ಏಣಕುರ: ಕೂಲಿ ಕಾರ್ಮಿಕರಿಗೆ ಮಾಸ್ಕ, ಸ್ಯಾನಿಟೈನಿಜರ್ ವಿತರಣೆ

ಭಾಲ್ಕಿ:ಜೂ.3: ತಾಲೂಕಿನ ಏಣಕೂರ ಗ್ರಾಮದಲ್ಲಿ ಅನೇಕ ಬಡ ನಿರುದ್ಯೋಗಿ ಕಾರ್ಮಿಕರಿಗೆ ಕರೋನಾ ಮಹಾಮಾರಿ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಇಲ್ಲದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದಂತೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 200 ಕೂಲಿ ಕಾರ್ಮಿಕರಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಭಂಗಾರೆ ಕೆಲಸ ನೀಡಿದರು
ಈ ಸಂದರ್ಭದಲ್ಲಿ 200 ಕೂಲಿ ಕಾರ್ಮಿಕರಿಗೆ ಮಾಸ್ಕ ಮತ್ತು ಸ್ಯಾನಿಟೈನಿಜರ್ ನೀಡುವ ಮೂಲಕ ಕೊವಿಡ ನಿಯಮದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡುವಂತೆ ಸಲಹೆ ನೀಡುವ ಮೂಲಕ ಚಾಲನೆ ನೀಡಿದರು.
ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ತಮ್ಮ ತಮ್ಮ ಗ್ರಾಮಗಳಲ್ಲಿ ಕೆಲಸ ಮಾಡುವುದರಿಂದ ಗ್ರಾಮದ ಜನರು ಗೂಳೆ ಹೊಗುವುದನ್ನು ತಪ್ಪಿಸಬಹುದು ಎಂದರು.
ಗ್ರಾಮದ 45 ವರ್ಷಗಳ ವಯಸ್ಸಿನ ಮೇಲ್ಪಟ್ಟ ಎಲ್ಲ ನಾಗರಿಕರು ಯಾವುದೇ ಆತಂಕ ಇಲ್ಲದೆ ವ್ಯಾಕ್ಸಿನೇಷನ್ ಹಾಕಿಕೊಳ್ಳುಬೇಕು ವ್ಯಾಕ್ಸಿನೇಷನ್ ಹಾಕಿಕೊಳ್ಳುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ತಮ್ಮಲ್ಲರ ಸಹಕಾರ ಅಗತ್ಯವಾಗಿದೆ ಅಷ್ಟೇ ಅಲ್ಲ ತಾವೂ ಸಹ ಕರೋನ ಮಹಾಮಾರಿ ರೋಗದಿಂದ ಮುಕ್ತರಾಗಬೇಕಾದರೆ ಗ್ರಾಮದ 45 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ತಮ್ಮ ಗ್ರಾಮದಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್ ಮಾಡಲಾಗುತ್ತಿದ್ದು ತಪ್ಪದೆ ಎಲ್ಲರೂ ಭಯ ಮತ್ತು ಯಾವುದೇ ರೀತಿಯ ಆಂತಕ ಪಡದೆ ವ್ಯಾಕ್ಸಿನೇಷನ್ ಹಾಕಿಕೊಳ್ಳುವ ಮೂಲಕ ತಮ್ಮ ಗ್ರಾಮವನ್ನು ಕರೋನ ಮಹಾಮಾರಿ ರೋಗದಿಂದ ಮುಕ್ತ ಗ್ರಾಮ ವನ್ನಾಗಿ ಮಾಡಬೇಕು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ಶಾಂತಮ್ಮಾ ಹಣಮಂತ ವಾಗರಾಜ, ಉಪಾಧ್ಯಕ್ಷ ಪ್ರದೀಪ್ ಬಿರಾದಾರ, ಸದಸ್ಯರಾದ ಅನೀಲ ಸಜ್ಜನಶೇಟ್ಟಿ, ಶಿವಕುಮಾರ್ ಕಾಮಣ್ಣ, ರಮೇಶ್ ಆರಾದೆ, ಇಂದುಮತಿ ಕಿಶನ್, ಏಂಕಮ್ಮಾ ತೇಲಂಗ್,ಹಾಗೂ ಇತರರು ಉಪಸ್ಥಿತರಿದ್ದರು.