ಏಪ್ರಿಲ್ನಲ್ಲಿ ಸೈನಿಕ ಶಾಲೆ ಪ್ರವೇಶ ಪ್ರಕ್ರಿಯೆ ಪ್ರಾರಂಭ

ಬೀದರ್:ಮಾ.22: ಎಚ್.ಕೆ.ಇ. ಸೊಸೈಟಿ ಸಂಚಾಲಿತ ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಆವರಣದಲ್ಲಿ ಇರುವ ನ್ಯಾಷನಲ್ ಇಂಗ್ಲಿμï ಮೀಡಿಯಂ ಪಬ್ಲಿಕ್ ಶಾಲೆಯಲ್ಲಿ ಏ. 1 ರಿಂದ ಸೈನಿಕ ಶಾಲೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಮರು ಆಯ್ಕೆಯಾದ ನೂತನ ಸದಸ್ಯ ಡಾ. ರಜನೀಶ್ ವಾಲಿ ಹೇಳಿದರು.
ಸತತ ಎರಡನೇ ಬಾರಿಗೆ ಎಚ್.ಕೆ.ಇ. ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳಿಂದ ನಗರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದ್ಯ ನ್ಯಾಷನಲ್ ಇಂಗ್ಲಿμï ಮೀಡಿಯಂ ಪಬ್ಲಿಕ್ ಶಾಲೆ ಕಟ್ಟಡದಲ್ಲೇ ಸೈನಿಕ ಶಾಲೆಯ ಆರನೇ ತರಗತಿ ಶುರುವಾಗಲಿದೆ. ಸದರಿ ಸೈನಿಕ ಶಾಲೆಗೆ 80 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇರಲಿದೆ ಎಂದು ತಿಳಿಸಿದರು.
ಎರಡು ವರ್ಷಗಳಲ್ಲಿ ಸೈನಿಕ ಶಾಲೆಯ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ. ರಕ್ಷಣಾ ಸಚಿವಾಲಯ ಹಾಗೂ ಸೈನಿಕ ಸೊಸೈಟಿ ನಿಯಮಾವಳಿ ಪ್ರಕಾರ ಎಲ್ಲ ಅಗತ್ಯ ಸೌಕರ್ಯಗಳನ್ನು ಹೊಂದಲಿದೆ ಎಂದು ಹೇಳಿದರು.
ನವದೆಹಲಿಯ ಸಿ.ಬಿ.ಎಸ್.ಇ. ಸಂಯೋಜನೆಯೊಂದಿಗೆ ನ್ಯಾಷನಲ್ ಇಂಗ್ಲಿμï ಮೀಡಿಯಂ ಪಬ್ಲಿಕ್ ಶಾಲೆ ಆರಂಭಿಸಲಾಗಿದೆ. ಶಾಲೆಯಲ್ಲಿ 746 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದರು.
ಬಿ.ವಿ. ಭೂಮರಡ್ಡಿ ಕಾಲೇಜು ಒಟ್ಟು 52 ಎಕರೆ ಜಮೀನು ಹೊಂದಿದ್ದು, ಈ ಪೈಕಿ ನಾಲ್ಕು ಎಕರೆ ಮಾತ್ರ ಕಾಲೇಜು ಹೆಸರಿನಲ್ಲಿ ಇತ್ತು. ಉಳಿದ 48 ಎಕರೆಗೆ ಸಂಬಂಧಿಸಿದಂತೆ ವ್ಯಾಜ್ಯಗಳು ನಡೆದಿದ್ದವು. ಅವೆಲ್ಲವುಗಳನ್ನೂ ಬಗೆಹರಿಸಲಾಗಿದೆ. ಎಲ್ಲ 52 ಎಕರೆ ಜಮೀನು ಬಿ.ವಿ. ಭೂಮರಡ್ಡಿ ಕಾಲೇಜು ಹೆಸರಲ್ಲೇ ಆಗಿದೆ. ಪಹಣಿಯಲ್ಲೂ ಬಂದಿದೆ ಎಂದು ಹೇಳಿದರು.
ಬೀದರ್ನಲ್ಲಿ ಸೈನಿಕ ಶಾಲೆ ಶಂಕುಸ್ಥಾಪನೆ, ನ್ಯಾಷನಲ್ ಇಂಗ್ಲಿμï ಮೀಡಿಯಂ ಪಬ್ಲಿಕ್ ಶಾಲೆ ಆರಂಭ ಹಾಗೂ 52 ಎಕರೆ ಜಮೀನು
ಪಹಣಿಯಲ್ಲಿ ಬಿ.ವಿ.ಭೂಮರಡ್ಡಿ ಕಾಲೇಜು ಹೆಸರಲ್ಲೇ ಮಾಡಿಸಿರುವುದು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯನಾಗಿ ಮೂರು ವರ್ಷಗಳ ಅವಧಿಯಲ್ಲಿ ನಾನು ಮಾಡಿದ ಪ್ರಮುಖ ಸಾಧನೆಗಳು ಎಂದು ನುಡಿದರು.
ಬರುವ ದಿನಗಳಲ್ಲಿ ಸಂಸ್ಥೆಯ ಸಂಚಾಲಿತ ಎಲ್ಲ ಶಾಲಾ ಕಾಲೇಜುಗಳನ್ನು ನಂಬರ್ ಒನ್ ಮಾಡುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಜಿ.ಎನ್. ಮಲ್ಟಿ ಸೂಪರ್ ಸ್ಪೆμÁಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಬೀದರ್ ವಿಶ್ವವಿದ್ಯಾಲಯದ ಡೀನ್ ಡಾ. ಜಗನ್ನಾಥ ಹೆಬ್ಬಾಳೆ, ಕಲ್ಯಾಣ ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಪ್ರಮುಖರಾದ ರಾಜಕುಮಾರ ಹೆಬ್ಬಾಳೆ, ವಿರೂಪಾಕ್ಷ ಗಾದಗಿ ಮತ್ತಿತರರು ರಜನೀಶ್ ವಾಲಿ ಅವರಿಗೆ ಹೂಗುಚ್ಚ ನೀಡಿ, ಶಾಲು ಹೊದಿಸಿ ಸತ್ಕರಿಸಿದರು.


ಮತದಾರರ ಆಶೀರ್ವಾದದಿಂದ ಸತತ ಎರಡನೇ ಬಾರಿಗೆ ಎಚ್.ಕೆ.ಇ. ಸಂಸ್ಥೆ ಆಡಳಿತ ಮಂಡಳಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಲಿದ್ದೇನೆ.
ಡಾ. ರಜನೀಶ್ ವಾಲಿ
ಎಚ್.ಕೆ.ಇ. ಸೊಸೈಟಿ ನೂತನ ಆಡಳಿತ ಮಂಡಳಿ ಸದಸ್ಯ