ಏಗನೂರು ಟೆಂಪಲ್-ವೈಕುಂಠ ಏಕಾದಶಿ

ರಾಯಚೂರು.ಡಿ.೨೬-ನಗರದ ಹೊರ ವಲಯದಲ್ಲಿರುವ ಏಗನೂರು ಟೆಂಪಲ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ವೈಕುಂಠ ಏಕಾದಶಿ ಆಚರಿಸುತ್ತಿದ್ದಾರೆ. ದೇವಸ್ಥಾನ ಆವರಣದಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಜೊತೆಗೆ ಶಿವನ ದರ್ಶನ ನಂತರ ಆದಿಶೇಷನ ದರ್ಶನ ನಂರತ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀವೆಂಕಟೇಶ್ವರ ಭಕ್ತರಿಗೆ ದರ್ಶನ ನೀಡುವ ಪರಿ ಕಲ್ಪನೆಯನ್ನು ಏಗನೂರು ಟೆಂಪಲ್‌ನ ಪ್ರಹ್ಲಾದ್ ಗುರೂಜಿ ರವರು ಮಾಡಿರುತ್ತಾರೆ. ಇಡೀ ದೇವಸ್ಥಾನ ಗೋವಿಂದ ನಾಮ ಸ್ಮರಣೆಯ ಹಾಡು ಭಕ್ತರನ್ನು ದೈವದತ್ತ ಕರೆದೊಯ್ಯುತ್ತದೆ. ಬೆಳಿಗ್ಗೆಯಿಂದಲೂ ಸಾರ್ವಜನಿಕರು ಬಂದು ಶ್ರೀವೆಂಕಟೇಶ್ವರ ದರ್ಶನ ಪಡೆದುಕೊಂಡು ಹೋಗುತ್ತಿರುವದು ಸಾಮಾನ್ಯವಾಗಿತ್ತು. ಕೊರೊನಾ ಇದ್ದ ಕಾರಣ ಹೆಚ್ಚು ಆಡಂಬರ ಇಲ್ಲದೇ ಅತ್ಯಂತ ಸರಳವಾಗಿ ಆಚರಿಸಿದ್ದು ವಿಶೇಷವಾಗಿತ್ತು.