ಏಪ್ರಿಲ್‌ನಲ್ಲಿ ಪಾಕ್ ಸಂಸತ್ತಿಗೆ ಚುನಾವಣೆ: ಇಮ್ರಾನ್

ಇಸ್ಲಾಮಾಬಾದ್, ಜ. ೧೯- ಪಾಕಿಸ್ತಾನದ ಹೊಸ ಸೇನಾ ನಾಯಕತ್ವದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ -ಪಿಟಿಐ ಅಧ್ಯಕ್ಷ ಹಾಗು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅವರೊಂದಿಗೆ ಯಾವುದೇ ರಾಜಕೀಯ ಸ್ನೇಹ ಸಂಬಂಧವಿಲ್ಲ ಎಂದಿದ್ದಾರೆ.
೨೦೨೩ ರ ಏಪ್ರಿಲ್ ನಲ್ಲಿ ಪಾಕಿಸ್ತಾನದ ಸಂಸತ್ ಗೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಎಂದು ಹೇಳಿದ್ದಾರೆ.
ಪ್ರಸ್ತುತ ಪಾಕಿಸ್ತಾನ ಸರ್ಕಾರಕ್ಕೆ ದೇಶವನ್ನು ಆಳಲು ಸಹಾಯ ಮಾಡಿದ್ದಕ್ಕಾಗಿ ಮಾಜಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ಕಮರ್ ಜಾವೇದ್ ಬಾಜ್ವಾ ಅವರನ್ನು ದೂಷಿಸಿದ ಅವರು, ಈಗ ಸರ್ಕಾರ ಏಪ್ರಿಲ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಒತ್ತಾಯಿಸಲಾಗಿದೆ ಎಂದಿದ್ದಾರೆ.
ಆರ್ಥಿಕ ದುಸ್ತಿಗೆ ಸರ್ಕಾರ ಕಾರಣ:
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿಗೆ ಹಾಲಿ ಸರ್ಕಾರವೇ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದ ಅವರು ಪಾಕಿಸ್ತಾನದ ಆರ್ಥಿಕ ಸ್ಥಿತಿ ಎಂದಿಗೂ ಹೀಗಿರಲಿಲ್ಲ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಯೊಂದೇ ಈ ಸಮಸ್ಯೆಗಳಿಗೆ ಪರಿಹಾರ ಎಂದು ಒತ್ತಿ ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದಾಗ ೧,೧೦೦ ಶತಕೋಟಿ ಮೌಲ್ಯದ ಭ್ರಷ್ಟಾಚಾರ ಪ್ರಕರಣ ಕೊನೆಗೊಳಿಸಿ ಎಂದು ಅವರು ಹೇಳಿದ ಅವರು ಪಾಕಿಸ್ತಾನದ ಸದ್ಯದ ಆರ್ಥಿಕ ಸ್ಥಿತಿಗತಿ ಅಧೋಗತಿಯಾಗಿದೆ ಎಂದಿದ್ದಾರೆ
ಪ್ರಸ್ತುತ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಕುದುರೆ ವ್ಯಾಪಾರದ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದ್ದಾರೆ.
ಸಮ್ಮಿಶ್ರ ಆಡಳಿತಗಾರರು ತಮ್ಮನ್ನು ಕಾನೂನಿನ ಹಿಡಿತದಲ್ಲಿ ಸಿಲುಕಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದ ಅವರು ವರ್ಷಗಳ ಹಿಂದೆ ಅವರು ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣಗಳನ್ನು ಕೊನೆಗೊಳಿದ್ದಾರೆ ಎಂದರು.
“ಶೆಹಬಾಜ್ ಷರೀಫ್, ನವಾಜ್ ಷರೀಫ್, ಆಸಿಫ್ ಜರ್ದಾರಿ ಮತ್ತು ಮರ್ಯಮ್ ನವಾಜ್, ಅವರ ಎಲ್ಲಾ ಪ್ರಕರಣಗಳನ್ನು ಬಿಡಲಾಗಿದೆ ಎಂದು ದೂರಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯತ್ತ ಸಾಗಲು ಪಿಟಿಐ ಎರಡು ಅಸೆಂಬ್ಲಿಗಳಾದ ಖೈಬರ್ ಪಖ್ತುಂಖ್ವಾ ಮತ್ತು ಪಂಜಾಬ್ ಅನ್ನು ತ್ಯಾಗ ಮಾಡಿದೆ ಎಂದು ಹೇಳಿದ್ದಾರೆ.
ಯಾವುದೇ ಹೂಡಿಕೆದಾರ ಅಥವಾ ಉದ್ಯಮಿ ಸರ್ಕಾರವನ್ನು ನಂಬದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶಿ ಹೂಡಿಕೆದಾರರೂ ನಂಬುವುದಿಲ್ಲ ಎಂದು ಅವರು ತಿಳಿದ್ದಾರೆ.
“ಪಾಕಿಸ್ತಾನ ಕೆಸರುಗದ್ದೆಯಲ್ಲಿ ಮುಳುಗಿದೆ. ಶ್ರೀಲಂಕಾದಂತಹ ಪರಿಸ್ಥಿತಿಯಿಂದ ದೇಶವನ್ನು ಉಳಿಸಲು ನಮಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಅಗತ್ಯವಿದೆ” ಎಂದು ಹೇಳಿದ್ದಾರೆ.