ಏಪ್ರಿಲ್ 1ರಂದು ಜೇವರಗಿ ಬಂದ್‍ಗೆ ಕರೆ

ಜೇವರಗಿ,ಮಾ 29: ನ್ಯಾ.ಸದಾಶಿವ ಆಯೋಗ ವರದಿ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದೆ.ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.ಏಕಾಏಕಿಯಾಗಿ ರಾಜ್ಯ ಸರ್ಕಾರ ಒಳ ಮೀಸಲಾತಿಗೆ,ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಖಂಡಿಸಿ,ಎಪ್ರಿಲ್ 1ರಂದು ಜೇವರ್ಗಿ ಬಂದ್ ಗೆ ಕರೆ ನೀಡಿದ್ದೇವೆ ಎಂದು ನ್ಯಾಮೂ.ಸದಾಶಿವ ಆಯೋಗ ವಿರೋಧಿ ಒಕ್ಕೂಟ ತಿಳಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ,ಮಾತನಾಡಿದ ಒಕ್ಕೂಟದ ಮುಖಂಡರು, ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದ್ದು ಅವೈಜ್ಞಾನಿಕ ಅದನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ವರದಿಯನ್ನು ಸಾರ್ವಜನಿಕ ಚರ್ಚೆಗೆ ಇಡದೆ,ಏಕಾಏಕಿ ಕೇಂದ್ರಕ್ಕೆ ಕಳುಹಿಸಿದ್ದು ಸರಿಯಲ್ಲ.ಅದರಲ್ಲೂ ಒಳ ಮೀಸಲಾತಿ ಘೋಷಿಸಿದ್ದು ಯಾವ ನ್ಯಾಯ. ಸ್ಪರ್ಷ ಹಾಗೂ ಅ ಸ್ಪರ್ಷ ಎಂದು ಹೇಳಿ,ಅದರಲ್ಲಿ ವಿಂಗಡಿಸಿ,ಎ ಬಿ ಸಿ ಡಿ ವರ್ಗೀಕರಣ ಮಾಡಿ ಶೇಕಡಾವಾರು ಮೀಸಲಾತಿ ನೀಡಿದ್ದು ಒಂದು ವ್ಯವಸ್ಥಿತ ತಂತ್ರಗಾರಿಕೆ ಎಂದು ಕಿಡಿ ಕಾರಿದರು. ನಮ್ಮ ಸಮಾಜಗಳ ಶಾಸಕರು,ಸಚಿವರು ಹಾಗೂ ಸಂಸದರು ಮತ್ತು ಮುಖ್ಯ ಮಂತ್ರಿಗಳ ಶವಯಾತ್ರೆಯನ್ನು ಮಾಡಿ, ಅವರುಗಳ ಪ್ರತಿಕೃತಿಯನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ದಹನ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ತಾಲೂಕು ಅಧ್ಯಕ್ಷ ಶರಣು ಗುತ್ತೆದಾರ, ರಮೇಶ್ ರಾಠೋಡ ರೇವನೂರ,ರವಿಚಂದ್ರ ಗುತ್ತೆದಾರ, ತುಳಜಾರಾಮ ರಾಠೋಡ ಹರವಾಳ,ತಿಪ್ಪಣ್ಣ ರಾಠೋಡ ಜೈನಾಪುರ,ಭೀಮಾಶಂಕರ ಕುರಡೆಕರ್,ಧನರಾಜ್ ರಾಠೋಡ ಮುತ್ತಕೋಡ, ಮಲ್ಲು ಬಜಂತ್ರಿ ಅವರಾದ,ಗುಂಡು ಗುತ್ತೆದಾರ, ಮಲ್ಲು ಹಿಪ್ಪರಗಿ, ಲಕ್ಷ್ಮಣ ಪವಾರ ಮಾವನೂರ,ಕೃಷ್ಣಾ ರಾಠೋಡ ಹರವಾಳ,ನಿಂಗಣ್ಣ ನೆಲೋಗಿ, ವಿರೇಶ ಲಿಂಗಸೂರ,ಗುಂಡಪ್ಪ ನಾಯ್ಕಲ್,ಶರಣು ಯಲಗೋಡ ಸೇರಿದಂತೆ ಇತರರು ಇದ್ದರು.