14 ರಿಂದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ಹುಬ್ಬಳ್ಳಿ,ಮಾ22: ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜಯಂತ್ಯೋತ್ಸವದ ಅಂಗವಾಗಿ ನಗರದ ಳೇ ಹುಬ್ಬಳ್ಳಿಯಲ್ಲಿರುವ ಶ್ರೀಮಠದಲ್ಲಿ ರಾಜ್ಯಮಟ್ಟದ 6ನೇ ವರ್ಷದ ಭಜನಾ ಸ್ಪರ್ಧೆ ಕಾರ್ಯಕ್ರಮವನ್ನು ಏಪ್ರಿಲ್ 14 ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಚೇರ್ಮನ್ ದೇವೆಂದ್ರಪ್ಪ ಮಾಳಗಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಠದ ಟ್ರಸ್ಟ ಕಮೀಟಿಯ ಕಾರ್ಯಾಲಯದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ಹೆಸರನ್ನು ನೋಂದಾಯಿಸಬಹುದು.
ದಿ. 14ರಂದು ಮುಂಜಾನೆ 10.30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಸಿದ್ಧಾರೂಢ ಸ್ವಾಮಿ ಸಂಪ್ರದಾಯದ ಸ್ವಾಮಿಗಳು, ಉದ್ಘಾಟಕರಾಗಿ ನ್ಯಾಯಾಧೀಶ ಹಾಗೂ ಮುಖ್ಯ ಆಡಳಿತಾಧಿಕಾರಿ ಉಮೇಶ ಅಡಿಗ ಆಗಮಿಸಲಿದ್ದಾರೆ. ಅಂದು ನಡೆಯುವ ಭಜನಾ ಸ್ಪರ್ಧೆಯಲ್ಲಿ ಶ್ರೀಮಠದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಭಜನಾ ತಂಡಕ್ಕೆ ಸವಿನೆನಪಿನ ಕಾಣಿಕೆ ನೀಡಲಾಗುವುದು ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ತಂಡಕ್ಕೆ ಪ್ರತಿಯೊಬ್ಬ ಕಲಾವಿದರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದ ಅವರು ಈ ಸ್ಪರ್ಧೆಯಲ್ಲಿ 300 ರ ಕ್ಕಿಂತ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 90 ಸಾವಿರ, ದ್ವಿತೀಯ ಬಹುಮಾನ 70 ಸಾವಿರ, ತೃತೀಯ ಬಹುಮಾನ 60 ಸಾವಿರ, ಸಮಾಧಾನಕರ ಬಹುಮಾನ 8 ಸಾವಿರ ರೂ.ಗಳನ್ನು ನೀಡಲಾಗುವುದು. ಅಲ್ಲದೆ 16 ವರ್ಷದ ಒಳಗಿನ ಬಾಲಕ, ಬಾಲಕಿಯರಿಗೆ 9 ಸಾವಿರ ರೂ. ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು. ಮಹಿಳಾ ಭಜನಾ ತಂಡಕ್ಕೆ ಕೂಡಾ 9 ಸಾವಿರ ರೂ.ಗಳನ್ನು ನೀಡಲಾಗುವುದು.
ಉತ್ತಮ ಹಾಡುಗಾರರಿಗೆ 2 ಸಾವಿರ ರೂ. ಹಾರ್ಮೋನಿಯಂ ವಾದಕರಿಗೆ 2 ಸಾವಿರ ರೂ, ಉತ್ತಮ ತಬಲಾವಾದಕರಿಗೆ 2 ಸಾವಿರ ರೂ, ಉತ್ತಮ ತಾಳವಾದಕರಿಗೆ 2ಸಾವಿರ ರೂ, ಉತ್ತಮ ಧÀಮಡಿ ವಾದಕರಿಗೆ 2 ಸಾವಿರ ರೂ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9620693060, 9880169881 ಅಥವಾ ಶ್ರೀಮಠದ ಟ್ರಸ್ಟ್ ಕಮೀಟಿಗೆ ಸಂಪರ್ಕಿಸಬಹುದು.
ಭಜನಾ ಸ್ಪರ್ಧೆಯಲ್ಲಿ 3 ಪದಗಳನ್ನು 18 ನಿಮಿಷದಲ್ಲಿ ಹಾಡುವುದು, ಸ್ಪರ್ಧೆಯ ನಿಯಮಾವಳಿಗಳಾಗಿವೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸಿದ್ಧರಾಮಪ್ಪ ಕೋಳಕೂರ, ಪೂಜೇರಿ ಸೇರಿದಂತೆ ಇನ್ನಿತರರು ಇದ್ದರು.