ಏಕೋರಾಮರಾದ್ಯ ರ ಜೀವನ ಸಾಧನೆಯ ಸಂಶೋಧನಾ ಕಾರ್ಯ ಅತಿಅವಶ್ಯ

oplus_2

ಕಲಬುರಗಿ:ಮೇ.13: ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಆರಾಧ್ಯ ದೇವರಾದ ದಾರ್ಶನಿಕ ಏಕೋರಾಮರಾದ್ಯ ರ ಜೀವನ ಸಾಧನೆಗಳು ಕುರಿತು ಕನ್ನಡ ನಾಡಿನ ಜನರಿಗೆ ಇನ್ನಷ್ಟು ತಿಳಿದು ಕೊಳ್ಳಲು ಸಂಶೋಧನಾ ಕಾರ್ಯಗಳು ನಡೆಯಬೇಕಾಗಿದೆ ಎ0ದು ಮಾದನಹಿಪ್ಪರಗಾ ಗ್ರಾಮದ ಪೂಜ್ಯ ಶ್ರೀ . ಷ. ಬ್ರ. ಶಾಂತಲಿಂಗ ಶಿವಾಚಾರ್ಯರರು ಹೇಳಿದರು.
ಏಕೋರಾಮರಾದ್ಯರ ಕುರಿತು ಅನೇಕ ವಿಚಾರಗಳು ಇನ್ನೂ ಬೆಳಕಿಗೆ ಬರಬೇಕಾಗಿದೆ. ಅಂಥಹ ಮಹಾತ್ಮರ ಸಂದೇಶ ಹಾಗೂ ಅವರ ಅಧ್ಯಾತ್ಮಿಕ ಸಾಧನೆಗಳು ನಾಡಿನ ಜನತೆಗೆ ಪರಿಚಯಿಸಬೇಕಾಗಿದೆ. ಏಕೋರಾಮರಾದ್ಯ ರು ತೋರಿದ ತತ್ವ, ಸಿದ್ಧಾಂತಗಳ ತಳಹದಿಯಲ್ಲಿ ಜೀವನ ನಡೆಸಬೇಕಾಗಿದೆ ಎಂದರು.
ಹಿರಿಯ ನ್ಯಾಯವಾದಿ ಸುಭಾಷ ಚಂದ್ರ ಕೋಣಿನ ಅವರು ಮಾತನಾಡಿ, ಮುಂದಿನ ಪೀಳಿಗೆಗೆ ಏಕೋರಾಮರಾದ್ಯ ರ ಕುರಿತು ಹೆಚ್ಚಿನ ವಿಷಯಗಳು ತಿಳಿದು ಕೊಳ್ಳಲು ಅಧ್ಯಯನ ಅಗತ್ಯವಾಗಿದೆ. ಅವರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳು ನಮ್ಮ ಬದುಕಿಗೆ ಆಧ್ಯಾತ್ಮಿಕ ಬೆಳಕು ಚೆಲ್ಲಲಿವೆ ಎಂದರು. ಅಧ್ಯಕ್ಷತೆ ಯನ್ನು ಶಿವಲಿಂಗಪ್ಪಾ ಅಷ್ಟಗಿ ವಹಿಸಿದ್ದರು, ವೇದಿಕೆ ಮೇಲೆ ಗೌರವ ಉಪಸ್ಥಿತಿಯನ್ನು ಕ.ಸಾ.