ಏಪ್ರಿಲ್‌ಗೆ ಲಸಿಕೆ : ಟ್ರಂಪ್ ಭರವಸೆ

ವಾಷಿಂಗ್ಟನ್, ನ.೧೪- ವಿಶ್ವದಲ್ಲಿ ಕೊರೋನಾ ಸೋಂಕಿಗೆ ಅತಿ ಹೆಚ್ಚು ಬಾಧಿತರಾಗಿರುವ ಅಮೆರಿಕದಲ್ಲಿ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಸಾಮಾನ್ಯ ಜನರಿಗೂ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಮೊದಲ ಹಂತದಲ್ಲಿ ಕೋರೋನಾ ಲಸಿಕೆ ಕೊರೋನಾ ಸೇನಾನಿಗಳು, ವೃದ್ಧರು ಹಾಗೂ ಅಗತ್ಯವಿರುವವರಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಇದೇ ಮೊದಲ ಬಾರಿಗೆ ಕೊರೋನೊ ಸೋಂಕಿನ ಲಸಿಕೆಯ ಕುರಿತು ಮಾತನಾಡಿರುವ ಅವರು ಫಿಫಿಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆ ಅಂತಿಮ ಹಂತದಲ್ಲಿದೆ ಅದು ಶೀಘ್ರವೇ ಲಭ್ಯವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
೫.೩೭ ಕೋಟಿ ಮಂದಿಗೆ ಸೋಂಕು:
ವಿಶ್ವದಲ್ಲಿ ಇದುವರೆಗೂ ೫ ಕೋಟಿ ೩೭ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದೆ ಈ ಪೈಕಿ ಅಮೆರಿಕವೊಂದರಲ್ಲೇ ೧ ಕೋಟಿ ೧೦ ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದೆ.
ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ೧ ಲಕ್ಷದ ೫೦ ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಚುನಾಯಿತ ಅಧ್ಯಕ್ಷ ಜೋ ಬೈಡನ್ ಜೊತೆಗೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರಕ್ಕೆ ಆತಂಕ ಸೃಷ್ಟಿ ಮಾಡಿದೆ. ಅಮೆರಿಕದಲ್ಲಿ ಇದುವರೆಗೂ ೨ ಲಕ್ಷ ೫೦ ಸಾವಿರ ಮಂದಿ ಸೊಂಕಿನಿಂದ ಮೃತಪಟ್ಟಿದ್ದಾರಡ.ಜೊತೆಗೆ ೬೭ ಲಕ್ಷದ ೮೯ ಸಾವಿರದ ೧೪೬ ಮಂದಿ ಚೇತರಿಸಿಕೊಂಡಿದ್ದಾರೆ.
ಅಮೆರಿಕಾ ಹೊರತುಪಡಿಸಿದರೆ ಭಾರತ ಸೋಂಕಿನಲ್ಲಿ ಎರಡನೇ ಸ್ಥಾನ ಹೊಂದಿದೆ. ದೇಶದಲ್ಲಿ ಇದುವರೆಗೂ ೮೭ ಲಕ್ಷದ ೭೩ ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದ್ದು ಈ ಪೈಕಿ ಒಂದು ಲಕ್ಷದ ೨೯ ಸಾವಿರ ಮಂದಿ ಮೃತಪಟ್ಟಿದ್ದಾರೆ. ಸೋಂಕಿನಿಂದಾಗಿ ೮೧ ಲಕ್ಷದ ೬೧ಸಾವಿರ ಮಂದಿ ಗುಣಮುಖರಾಗಿದ್ದಾರೆ
ಅಮೆರಿಕ-ಭಾರತ ಹೊರತುಪಡಿಸಿದರೆ ಬ್ರೆಜಿಲ್ನಲ್ಲಿ ೫೮ ಲಕ್ಷದ ೧೯ಸಾವಿರದ ೪೯೬, ಫ್ರಾನ್ಸ್ ನಲ್ಲಿ ೧೯ ಲಕ್ಷದ ೨೨ ಸಾವಿರದ ೫೦೪ ಹಾಗೂ ರಶಿಯಾದಲ್ಲಿ ೧೮ ಲಕ್ಷದ ಎಂಬತ್ತು ಸಾವಿರ ೫೫೧ ಪ್ರಕರಣಗಳು ದಾಖಲಾಗಿದೆ