ಏಕಾಗ್ರತೆಯಿಂದ ಮಾತ್ರ ವಿದ್ಯಾ ಕಲಿಯಲು ಸಾಧ್ಯ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.07 ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿದರೆ ಮುಂದೆ ಬರಲು ಸಾಧ್ಯ ಎಂದು ಜನ ಸೇವಾ ಟ್ರಸ್ಟಿನ ಅಧ್ಯಕ್ಷ ಬುಡ್ಡಿ ಬಸವರಾಜ್ ಅಭಿಪ್ರಾಯ ಪಟ್ಟರು.
ತಾಲೂಕಿನ ಹಂಪಾಪಟ್ಟಣ ಗ್ರಾಮದ ಬಯಲು ರಂಗ ಮಂದಿರದಲ್ಲಿ.. ಜನ ಸೇವಾ ಟ್ರಸ್ಟ್ ವತಿಯಿಂದ ಉಚಿತ ನೋಟ್ಸ್ ಬುಕ್ ವಿತರಣೆ ಮತ್ತು ಸ್ಪರ್ಧಾತ್ಮಕ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಮಯದಲ್ಲಿ ಓದಿನ ಕಡೆ ಹೆಚ್ಚಿನದಾಗಿ ಒತ್ತು ಕೊಡಬೇಕು, ಉತ್ತಮವಾಗಿ ವಿದ್ಯಾರ್ಥಿಗಳು ಓದುವ ಮೂಲಕ ಗ್ರಾಮಕ್ಕೆ ಹೆಸರು ಬೇಕು, ಹಾಗೆಯೇ ಸಮಾಜದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿ ಮರಳಿ ಸಮಾಜಕ್ಕೆ ವಿಶೇಷವಾದ ಕೊಡುಗೆಗಳನ್ನು ನೀಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು, ವಿದ್ಯಾರ್ಥಿಗಳ ಜೀವನ ಅತ್ಯಂತ ಅರ್ಥಪೂರ್ಣ ಜೀವನವಾಗಿದ್ದು ವಿದ್ಯಾರ್ಥಿ ಜೀವನದಲ್ಲಿ ಗುರಿಯ ಕಡೆಗೆ ಗಮನವಿರಬೇಕೆ ವಿನಹ ದುಶ್ಚಟಗಳು ಮತ್ತು ರಾಜಕೀಯದಿಂದ ದೂರವಿರಬೇಕು ಎಂದರು.  , ಹಾಗೆ ಚಾಣಕ್ಯ ಅಕಾಡೆಮಿಯಲ್ಲಿ ಕೋಚಿಂಗ್ ತರಬೇತಿ ಪಡೆಯುವ ಹಂಪಾಪಟ್ಟಣ ಗ್ರಾಮದ ವಿದ್ಯಾರ್ಥಿಗಳಿಗೆ ತಲಾ 5000 ಪ್ರೋತ್ಸಾಹ ಧನ ನೀಡಲಾಗುವುದೆಂದು ತಿಳಿಸಿದರು.. 
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು  ಪ್ರದೀಪ್ ಗುಡ್ಡದ್ ನಿರ್ದೇಶಕರು  ಚಾಣಕ್ಯ ಕರಿಯರ್ ಅಕಾಡೆಮಿ ಧಾರವಾಡ, ಇವರು ಮಾತನಾಡಿ ವಿದ್ಯಾರ್ಥಿಗಳು ಹಿರಿಯರ ತಂದೆ ತಾಯಿಗಳ ಅನುಭವಸ್ಥವರ ಮಾತು ಕೇಳಬೇಕು ವಿದ್ಯಾಭ್ಯಾಸದ ಸಮಯದಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ಹೊತ್ತು ನೀಡಬೇಕು, ಈ ಜಗತ್ತಿನಲ್ಲಿ ಹುಟ್ಟಿದ ಮೇಲೆ ಏನಾದರೂ ಸಾಧನೆಸಲೇಬೇಕು ತಂದೆ ತಾಯಿಗಳಿಂದ ನೀವು  ಗುರುತಿಸಿಕೊಳ್ಳಬಾರದು, ನಿಮ್ಮ ಸಾಧನೆಯಿಂದ ತಂದೆ ತಾಯಿಗಳು ಗುರುತಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು, ನಿಮ್ಮ ತಂದೆ ತಾಯಿಗಳ ಕಷ್ಟವನ್ನು ತಿಳಿದುಕೊಂಡು ಅರಿತುಕೊಂಡು ನಿಮ್ಮ ವಿದ್ಯಾಭ್ಯಾಸದಲ್ಲಿ ಸಂಪೂರ್ಣವಾಗಿ ತೊಡಗಬೇಕೆಂದು ವಿದ್ಯಾರ್ಥಿಗಳು ವಿನಂತಿಸಿ ಕೊಂಡರು, ಚಿಂತಿ ಮಾಡಿದರೆ ಫಲವಿಲ್ಲ ಚಿಂತನೆ ಮಾಡಬೇಕು ಅತ್ಯುತ್ತಮವಾದ ಚಿಂತನೆ ಮೂಲಕ ನಮ್ಮ ಬದುಕನ್ನು ನಮ್ಮ ಸಾಧನೆಯನ್ನು ನಾವು ಕಟ್ಟಿಕೊಳ್ಳಬೇಕು ಎಂದರು
 ಸಂಪನ್ಮೂಲ ವ್ಯಕ್ತಿಗಳಾಗಿ ವಿನೋದ್ ಬಿರದಾರ್   ಅಧ್ಯಕ್ಷರಾದ ಶ್ರೀನಿವಾಸ್,ಮುಖ್ಯ ಅತಿಥಿಗಳಾಗಿ ಭಾಗವಹಿಸದ ಹಂಪಾಪಟ್ಟಣ ಗ್ರಾಮ ಪಂಚಾಯತಿ ಸದಸ್ಯರಾದ  ನಾಗರಾಜ್ ಮಾತನಾಡಿದರು
ಕಾರ್ಯಕ್ರಮದಲ್ಲಿ  ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ , ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸುಮಾರು 175 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾ ಪಂ ಅಧ್ಯಕ್ಷ ಬಲ್ಲಹುಣಿಸಿ ನಾಗರಾಜ್ ವಹಿಸಿದ್ದರು
ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರು . ಸಿಎಲ್ ಕುಮಾರ ಎನ್ ನಾಗರಾಜ ಎಸ್ ಗಾಳೆಪ್ಪ ಟಿ ಮಂಜುನಾಥ.  ಶ್ರೀಮತಿ ಉಪ್ಪಾರ್ ಹುಲಿಗೆಮ್ಮ ಜನನಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎ ಕೇಶವಮೂರ್ತಿ ವಿ ಹನುಮಂತ ನವೋದಯ ಯುವಕ ಸಂಘ ಅಧ್ಯಕ್ಷರು . ಪೂಜಾರಿ ಸೋಮಣ್ಣ ಗ್ರಾಮದ  ವಿದ್ಯಾರ್ಥಿಗಳು ಇದ್ದರು .. ಕಾರ್ಯಕ್ರಮದ ನಿರೂಪಣೆಯನ್ನು ಹುಲುಗಪ್ಪ … ವಂದನಾರ್ಪಣೆ ಭಜಂತ್ರಿ ಸೋಮನಾಥ್ ನಿರ್ವಹಿಸಿದರು.

One attachment • Scanned by Gmail