ಏತ ನೀರಾವರಿ,ಬಿಟಿ ರಸ್ತೆ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ಗೆ ಭದ್ರ ಬುನಾದಿ ಹಾಕಿದ ಮೋತಕಪಲ್ಲಿ ಇನ್ನಿಲ್ಲ

ಸೇಡಂ,ಜ,05: ತಾಲೂಕಿನ ಮಾಜಿ ಶಾಸಕರು ರಾಜಕೀಯ ಮುತ್ಸದ್ದಿ, ಏತ ನೀರಾವರಿ ಬ್ರೀಜ್ ಕಂ ಬ್ಯಾರೇಜ್ ಮತ್ತು ಬಿಟಿ ರಸ್ತೆಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸರ್ಕಾರಿ ಆಸ್ಪತ್ರೆ ಮುಂತಾದವುಗಳಿಗೆ ತನ್ನ ಅಧಿಕಾರವಧಿಯಲ್ಲಿ ತಾಲೂಕಿನಾದ್ಯಂತ ಚಾಲನೆ ನೀಡಿದ ಹರಿಕಾರ ಶ್ರೀಯುತ ಬಸವಂತರೆಡ್ಡಿ ಪಾಟೀಲ್ ಮೋತಕಪಲ್ಲಿ ನಿನ್ನೆ ರಾತ್ರಿ 11:30ಗೆ ಅನಾರೋಗ್ಯದಿಂದ ಅಸ್ತಂಗತರಾಗಿದ್ದಾರೆ. ಅವರು 1978 ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.ನಂತರ ವೀರೇಂದ್ರ ಪಾಟೀಲರ ಅನುಯಾಯಿಯಾಗಿ 1988 ರಲ್ಲಿ ಮುಧೋಳ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದರು.ನಂತರ 1989 ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಚಂದ್ರಶೇಖರ್ ರೆಡ್ಡಿ ದೇಶಮುಖ್ ವಿರುದ್ಧ ಜಯಶಾಲಿಗಳಾದರು. ನಂತರ ಸೇಡಂ ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟರು. ಇವರ ಅವಧಿಯಲ್ಲಿ ಏತ ನೀರಾವರಿ,ಬಿಟಿ ರಸ್ತೆ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ಗೆ ಭದ್ರ ಬುನಾದಿ ಹಾಕಿ ತಾಲೂಕಿನಾದ್ಯಂತ ಚಾಲನೆ ನೀಡಿದರು. ಆಸ್ಪತ್ರೆಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿದರು.ನಂತರ 1994 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ
ಚಂದ್ರಶೇಖರ್ ರೆಡ್ಡಿ ದೇಶಮುಖ್ ರ ವಿರುದ್ಧ ಪರಾಭಾವಗೊಂಡರು.1999 ರಲ್ಲಿ ಮತ್ತೆ ಅವರ ವಿರುದ್ಧ ಜಯಶಾಲಿಗಳಾದರು.1999 ರ ನಂತರ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಗಳಿಗೆ ಚಾಲನೆ ನೀಡಿದರು.2004 ರಲ್ಲಿ ಶ್ರೀಯುತರು ಹ್ರುದಯ ಕಾಯಿಲೆಯಿಂದ ಬಳಲಿದ ಕಾರಣ ಡಾ. ಶರಣುಪ್ರಕಾಶ್ ಪಾಟೀಲರಿಗೆ ಕ್ಷೇತ್ರದ ಕಾಂಗ್ರೆಸ್ ಸ್ಥಾನವನ್ನು ನೀಡಿದರು ಇವರಿಗೆ ಒಬ್ಬ ಮಗ,ಒಬ್ಬ ಮಗಳು ಹಾಗೂ ಆರು ಜನ ಮೊಮಕ್ಕಳು ಇದ್ದಾರೆ