
ಪ್ರತಿಭಾನ್ವಿತ ನಟಿ ಅಧ್ವಿತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿರುವ “ ಧೀರ ಸಾಮ್ರಾಟ” ಚಿತ್ರದ ಟಪ್ಪಾಂಗುಚ್ಚಿ ಹಾಡು ‘ಏನ್ ಚಂದ ಕಾಣಿಸ್ತಾವಳೆ’ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಾಡು ಬಿಡುಗಡೆಯಾಗಿದ್ದು ನಟ ಧೃವ ಸರ್ಜಾ ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು. ಹಾಡಿನಲ್ಲಿ ಅಧ್ವಿತಿ ಶೆಟ್ಟಿ ಮತ್ತು ನಟ ರಾಕೇಶ್ ಹೆಜ್ಜೆ ಹಾಕಿದ್ದಾರೆ. ಈ ಹಾಡು ಗಮನ ಸೆಳೆಯಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಪವನ್ ಕುಮಾರ್, ಮೊದಲ ಬಾರಿಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಚಿತ್ರದ ಮುಹೂರ್ತಕ್ಕೂ ಬಂದು ಹರಿಸಿದ್ದ ನಟ ಧೃವ ಸರ್ಜಾ ಚಿತ್ರದ ಹಾಡು ಬಿಡುಗಡೆ ಮಾಡಿ ಬೆನ್ನೆಲುಬಾಗಿ ನಿಂತಿದ್ದಾರೆ. ಕಿರುಚಿತ್ರ ಮಾಡಿಕೊಂಡಿದ್ದ ನನಗೆ ನಿರ್ಮಾಪಕ ಗುರು ಬಂಡಿ ಸಾಥ್ ನೀಡಿದರು ಹಾಗಾಗಿ “ಧೀರ ಸಾಮ್ರಾಟ್” ಚಿತ್ರ ಸಿದ್ದವಾಗಿದೆ ಎಂದರು.
ಚಿತ್ರದ ಮೂಲಕ ಸ್ನೇಹದ ಮಹತ್ವವನ್ನು ಸಾರುವ ಪ್ರಯತ್ನ ಮಾಡಲಾಗಿದೆ. ಐವರು ಧೀರ ಹುಡುಗರ ಸ್ನೇಹದ ಬಗ್ಗೆ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಆದರೂ ಇಡೀ ಕುಟುಂಬ ಕುಳಿತು ನೋಡಬಹುದಾದ ಸಿನಿಮಾ ಇದು. ಚಿತ್ರದಲ್ಲಿ ನಟ ರಾಕೇಶ್, ನಟಿಯರಾದ ಅಧ್ವಿತಿ ಶೆಟ್ಟಿ ಮತ್ತು ಸಕಲ್ಪ್ ಪಾಟೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಹಂಚಿಕೊಂಡರು.
ಕೊನೆತನಕ ಕುತೂಹಲ ಕಾಯ್ದರಿಸಿದ್ದು, ಕ್ಲೈಮಾಕ್ಸ್‍ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಒಂದು ಏಳೆ ಬಿಟ್ಟುಕೊಟ್ಟರೂ ಸಿನಿಮಾದ ಸಾರಾಂಶ ತಿಳಿಯುತ್ತದೆ.ಸಮಾಜದಲ್ಲಿ ಯಾವುದೋ ಒಂದು ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ ಎಂದರು.
ನಿರ್ಮಾಪಕ ಗುರು ಬಂಡಿ ಮಾತನಾಡಿ, ಧೀರ ಸಾಮ್ರಾಟ್ ಅಂದರೆ ಏನು ಯಾತಕ್ಕೆ ಇಡಲಾಗಿದೆ. ಕೊನೆಯಲ್ಲಿ ಧೀರ ಸಾಮ್ರಾಟ್ ಯಾರು ಎಂಬುದು ತಿಳಿಯಲಿದೆ ಎಂದು ಹೇಳಿದರು.
ನಾಯಕಿ ಅದ್ವಿತಿಶೆಟ್ಟಿ ಹಾಗು ನಾಯಕ ರಾಕೇಶ್‍ಬಿರಾದಾರ್, ಚಿತ್ರದಲ್ಲಿ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರ ನೋಡಿ ಹರಸಿ ಎಂದು ಕೇಳಿಕೊಂಡರು.
ಚಿತ್ರದ ತಾರಾಗಣದಲ್ಲಿ ಶೋಭರಾಜ್, ನಾಗೇಂದ್ರ ಅರಸು, ಬಲರಾಜವಾಡಿ, ರಮೇಶ್‍ಭಟ್, ಯತಿರಾಜ್, ಮನಮೋಹನ್‍ರೈ, ಇಂಚರ, ,ರವಿರಾಜ್, ಜ್ಯೋತಿಮರೂರು, ಶಂಕರ್‍ಭಟ್, ಮಂಡ್ಯಾಚಂದ್ರು, ಗಿರಿಗೌಡ, ಪ್ರೇಮ, ಹರೀಶ್‍ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ಭರ್ಜರಿಚೇತನ್, ಡಾ.ಎನ್.ನಾಗೇಂದ್ರಪ್ರಸಾದ್ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ರಾಘವ್‍ಸುಭಾಷ್ ಸಂಗೀತ ವೀರೇಶ್ ಛಾಯಾಗ್ರಹಣವಿದೆ. ಬೆಂಗಳೂರು, ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.