ಏತ ನೀರಾವರಿ ಕಾಮಗಾರಿ ಪ್ರಾರಂಭಿಸಲು ಸೂಚನೆ


ಸಂಜೆವಾಣಿ ವಾರ್ತೆ
ಕಾರಟಗಿ, ಫೆ.06:  ಸೋಮವಾರದಂದು ಶಿವರಾಜ್ ತಂಗಡಗಿ ಅವರು ಇಂದು ಏತ ನೀರಾವರಿ ಕಾಮಗಾರಿ ೩೧/೪ ಮತ್ತು ೩೧/೮ ವಿತರಣೆ ನಾಲೆ,ಮತ್ತು ಉಳೇನೂರು ಗ್ರಾಮದ ತುಂಗಭದ್ರಾ ನದಿ ಹತ್ತಿರದ ಪಂಪೌಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಿ, ಆದಷ್ಟು ಬೇಗನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುನಿರಬಾದ್ ಕಚೇರಿಯ ಸಹಾಯ ಕಾರ್ಯಪಾಲಕ ಅಭಿಯಂತರರಾದ ಜಾನೆಕರ್, ಕಾರಟಗಿ ಎಇಇ ನಾಗಪ್ಪ, ಸಹಾಯಕ ಇಂಜಿನಿಯರ್ ಕಿರಣ್ ಕುಮಾರ್, ಮುಖಂಡರಾದ  ಶರಣೇಗೌಡ ಬೂದಗುಂಪಾ, ವಿಜಯ ಕುಮಾರ ಕೋಲ್ಕಾರ, ಪರಮೇಶಪ್ಪ ಕ್ವಂತನೂರು, ತಿಮ್ಮಣ್ಣ ಹಾಲಸಮುದ್ರ,  ಶಿವಶರಣ ಸಿಂಗಾಪುರ, ಸೋಮಶೇಖರ್ ಕೋಲ್ಕಾರ್, ಸೇರಿದಂತೆ ಇತರರು ಇದ್ದರು,