ಪ ದ ಅಧ್ಯಕ್ಷ ವಿಜಯಕುಮಾರ್ ತೆಗಲ್ ತಿಪ್ಪಿ ಹಾಗೂ ನ್ಯಾಯವಾದಿ ಸಂಜೀವ ಕುಮಾರ ಡೊಂಗರ ಗೌವ ಇದ್ದರು. ಈ ಪ್ರತಿಷ್ಟಾನ ಕಳೆದ 4 ವರ್ಷಗಳಿಂದ ಏಕೋರಾಮರಾದ್ಯ ರ ಜಯಂತಿ ಆಚರಣೆ ಮಾಡುತ್ತಾ ಬರುತ್ತಿರುವ ಸಂಗತಿ ಕೇಳಿ ನಮಗೆ ಅತೀವ ಸಂತೋಷವಾಗಿ ಈ ಕಾರ್ಯಕ್ರಮ ಕ್ಕೆ ಬಂದು, ನನ್ನ ಜೀವನದಲ್ಲಿ ಮೊದಲ ಉಪನ್ಯಾಸ ಕಾರ್ಯಕ್ರಮ ನೀಡುತ್ತಿರುವುದು ಕೂಡಾ ಒಂದು ಸುಯೋಗವೇ ಸರಿ, ಕೇದಾರ ಪೀಠದಲ್ಲಿ ಇವರು 324 ಜಗದ್ಗುರು ಕ್ಕಿಂತ ಮೊದಲು ಇದ್ದರು, ಅವರ ಸರಾಸರಿ ಜೀವನ ಲೆಕ್ಕ ಹಾಕಿದರೆ ಇವರ ಕಾಲ ನಿಖರ ವಾಗಿ ಹೇಳಲು ಬರುವದಿಲ್ಲ, ಆದರೆ ಇವರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ ಎಂದು ಹೇಳ ಬಯಸುತ್ತೇನೆ. ಅಂದಾಜು ಹೇಳುವದಾದರೆ ವ್ಯಾಸ ಮಹರ್ಷಿಯ ಸಮಕಾಲೀನರು, ಗುರುಸಮಾನರು, ಇವರ ಶಿರೋನಾಮೆಯಿಂದಲೇ 11 ನೇ ಶತಮಾನದಲ್ಲಿ ಮುದನೂರಿನ ರಾಮಯ್ಯ ಮತ್ತು ಶಂಕರಿ ದಂಪತಿಗಳಿಗೆ ದಾಸಿಮಯ್ಯ ನವರ ಜನನ ವಾಗಿದೆ ಎಂದು ಅಂದಾಜಿಸಲಾಗಿದೆ ಇದೆ ಕಾರಣವೇ ಮುಂದೆ ವಚನ ಸಾಹಿತ್ಯದ ಕರ್ತೃ ದಾಸಿಮಯ್ಯ ತನ್ನ ವಾಚನಾಕಿತ ರಾಮನಾಥ ಎಂದು ಬರೆದಿದ್ದಾರೆ ಎಂದರು, ಕಾಕತಾಳೀಯವಾಗಿ ಏಕೋರಾಮರಾದ್ಯ ಮತ್ತು ಬಸವೇಶ್ವರ ಒಂದೇ ದಿವಸ ಹುಟ್ಟಿದ್ದಾರೆ ಎಂದು ಖಚಿತವಾಗಿ ಹೇಳಬೇಕಾಗುತ್ತದೆ. ಕಾರ್ಯಕ್ರಮದಲ್ಲಿ ಪ್ರತಿಷ್ಟಾನದ ಅಧ್ಯಕ್ಷರಾದ ಶರಣಪ್ಪ ಜೇನವೆರಿ, ಸದಸ್ಯರಾದ ಅಮೋಘ ಕುಳ್ಳಿ, ರೇವಣಸಿದ್ದಪ್ಪ ಗಡ್ಡದ, ಶಿವಪುತ್ರಪ್ಪ ಭಾವಿ, ರಾಜೇ ಶಿವಶರಣಪ್ಪ, ಶ್ರೀನಿವಾಸ ಬಲಪೂರ, ಕುಶಾಲ ಯಡವಳ್ಳಿ, ಮಲ್ಲಿನಾಥ ಕುಂಟೋಜಿ, ಮ್ಯಾಳಗಿ ಚಂದ್ರಶೇಖರ್, ಗುರುಸ್ವಾಮಿ ಎಸ್. ಧರ್ಮಣ್ಣ ಧನ್ನಿ, ಬಸವರಾಜ ರಾವೊರ, ಇತರರು ಉಪಸ್ಥಿತರಿದ್ದರು