
ಬೀದರ್:ಎ.15: ಏಕಲ್ ವಿದ್ಯಾಲಯವು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಂಚಮುಖಿ ಶಿಕ್ಷಣ ನೀಡುತ್ತಿದೆ ಎಂದು ಏಕಲ್ ಅಭಿಯಾನದ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಅಳ್ಳೆ ತಿಳಿಸಿದರು.
ತಾಲ್ಲೂಕಿನ ಚಿಟ್ಟಾದ ನವೀನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಏಕಲ್ ವಿದ್ಯಾಲಯಕ್ಕೆ ಆಯ್ಕೆಯಾದ ಶಿಕ್ಷಕರ ಐದು ದಿನಗಳ ಪ್ರಾಥಮಿಕ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣದ ಜತೆಗೆ ಆರೋಗ್ಯ, ಗ್ರಾಮ ವಿಕಾಸ, ಸಾಮಾಜಿಕ ಸಾಮರಸ್ಯ, ಯೋಗ, ಗ್ರಾಮೀಣ ಕ್ರೀಡೆಗೆ ಉತ್ತೇಜನ, ವಿವಿಧ ಯೋಜನೆಗಳ ಅರಿವು ಹಾಗೂ ಸಂಸ್ಕಾರ ಕೊಡುವ ಕೆಲಸವನ್ನೂ ಮಾಡುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 135 ಏಕಲ್ ವಿದ್ಯಾಲಯಗಳು ಮಕ್ಕಳಲ್ಲಿ ಸಂಸ್ಕಾರ, ರಾಷ್ಟ್ರಪ್ರೇಮ, ಹಿಂದೂ ಸಂಸ್ಕøತಿ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಏಕಲ್ ಅಭಿಯಾನದ ಜಿಲ್ಲಾ ಘಟಕದ ಕಾರ್ಯದರ್ಶಿ ಸಚ್ಚಿದಾನಂದ ಚಿದ್ರೆ, ಸಂಭಾಗ ರಥ ಯೋಜನಾ ಪ್ರಮುಖ ಮನೋಹರ ಖಂಡೆ, ಬೀದರ್ ಆಂಚಲ್ ಅಭಿಯಾನ ಪ್ರಮುಖ ಚಂದ್ರಕಾಂತ ಸ್ವಾಮಿ, ಬೀದರ್ ಕಾರ್ಯಾಲಯ ಪ್ರಮುಖ ಚಿದಾನಂದ ಶಿಂಧೆ, ಉತ್ತರ ಭಾಗ ಪ್ರಶಿಕ್ಷಣ ಪ್ರಮುಖ ಶ್ರುತಿ ದಿದಿ, ಅರ್ಚನಾ, ಆಶಾರಾಣಿ, ವಿಜಯಲಕ್ಷ್ಮಿ, ರಮೇಶ, ಅನಿತಾ, ಆಶಾರಾಣಿ ಬಸವಕಲ್ಯಾಣ ಇದ್ದರು.