ಏಪ್ರಿಲ್ ದಲಿತ ಇತಿಹಾಸದ ತಿಂಗಳು : ಚೇತನ ಅಹಿಂಸಾ

ಜೇವರ್ಗಿ:ಮೇ.16: ಬುದ್ದ, ಬಸವ, ಡಾ. ಅಂಬೇಡ್ಕರ್, ಪೇರಿಯಾರ, ಫುಲೆ, ಕುವೇಂಪು ರವರ ಸಿದ್ದಾಂತ ಸಮಸಮಾಜ ಕಟ್ಟುವ ಸಿದ್ದಾಂತವಾಗಿದೆ. ಮಹಾನ ಮಾನವತವಾದಿಗಳ ಪುಸ್ಥಕಗಳನ್ನ ಓದುವುದರ ಮುಖಾಂತರ ಸಮಾಜಕ್ಕೆ ತಿಳಿಸಬೇಕು. ಏಪ್ರಿಲ್ ತಿಂಗಳು ಬಹಳ ಪ್ರಮುಕವಾದ ತಿಂಗಳು. ಈ ಏಪ್ರಿಲ್ ತಿಂಗಳನ್ನ ದಲಿತ ಇತಿಹಾಸದ ತಿಂಗಳು ಎಂದು ಪ್ರಗತಿಪರ ಚಿಂತಕರು ಹಾಗೂ ನಟರಾದ ಚೇತನ ಅಹಿಂಸಾ ಅಭಿಮತಪಟ್ಟರು.

ತಾಲೂಕಿನ ಜವಳಗ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡದಿ ಅವರು.

ಕಲಬುರಗಿಯಿಂದಲೆ ರಾಜಕೀಯ ಪರಿವರ್ತನೆಯಾಗಬೇಕು. ನಾವು ಜಾಗೃತರಾಗಲು ನಮ್ಮ ಇತಿಹಾಸವನ್ನು ನಾವು ಮೋದಲು ಅರಿಯಬೇಕು. ಅಂಬೇಡ್ಕರ್ ವಾದವನ್ನು ಜಾರಿ ತರಬೇಕು. ವ್ಯಕ್ತಿ ಆರಾಧನೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿರೋಧಿಸುತ್ತಿದ್ದರು, ಇಂದು ಅವರನ್ನೆ ಅನೇಕರು ವ್ಯಕ್ತಿಗತವಾಗಿ ಪುಜಿಸುತ್ತಿದ್ದಾರೆ. ವ್ಯಕ್ತಿಗತವಾಗಿ ಪೂಜಿಸಿದರೆ ಅವರ ಸಿದ್ದಾಂತ ಜಾರಿಯಾಗಲ್ಲ ಎಂಬುವುದನ್ನ ಅರಿಯಬೇಕು. ಬಾಬಾ ಸಾಹೇಬ್ ರವರ ಚಿಂತನೆಗಳನ್ನ, ಅವರ ಸಿದ್ದಾಂತಗಳನ್ನ ಹಾಗೂ ಅವರ ಸಮಾನತೆಯನ್ನ ಅನುಸರಿಸಿದಾಗ ಮಾತ್ರ ಅವರಿಗೆ ಗೌರವ ನೀಡಿದಂತೆ.

ಬುದ್ದ, ಬಸವ, ಡಾ. ಅಂಬೇಡ್ಕರ್, ಪೇರಿಯಾರ, ಫುಲೆ, ಕುವೇಂಪು ರವರ ಇತಿಹಾಸವನ್ನು ಅರಿಯಬೇಕು. ಅವರ ಸಮಸಮಾಜದ ಪರಿಕಲ್ಪನೆಯನ್ನು ನಾವು ತಿಳಿದಾಗ ಮಾತ್ರವೆ ಅವರನ್ನ ಪೂಜಿಸಲು ಯೋಗ್ಯರು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಲ್ಲರಿಗು ಸೇರಿದವರು ಎಂದು ಕೆಲವರು ಹೆಳುತ್ತಾರೆ. ಆದರೆ ನಿಜವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಮಾನತವಾದಿಗಳಿಗೆ ಸೇರಿದವರೆ ಹೋರೆತು ಮತ್ತಾರಿಗಲ್ಲ. ಬಾಬಾ ಸಾಹೇಬ್ ರವರ ವಿಚಾರಗಳನ್ನ ಮೈಗುಡಿಸಿಕೋಳ್ಳಬೇಕು. ಯುವಕರು ಓದಿನಕಡೆಗೆ ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪೂಜ್ಯ ಬಂತೇ ಸಮಣ ಹರಿಮನ್, ಡಾ. ಶಿವಾನಂದ ಮಹಾಸ್ವಾಮಿ, ಶ್ರೀ ಸಿದ್ದಬಸವ ಕಬಿರ ಮಹಸ್ವಾಮಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೊಳ, ಚಂದ್ರಶೇಖರ ಹರನಾಳ, ನಿಜಲಿಂಗ ದೊಡಮನಿ, ಲಕ್ಷ್ಮೀಕಾಂತ ಬರ್ಮಾ, ಶರಣಪ್ಪ ಬಡಿಗೇರ, ಡಾ. ಪ್ರಕಾಶ ಬಡಿಗೇರ, ಶಿವಪುತ್ರ ಜವಳಿ, ಹಯ್ಯಾಳಪ್ಪ ಗಂಗಾಕರ್, ಭಿಮರಾಯ ನಗನೂರ, ಮಲ್ಲಣ್ಣ ಕೊಡಚಿ, ಪುಂಡಲಿಕ ಗಾಯಕವಾಡ, ಶಾಂತಪ್ಪ ಭರ್ಮಾ, ಗೊಲ್ಲಾಳಪ್ಪ ಗೆಜ್ಜಿ, ನಿಸರ್ಘ ಕಟ್ಟಿಮನಿ, ರುದ್ರಣ್ಣ ಸಾಹು, ಸೈದಪ್ಪ ಕಟ್ಟಿಮನಿ, ನಿಂಗಣ್ಣ ಗುಗಿಹಾಳ, ಸುಭಾಷ ಆಲೂರ, ಸುನಿಲ ರಾಜಾಹುಲಿ, ಎಂಬಿ ಕಟ್ಟಿ, ಶಿವಪ್ಪ ಬಡಿಗೇರ, ಮಹೇಶ ಹುಲಿಮನಿ, ರಾಘವೇಂದ್ರ ಬಡಿಗೇರ, ರಮೇಶ ಬಡಿಗೇರ, ಶ್ರೀನಿವಾಸ ಹುಲಿಮನಿ, ಗುರುರಾಜ ಹೊಸಮನಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಬರ್ಮಾ ನಿರುಪಿಸಿದರು.