ಏಡ್ಸ್ ರೋಗದ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸುವುದು ಅಗತ್ಯ

ಸಂಜೆವಾಣಿ ವಾರ್ತೆ
ಔರಾದ್:ಫೆ.3: ಯುವ ಜನಾಂಗ ಎಚ್‍ಐವಿ-ಏಡ್ಸ್‍ನಂತಹ ಭೀಕರ ರೋಗದ ಬಗ್ಗೆ ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ಪುಷ್ಪಾಂಜಲಿ ಎಮ್. ಪಾಟೀಲ ತಿಳಿಸಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಏಡ್ಸ್ ಪ್ರೀವೆನ್ಛನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಬೀದರ್, ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ಔರಾದ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 1988ರಲ್ಲಿ ಮೊದಲ ಬಾರಿಗೆ ಚನ್ನೈ ಆಸ್ಪತ್ರೆಯಲ್ಲಿ ಎಚ್‍ಐವಿ ಸೋಂಕು ಕಾಣಿ ಸಿಕೊಂಡಿತು. ನಂತರ ಇತರೆ ರಾಷ್ಟ್ರಗಳಲ್ಲಿ ಈ ಸೋಂಕು ಇದೆಯೇ ಎಂಬ ಅನ್ವೇಷಣೆ ಪ್ರಾರಂಭವಾಯಿತು. ಪ್ರಸ್ತುತ ಮಲೆನಾಡಿನಂತಹ ಗ್ರಾಮೀಣ ಪ್ರದೇಶ ದಲ್ಲೂ ಇಂದು ಹರಡಿದ್ದು, ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಕ್ಷಣಿಕ ಸುಖದ ಆಸೆಗಾಗಿ ತಮ್ಮ ಉಜ್ವಲ ಭವಿಷ್ಯವನ್ನು ಬಲಿ ಕೊಡುವುದು ಬೇಡ. ವಿದ್ಯಾರ್ಥಿ ದಿಶೆಯಲ್ಲಿಯೇ ಉತ್ತಮ ಗುರಿಯನ್ನು ಇಟ್ಟುಕೊಂಡು ಗುರಿ ಸಾಧನೆಗೆ ಹೆಚ್ಚು ಒತ್ತು ನೀಡಿ, ಸಮಾಜಕ್ಕೆ ಆದರ್ಶವಾಗಬೇಕು ಎಂದು ತಿಳಿಸಿದರು. ಎಚ್‍ಐವಿ ಸೋಂಕು ಯುವ ಜನಾಂಗದಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು. ಏಡ್ಸ್ ರೋಗ ಹರಡುವ ವಿಧಾನ ಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಚಿಂತಕ ರಿಯಾಜಪಾಶಾ ಕೊಳ್ಳೂರ ಮಾತನಾಡಿ, ಯುವ ಜನತೆ ಮೊಬೈಲ್ ಫೆÇೀನ್ ಬಳಕೆಗೆ ಇತಿಮಿತಿಗಳಿರಲಿ. ಶುದ್ದವಾದ ನಡವಳಿಕೆ ಇದ್ದರೆ ಇಂತಹ ಕಾಯಿಲೆ ಯಿಂದ ದೂರವಿರುವುದು ಕಷ್ಟದ ಕೆಲಸವಲ್ಲ. ಎಚ್‍ಐವಿ ಸೋಂಕಿತ ಯುವಜನತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಂದಿನ ಯುವ ಜನಾಂಗ ಮಾದಕ ವ್ಯಸನಿಗಳಾಗುವುದು ಒಂದು ಪ್ರಮಖ ಕಾರಣವಾಗಿದೆ. ಪ್ರತಿಯೊಬ್ಬರೂ ಸಮಾಜದ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗ ಬೇಕು. ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಸಮಾಜ ಗುರುತಿಸುತ್ತದೆ. ಕೆಟ್ಟ ಚಟವಟಿಕೆಗಳನ್ನು ಬೆಳೆಸಿಕೊಂಡರೆ ಸಮಾಜ ನೋಡುವ ದೃಷ್ಟಿಕೋನವೇ ಬೇರೆಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಶೈಲಜಾ ಶಾಮರಾವ್ ಮಾತನಾಡಿ, ಆಧುನಿಕತೆಯ ಹೆಸರಿನಲ್ಲಿ ಭೀಕರ ಕಾಲೆಗಳಿಗೆ ಆಹ್ವಾನ ನೀಡುತ್ತಿ ದ್ದೇವೆ. ಇದರ ಪರಿಣಾಮಗಳು ಯುವ ಜನತೆಯ ಮೇಲೆ ಉಂಟಾಗುತ್ತಿದೆ. ದೇಶದ ನಿರ್ಮಾಣದಲ್ಲಿ ತೊಡಬೇಕಾದ ಯುವ ಜನಾಂಗ ಇಂದು ಸಮಾಜಕ್ಕೆ ಮಾರಕವಾಗದೆ ಆದರ್ಶವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಣಮಂತ ಕಾಳೆ, ಸಂಜುಕುಮಾರ, ಪ್ರೀತಮ್ ಇದ್ದರು.ಎ???ವಿ/ ಏಡ್ಸ್ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಅಂಬಿಕಾ ಪ್ರಧಾನ ಸ್ಥಾನ, ಬಸವಕೀರಣ ದ್ವಿತೀಯ, ಸುಜಾತಾ ತೃತೀಯ ಸ್ಥಾನ ಪಡೆದಿದ್ದಾರೆ.