ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ನ.08: ಪಟ್ಟಣದ ‌ಹಂಸನಾಳ್ ಹಳ್ಳದಿಂದ ತೆಕ್ಕಲಕೋಟೆ ಪಟ್ಟಣದ ರೈತರ ಜಮೀನುಗಳಿಗೆ  ಏತ  ನೀರಾವರಿ ಯೋಜನೆ ಮೂಲಕ ನೀರಾವರಿಯ ಸೌಲಭ್ಯವನ್ನು‌ ರೈತರಿಗೆ ಒದಗಿಸಲು‌ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಬಳ್ಳಾರಿ, ಅಭಿವೃದ್ಧಿ ಯೋಜನೆಯಡಿ 80 ಲಕ್ಷ ರೂಪಾಯಿ  ವೆಚ್ಚದಲ್ಲಿ ಪಟ್ಟಣದ ರೈತರ ಭೂಮಿಗಳಿಗೆ ಏತ ನೀರಾವರಿ ಯೋಜನೆ ಹಾಗೂ  ಪಟ್ಟಣದ ‌ನಡವಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಯೋಜನೆಯಡಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಡವಿ ಮತ್ತು ಸಿರಿಗೇರಿ ಗ್ರಾಮದ ರೈತರ ಭೂಮಿಗಳಿಗೆ ಏತ ನೀರಾವರಿ ಯೋಜನೆಗೆ‌ ಶಾಸಕ ಎಂ.ಎಸ್.ಸೋಮಲಿಂಗಪ್ಪ ಭೂಮಿ ಪೂಜೆಯನ್ನು ನೆರವೇರಿಸಿದರು.
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ರೈತರು ಇದ್ದರು