ಏಕಲವ್ಯ ಶಾಲೆ ಕೋವಿಡ್ ಕೇರ್ ಸೆಂಟರ್ ಮಾಡಲು ಶಾಸಕ ನಾಗೇಂದ್ರ ಸೂಚನೆ

ಬಳ್ಳಾರಿ:ಮೇ.21- ಕೋವಿಡ್ ಪಾಸಿಟಿವ್ ಆದವರಿಗೆ ಚಿಕಿತ್ಸೆ ನೀಡಲು ತಾಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸೂಚಿಸಿದ್ದಾರೆ.
ಅವರು ತಾಲೂಕಿನ ಕೊಳಗಲ್ ಗ್ರಾಮಕ್ಕೆ ಭೇಟಿ ನೀಡಿ. ಗ್ರಾಮದಲ್ಲಿ ಕೋವಿಡ್ ರೋಗಿಗಳು ಸಂಖ್ಯೆ ಹೆಚ್ಚುತ್ತಿರುವುದರಿಂದ ತಹಶೀಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಎಲ್ಲಾ ರೋಗಿಗಳು ಸಧ್ಯ ಹೋಂ ಐಸೊಲೇಷನ್ ನಲ್ಲಿ ಇರುವಂತೆ ಸೂಚಿಸಿದೆ. ಕೋವಿಡ್ ಕೇರ್ ಸೆಂಟರ್ ಆರಂಭಿಸಿದ ಮೇಲೆ ಅಲ್ಲಿಗೆ ವರ್ಗಾಯಿಸಲು ಹೇಳಿದರು.