
ಇಂಡಿ:ಸೆ.5:ರೈತರ ಪಂಪಸೆಟ್‍ಗಳಿಗೆ ಪ್ರತಿದಿನ ರಾತ್ರಿ ಹಗಲು ಸೇರಿ ಒಟ್ಟು 7 ಗಂಟೆ ವಿದ್ಯುತ್ ಪೆÇರೈಕೆಯಾಗಬೇಕು ಎಂಬ ನಿಯಮ ಇದೆ.ಆದರೆ ಹೆಸ್ಕಾಂ ಏಕಾ ಏಕಿ ವಿದ್ಯುತ್ ಪೆÇರೈಕೆ ನಿಲ್ಲಿಸಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.ಕೂಡಲೆ ರೈತರ ಕೃಷಿ ಪಂಪಸೆಟ್‍ಗಳಿಗೆ ಸರ್ಕಾರದ ಆದೇಶದಂತೆ 7 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಅಶೋಕ ಅಕಲಾದಿ ಹೆಸ್ಕಾಂ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 15 ದಿನಗಳಿಂದ ಮಳೆಯಾಗದೆ ಬಿತ್ತನೆ ಮಾಡಿದ ಬೆಳೆಗಳು ಬಾಡುವ ಹಂತ ತಲುಪಿವೆ.ಹೀಗಿರುವಾಗ ನೀರು ಹಾಯಿಸಲು ತಡರಾತ್ರಿ ಹೊಲಗಳಿಗೆ ತೆರಳಿದರೆ ವಿದ್ಯುತ್ ಪೆÇರೈಕೆ ನಿಲ್ಲಿಸಲಾಗಿದೆ.ಹೀಗಾದರೆ ರೈತರ ಏನು ಮಾಡಬೇಕು. ಹೆಸ್ಕಾಂ ಅ„ಕಾರಿಗಳು ರೈತರ ಜೊತೆ ಚಲ್ಲಾಟ ಆಡಬಾರದು.ರೈತರು ತಿರುಗಿ ಬಿಳುವ ಮುಂಚೆ ಎಚ್ಚೆತ್ತುಕೊಳ್ಳಬೇಕು.ಇಲ್ಲವಾದರೆ ರೈತರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಕೊಳವೆ ಬಾವಿಗಳನ್ನು ನಂಬಿ ರೈತರು ಕೃಷಿ ಮಾಡುತ್ತಿದ್ದಾರೆ.ನಿಯಮದಂತೆ ನಿತ್ಯ 7 ಗಂಟೆ ವಿದ್ಯುತ್ ಪೆÇರೈಸಬೇಕು.ಇಲ್ಲವಾದರೆ ರೈತರೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು,ವಿದ್ಯುತ್‍ನ್ನು ನಂಬಿ ರೈತರು ಕಬ್ಬು,ದಾಳಿಂಬೆ,ದ್ರಾಕ್ಷಿ,ರೇಷ್ಮೆ, ನಿಂಬೆ ,ಪೇರು ಮುಂತಾದ ಬೆಳೆಗಳನ್ನು ಮಾಡಿಕೊಂಡಿದ್ದಾರೆ ಆದರೆ ನಿಯಮಿತವಾಗಿ ಸಮರ್ಪಕ ವಿದ್ಯುತ್ ನೀಡದೆ ಇರುವುದರಿಂದ ಸಾಕಷ್ಟು ಖರ್ಚು ಮಾಡಿ ಬೆಳೆದ ಈ ಎಲ್ಲ ಬೆಳೆಗಳು ಒಣಗುವ ಹಂತ ತಲುಪಿವೆ ಎಂದು ಹೇಳಿದರು.ಇತ್ತ ಮುಂಗಾರು ಮಳೆ ನಂಬಿಕೊಂಡು ಬಿತ್ತನೆ ಮಾಡಿದ ರೈತರಿಗೆ ಮಳೆಯೂ ಇಲ್ಲ,ಬಾವಿ,ಬೊರವೆಲ್ ಮೂಲಕ ಬೆಳೆಗಳಿಗೆ ನೀರು ಹಾಯಿಸಬೇಕು ಎಂದರೆ ವಿದ್ಯುತ್‍ವೂ ಇಲ್ಲ.ಮಳೆ ಹಾಗೂ ಹೆಸ್ಕಾಂ ಇಲಾಖೆಯಿಂದ ರೈತರು ತೀವೃ ಸಂಕಷ್ಟ ಎದುರಿಸುತ್ತಿದ್ದು,ಕೂಡಲೆ ರೈತರಿಗೆ ಸಮರ್ಪಕವಾಗಿ ನಿಯಮಿತದಿಂದ ಪ್ರತಿ ನಿತ್ಯ 7 ಗಂಟೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.