ಏಪ್ರಿಲ್ ಅಂತ್ಯಕ್ಕೆ ೧೬ ರಫೇಲ್ ವಾಯುಪಡೆಗೆ ಸೇರ್ಪಡೆ

ನವದೆಹಲಿ, ಅ.೨೮- ಭಾರತೀಯ ವಾಯುಸೇನೆಗೆ ೨೦೨೧ರ ಏಪ್ರಿಲ್ ಅಂತ್ಯದೊಳಗೆ ಇನ್ನೂ ೧೬ ರಫೆಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿದೆ.

ಈಗಾಗಲೇ ಐದು ರಫೆಲ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿದ್ದು ಇನ್ನೂ ೧೬ ರಫೆಲ್ ಯುದ್ಧ ವಿಮಾನಗಳು ಸೇರ್ಪಡೆಯಿಂದ ರಕ್ಷಣಾ ಬಲ ಮತ್ತಷ್ಟು ಹೆಚ್ಚಲಿದೆ.

ಗೋಲ್ಡನ್ ಆರೋಗೆ ೧೬ ಯುದ್ಧ ವಿಮಾನಗಳನ್ನು ಕಳುಹಿಸಲು ಫ್ರಾನ್ಸ್ ನ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಮುಂದಾಗಿದೆ.

ಜುಲೈ ೨೯ ಅಬುದಾಬಿ ಮಾರ್ಗವಾಗಿ ಹರಿಯಾಣದ ಅಂಬಾಲ ವಾಯುನೆಲೆಗೆ ಫ್ರಾನ್ಸ್ ನಿಂದ ಕಾಯ್ದುಕೊಂಡಿದ್ದ ವಿಮಾನಗಳು ಸೇರ್ಪಡೆಯಾಗಿದ್ದವು. ನವಂಬರ್ ೫ ರಂದು ಮತ್ತೆ ೩೪ ಯುದ್ಧವಿಮಾನಗಳು ಅಂಬಾಲ ವಾಯುನೆಲೆ ಗೆ ಬರಲಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಏಳು ರಫೇಲ್ ಯುದ್ಧ ವಿಮಾನಗಳ ಹಾರಾಟ ಕುರಿತಂತೆ ಭಾರತೀಯ ವಾಯುಪಡೆಯ ಟಾಯ್ಲೆಟ್ ಗಳಿಗೆ ಫ್ರಾನ್ಸ್ ನಲ್ಲಿ ತರಬೇತಿ ನೀಡಲಾಗಿದೆ.

ಜನವರಿಯಲ್ಲಿ ಮತ್ತೆ ಮೂರು, ರಫೇಲ್ ಯುದ್ಧವಿಮಾನಗಳು ಮಾರ್ಚಿನಲ್ಲಿ, ಮೂರು, ಏಪ್ರಿಲ್‌ನಲ್ಲಿ ಏಳು, ಯುದ್ಧವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಲಿವೆ. ಮುಂದಿನ ವರ್ಷ ಏಪ್ರಿಲ್ ಅಂತ್ಯದ ವೇಳೆಗೆ ಒಟ್ಟಾರೆ ೨೧ ರಫೇಲ್ ಯುದ್ಧವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದೆ ಎಂದು ತಿಳಿಸಲಾಗಿದೆ.

ಫ್ರಾನ್ಸ್‌ನ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ದೇಶಿಯವಾಗಿ ರಫೇಲ್ ಯುದ್ಧ ವಿಮಾನದ ಇಂಜಿನ್ ತಯಾರುಮಾಡಲು ಭಾರತ ಮತ್ತು ನಡುವೆ ಮಾತುಕತೆ ನಡೆದಿದೆ.