ಏಕ ಬಳಕೆ ಪ್ಲಾಸ್ಟಿಕ್ ಉತ್ಪದನೆ- ಸಂಗ್ರಹಣೆ ನಿಷೇಧ

ಜಗಳೂರು.ನ.೪; ಪಟ್ಟಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಬಗ್ಗೆ ಜುಲೈ.01.2022 ರಿಂದ ಜಾರಿಗೆ ಬರುವಂತೆ ಸರ್ಕಾರವು ಆದೇಶಿಸಿರುತ್ತದೆ.ಈ ಹಿನ್ನೆಲೆಯಲ್ಲಿ ಪಟ್ಟಣ ಎಲ್ಲಾ ವಾರ್ಡ್ಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮತ್ತು ಕಸ ವಿಲೇವಾರಿ ವಾಹನದಧ್ವನಿ ವರ್ಧಕದ ಮೂಲಕ ಪ್ರತಿನಿತ್ಯ ಜಾಗೃತಿ ಮೂಡಿಸಲಾಗುತ್ತಿದೆ.ಆದಾಗ್ಯೂ ಸಹ ಸಾರ್ವಜನಿಕರು ಬಟ್ಟೆ ಬ್ಯಾಗ್‌ಗಳನ್ನು ಬಳದೇ ಏಕ ಬಳಕೆಯ ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡು ಬoದಿರುತ್ತದೆ.ಪ ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ.ಮಾತನಾಡಿ ಪಟ್ಟಣದ ಕಿರಾಣಿ ಅಂಗಡಿಗಳಿಗೆ, ತರಕಾರಿ ಅಂಗಡಿಗಳಿಗೆ, ಹಣ್ಣಿನ ಅಂಗಡಿ, ಎಗ್‌ರೈಸ್ ಅಂಗಡಿ, ಫುಟ್ ವೇರ್ ಮತ್ತು ಬೇಕರಿಗಳಲ್ಲಿ  ಏಕ ಬಳಕೆ ಪ್ಲಾಸ್ಟಿಕ್‌ನ್ನು ಬಳಸುತ್ತಿರುವವರ ಅಂಗಡಿ ಮಾಲೀಕರಗಳಿಗೆ ರೂ.10500.00 ಗಳನ್ನು ದಂಡ ವಿಧಿಸಿ ಇನ್ನುಮುಂದೆ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್‌ನ್ನು ಬಳಸುವುದು ಮತ್ತು ಮಾರಾಟ ಮಾಡುವುದು ಕಂಡುಬAದಲ್ಲಿ ಪರಿಸರ (ಸಂರಕ್ಷಣೆ) ಕಾಯ್ದೆ, 1986 ರಡಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಮತ್ತು ಅಂತಹ ಅಂಗಡಿಗಳನ್ನು ಮುಚ್ಚುವ ಆದೇಶವನ್ನು ನೀಡಲಾಗುವುದು  ಎಂದು ಮುಖ್ಯಾಧಿಕಾರಿಗಳಾದ ಲೋಕ್ಯಾನಾಯ್ಕ.ಸಿ ಅಂಗಡಿ ಮಾಡಲೀಕರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದರು.ಪ.ಪಂ.ಆರೋಗ್ಯ ನಿರೀಕ್ಷಕರಾದ ಕಿಫಾಯತ್ ಆಹಮ್ಮದ್,ಮಾತನಾಡಿ ಸಾರ್ವಜನಿಕರು, ಬೀದಿಬದಿ ವ್ಯಾಪರಮಾಡುವವರು ನಿಷೇದಿತ ಪ್ಲಾಸ್ಟಿಕ್ ಉಪಯೋಗಿಸುವುತ್ತಿರುವುದು ಕಂಡುಬoದಲ್ಲಿ ಸ್ಥಳದಲ್ಲಿಯೇ ಮೊದಲಬಾರಿಗೆ ರೂ.200, ಎರಡನೇ ಬಾರಿಗೆ ರೂ.500, ಮೂರನೇ ಬಾರಿಗೆ ರೂ.1000 ಗಳನ್ನು ದಂಡವಿದಿಸಲಾಗುವುದು.ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಕಿಫಾಯತ್ ಆಹಮ್ಮದ್, ಕಛೇರಿಯ ಸಿಬ್ಬಂದಿಗಳಾದ ರಘವೀರ, ಜಿಲಾನಿ, ಪರಸಪ್ಪ ಹಾಜರಿದ್ದರು.