ಏಡ್ಸ್ ಜಾಗೃತಿ ದಿನಾಚರಣೆ

ಬೀದರ:ಡಿ.2: ಆರೋಗ್ಯ ಇಲಾಖೆ ವತಿಯಿಂದ ಡಿಎಚ್‍ಒ ಕಚೇರಿ ಆವರಣದ ಸಭಾಂಗಣದಲ್ಲಿ ಏಡ್ಸ್ ಜಾಗೃತಿ ದಿನ ಆಚರಿಸಲಾಯಿತು.
ಐಸಿಟಿಸಿ ಜಿಎಚ್ ಹುಮನಾಬಾದ್ ಕೇಂದ್ರದ ಆಪ್ತ ಸಮಾಲೋಚಕಿ ಗೀತಾರೆಡ್ಡಿ, ಬ್ರಿಮ್ಸ್ ಎಆರ್‍ಟಿ ಕೇಂದ್ರದ ಸವಿತಾ, ಐಸಿಟಿಸಿ ಕಮಲನಗರದ ವಿಕ್ರಂ, ಬೆಂಬಲ, ಆರೈಕೆ ಕೇಂದ್ರ ಬೆಳದಿಂಗಳು ನಟವರ್ಕ್‍ನ ಹೆಲ್ತ ಪ್ರಮೋಟರ್ .ಈರಮ್ಮ, ಪ್ರವರ್ಧ ಟಿಐ ಎ???ಜಿಒ ಯೋಜನಾ ವ್ಯವಸ್ಥಾಪಕ ಮಲ್ಲಿಕಾರ್ಜುನ.ಕೆ ಅವರನ್ನು ಸನ್ಮಾನಿಸಲಾಯಿತು.
ಅತ್ಯುತ್ತಮ ರೆಡ್ ರಿಬ್ಬನ್ ಕಾಲೇಜು:ಬೀದರ್‍ನ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕ ಶ್ರೀನಿವಾಸ ರೆಡ್ಡಿ, ಸಾಯಿ ಚೈತ್ಯನ್ಯ ಕಾಲೇಜಿನ ಉಪನ್ಯಾಸಕ ದತ್ತಾತ್ರೇಯ ಪಾಟೀಲ ಮತ್ತು ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ ಕಾಲೇಜ್, ಪಿಜಿ ಸೆಂಟರ್‍ನ ಉಪನ್ಯಾಸಕಿ ದೀಪಾ ಅವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆ ನೀಡಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ ಬಿ., ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಂಜುಕುಮಾರ ಪಾಟೀಲ, ಜಿಲ್ಲಾ ಕುಷ್ಠರೋಗ ಅಧಿಕಾರಿಗಳಾದ ಡಾ.ಮಹೇಶ ಬಿರಾದರ, ಬ್ರಿಮ್ಸ್ ಬೀದರನ ಪ್ರಾಧ್ಯಪಕ ಡಾ.ಮಹೇಶ ತೋಂಡಾರೆ, ಎಆರ್‍ಟಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಭೀಮರಾವ್ ಸಿಂಗೋಡೆ ಇದ್ದರು.ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶರಣಯ್ಯಾ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ನಿರೂಪಿಸಿದರು. ಐಸಿಟಿಸಿ ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ ವಂದಿಸಿದರು.
ಬೆಳಿಗ್ಗೆ ಆರೋಗ್ಯ ಇಲಾಖೆಯಿಂದ ಏಡ್ಸ್‍ಜಾಗೃತಿ ಜಾಥಾ ನಡೆಸಲಾಯಿತು. ನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.