ಏಪ್ರಿಲ್ ೧೩ ರಿಂದ ನಾಮಪತ್ರ ಸಲ್ಲಿಕೆಗೆ ಪಾಲಿಕೆ ಕಚೇರಿಯಲ್ಲಿ ಎಲ್ಲ ಸಿದ್ಧತೆ

ದಾವಣಗೆರೆ; ಏ. 12;: ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಕೆ ಏಪ್ರಿಲ್ ೧೩ ರಂದು ಅಧಿಸೂಚನೆ ಪ್ರಕಟಿಸಲಾಗುವುದು. ಅಂದಿನಿAದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ.  ಮಹಾನಗರ ಪಾಲಿಕೆ ಕೊಠಡಿ ಸಂಖ್ಯೆ ೦೩ರಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಕೊಠಡಿ ಸಂಖ್ಯೆ ೧೦ರಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಕೆ.ಆರ್.ಶ್ರೀನಿವಾಸ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ ೧೩ ರಿಂದ ೨೦ ರವರೆಗೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದು ಎಂದರು.ದಿನಾAಕ ೨೧-೦೪-೨೦೨೩ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ದಿನಾಂಕ ೨೪-೦೪-೨೦೨೪ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ದಿನಾಂಕ ೧೦-೦೫-೨೦೨೩ ಬುಧವಾರ ಮತದಾನದ ಜರುಗಲಿದೆ. ದಿನಾಂಕ ೧೩-೦೫-೨೦೨೩ ಶನಿವಾರ  ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
 ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ೨೪೨ ಮತಗಟ್ಟೆಗಳನ್ನು ತೆರೆಯಲಾಗಿದ್ದು ಒಟ್ಟು ೨,೩೨,೦೧೪ ಮತದಾರರು ಹಾಗೂ ೪೬ ಸೈನಿಕ  ಮತದಾರರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ  ಕ್ಷೇತ್ರದಲ್ಲಿ ೨೧೨ ಮತ್ತು ಹೆಚ್ಚುವರಿಯಾಗಿ ೨ ಮತಗಟ್ಟೆಗಳನ್ನು ತೆರೆಯಲಾಗಿದ್ದು ಒಟ್ಟು ೨,೦೪,೪೪೨ ಮತದಾರರು  ಹಾಗೂ ೪೦ ಸೈನಿಕ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಅತಿಸೂಕ್ಷö್ಮ ಮತಗಟ್ಟೆಗಳಲ್ಲಿ  ಮೊಬೈಲ್ ಚಿತ್ರೀಕರಣದ ವ್ಯವಸ್ಥೆಯನ್ನು ಮಾಡಲಾಗಿದೆ. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಯುವಮತದಾರರಿಗೆ ಮತದಾನದ ಅರಿವು ನೀಡಲಾಗಿದೆ. ಫ್ಲೆಯಿಂಗ್ ಸ್ಕಾ÷್ವಡ್ಸ್ , ಚುನಾವಣಾ ವಿಚ್ಚ ತಂಡ, ವೇಡಿಯೋ ವೀಕ್ಷಣಾ ತಂಡಗಳನ್ನು ಚುರುಕುಗೊಳಿಸಲಾಗಿದೆ, ಸಾರ್ವಜನಿಕರು ಜಿಲ್ಲೆಯಲ್ಲಿ ಅಕ್ರಮಗಳೇನಾದರೂ ಕಂಡು ಬಂದಲ್ಲಿ ೦೮೧೯೨-೨೧೩೩೬೮ ಗೆ ಅಥವಾ ಸಹಾಯವಾಣಿ ಸಂಖ್ಯೆ ೧೯೫೦ ಗೆ ಕರೆ ಮಾಡಿ ಮಾಹಿತಿ/ದೂರು ಸಲ್ಲಿಸಬಹುದು ಹಾಗೂ ಸಿ-ವಿಜಲ್ ಆಪ್‌ನಲ್ಲಿ ದೂರು ದಾಖಲಿಸಬಹುದು. ಚುನಾವಣೆಗೆ ಸಂಬAಧಿಸಿದ ಮಾಹಿತಿ, ತಮ್ಮ ವಿವರಗಳ ಕುರಿತಂತೆ ಮೊಬೈಲ್‌ನ ಪ್ಲೇಸ್ಟೋರ್ ಆಪ್‌ನಲ್ಲಿ ವೋಟರ್ ಹೆಲ್ಪ್ಲೈನ್ ಆಪ್ ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿಕೊಂಡರು.
 ಮತದಾನ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಈ ಬಾರಿ ಮತಗಟ್ಟೆಗಳಲ್ಲಿ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಕೇವಲ ೬೫% ಮತದಾನವಿದ್ದು, ಇದನ್ನು ಹೆಚ್ಚಿಸಲು ಮತಗಟ್ಟೆ ಹಂತದ ಅಧಿಕಾರಿಗಳಿಂದ ಮತದಾನದ ಕುರಿತು ಅರಿವು ಮೂಡಿಸಲಾಗುತ್ತಿದೆ. ಮತದಾನದ ದಿನದಂದು ಮತಗಟ್ಟೆಗಳಲ್ಲಿ ಮತದಾರರಿಗೆ ನೀರು, ಶೌಚಾಲಯ, ಶಾಮಿಯಾನ, ಫ್ಯಾನ್ ಹಾಗೂ ವಿಶೇಷವಾಗಿ ವಿಶ್ರಾಂತಿ ಕೊಠಡಿಗಳನ್ನು ಒದಗಿಸಲಾಗುತ್ತದೆ ಇದೆಲ್ಲದರ ಮೂಲ ಉದ್ದೇಶ ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವುದಾಗಿದೆ ಎಂದು ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಾ ತಿಳಿಸಿದರು.
ಜಿಲ್ಲೆಯಲ್ಲಿ ಕೇವಲ ೬೫% ಮತದಾನವಿದ್ದು, ಇದನ್ನು ೭೫% ಗೆ ಹೆಚ್ಚಿಸಲು ಮತಗಟ್ಟೆ ಹಂತದ ಅಧಿಕಾರಿಗಳಿಂದ ಮತದಾನ ಜಾಗೃತಿ ಮೂಡಿಸಲು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿರುವ ಮನೆಗಳಿಗೆ ಹೋಗಿ ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಮತಪಟ್ಟಿಯಲ್ಲಿ ಮತದಾರರ ಹೆಸರು ಪರಿಶೀಲನೆ ಮಾಡಿಕೊಳ್ಳುವ,  ಮತಪಟ್ಟಿಯಲ್ಲಿ ಹೆಸರು ಇಲ್ಲವಾದಲ್ಲಿ ಹೆಸರು ನೋದಾಯಿಸಲು ಸೂಕ್ತ ಕ್ರಮ ಕೈಗೊಳ್ಳುವ ಹಾಗೂ ಮರಣ ಹೋದಿದವರ ಹೆಸರನ್ನು ತೆರವುಗೊಳಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಅಲ್ಲದೇ ಜಿಲ್ಲೆಯೆಲ್ಲೆಡೆ ಮತದಾನದ ಕುರಿತು ಜಾಥಾಗಳನ್ನು ಮಾಡಿದ್ದು, ಹಲವೆಡೆ ಮತದಾನ ಜಾಗೃತಿ ಕುರಿತು ಫ್ಲೆಕ್ಸ್ ಬಂಟಿAಗ್ಸ್ , ಬ್ಯಾನರ್‌ಗಳನ್ನು ಅಳವಡಿಸಲಾಗಿದೆ ಎಂದರು.