ಏಕಾಏಕಿ ಬಸ್ ಟಯರ್ ಬ್ಲಾಸ್ಟ್ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಬೀದರ್ :ಸೆ.5: ಕೆ ಎಸ್ ಆರ್ ಟಿ ಸಿ ಬಸ್‍ವೊಂದರ ಟಯರ್ ಏಕಾಏಕಿ ಬ್ಲಾಸ್ಟ್ ಆಗಿ ಭಾರೀ ಅನಾಹುತ ತಪ್ಪಿದ ಘಟನೆ ದದ್ದಾಪುರ್ ಕ್ರಾಸ್ ಹಾಗೂ ಚಾಂಬೋಳ ಸಮೀಪ ನಡೆದಿದೆ .

ಬಸ್ ಬೀದರನಿಂದ ಜಂಬಗಿ ಕಡೆಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‍ನ ಮುಂಭಾಗದ ಟಯರ್ ಏಕಾಏಕಿ ಬ್ಲಾಸ್ಟ್ ಆಗಿ ರಸ್ತೆ ವಿಭಾಜಕವನ್ನು ಏರುವ ಸಾಧ್ಯತೆ ಹೆಚ್ಚಾಗಿದ್ದು , ಈ ಸಂದರ್ಭದಲ್ಲಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