ಏತ ನೀರಾವರಿ ಮೂಲಕ ಕಾಲುವೆ ನೀರು ಬಿಡುಗಡೆಗೆ ಸೂಚನೆ : ಸಚಿವ ಪಾಟೀಲ

ಕಾಗವಾಡ,ಮೇ29: ಬೇಸಿಗೆಯ ಕಾಲದಲ್ಲಿ ಜನ ಹಾಗೂ ಜಾನುವಾರುಗಳಿಗೆ ಮತ್ತು ರೈತರ ಬೆಳೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಚಿವ ಶ್ರೀಮಂತ ಪಾಟೀಲರು ರೈತಪರ ಕಾಳಜಿಯನ್ನಿಟ್ಟುಕೊಂಡು ಅವಧಿ ಪೂರ್ವದಲ್ಲಿಯೇ ಕೃಷ್ಣಾ ನದಿಯಿಂದ ಕಾಲುವೆಗೆ ನೀರು ಹರಿಸಿರುವು ಸಂತಸ ತಂದಿದೆ ಎಂದು ವೈದ್ಯರಾದ ಡಾ. ಆನಂದ ಮುತಾಲಿಕ ಮಾತನಾಡಿದರು.
ದಿ.27 ರಂದು ಐನಾಪುರ ದಿ, 28 ರಂದು ಮಂಗಸೂಳಿ ಏತ ನೀರಾವರಿ ಯೋಜನೆಯ ಮೊದಲನೇ ಹಂತದಿಂದ ಕಾಲುವೆಗೆ ನೀರು ಬಿಡುಗಡೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷ ಜೂನ ಇಲ್ಲವೇ ಜುಲೈ ತಿಂಗಳಲ್ಲಿ ಪ್ರಾರಂಭವಾಗುತ್ತಿದ್ದ ನೀರು ಬಿಡುಗಡೆ ಈ ವರ್ಷ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆಯ ಸಚಿವರಾದ ಶ್ರೀಮಂತ ಪಾಟೀಲರು ಜನಪರ ಕಾಳಜಿಯನ್ನಿಟ್ಟುಕೊಂಡು ಅವಧಿ ಪೂರ್ವದಲ್ಲಿ ನೀರು ಬಿಡುಗಡೆಗೊಳಿಸಿರುವುದು ಸಂತಸ ತಂದಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೇಂದು ಡಾ, ಆನಂದ ಮುತಾಲಿಕ ಹೇಳಿದರು.
ಸಚಿವರಾದ ಶ್ರೀಮಂತ ಪಾಟೀಲರ ವಿಶೇಷ ಪ್ರಯತ್ನದಿಂದ ಬಸವೇಶ್ವರ ಏತ ನೀರಾವರಿ ಯೋಜನೆ ಮುಕ್ತಾಯದ ಹಂತಕ್ಕೆ ಬಂದಿದ್ದು ಬರುವ ಕೆಲ ದಿನಗಳಲ್ಲಿ ಪ್ರಾರಂಬವಾಗಲಿದೆ. ಇದರಿಂದ ಉತ್ತರ ಭಾಗದ 22 ಹಳ್ಳಿಗಳಿಗೆ 27,462 ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಇದರಿಂದ ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಕೆ.ರವಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೆÇದ್ದಾರ, ಪಟ್ಟಣ ಪಂಚಾಯತ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ರೈತಪರ ಮುಖಂಡರಾದ ದಾದಾ ಪಾಟೀಲ ಮೋಹನ ಮುತಾಲಿಕ, ಡಾ.ಮೋಹನರಾವ್ ಕಾರ್ಚಿ, ಸುನೀಲ ಮಾಳಿ ಸಚಿವರ ಆಪ್ತ ಸಹಾಯಕರಾದ ಪ್ರಶಾಂತ ಅಪರಾಜ, ಸಚೀನ ದೇಶಾಯಿ, ರಾಜು ಮಾನೆ ಮುಖಂಡರಾದ ಮುರಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಸು ಪಾಟೀಲ, ಶಿದರಾಯ ಕಾಳೇಲಿ, ರಾಜು ಮದನೆ, ರತನ ಪಾಟೀಲ, ಶಾಂತಿನಾಥ ಮಾಲಗಾಂವೆ, ದುಂಡಪ್ಪ ತುಗಶೆಟ್ಟಿ, ಪಿಂಟು ಮುಂಜೆ, ಏಕನಾಥ ಕಾಳೇಲಿ, ಅಜೀತ ಚಿಪ್ಪರಗಿ, ಸೇರಿದಂತೆ ಅನೇಕರು ಇದ್ದರು.