ಏಕರೂಪ ಕಲೆ- ಸಂಸ್ಕೃತಿ ಹೊಂದಿರುವ ಲಂಬಣಿ ಜನಾಂಗ

ದಾವಣಗೆರೆ.ನ.೧೩: ಲಂಬಾಣಿ ಜನಾಂಗವುಇಡೀ ಭಾರತ ಮಾತ್ರವಲ್ಲ ವಿಶ್ವದಲ್ಲೇ ಏಕರೂಪ ಕಲೆ ಮತ್ತು ಸಂಸ್ಕೃತಿ ಹೊಂದಿರುವ ಜನಾಂಗ ಎಂದು ಹಿರಿಯ ನ್ಯಾಯವಾದಿ ಎನ್. ಜಯದೇವ ನಾಯ್ಕ ತಿಳಿಸಿದರು.ರೋಟರಿ ಬಾಲಭವನದಲ್ಲಿ ನಡೆದ ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ಡಿ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಲಂಬಾಣಿ ಜನಾಂಗದ ಇತಿಹಾಸ ಲಿಖಿತ ಅಲ್ಲ. ಒಬ್ಬರ ಬಾಯಿಂದ ಒಬ್ಬರಿಗೆ ಮೌಖಿಕವಾಗಿ ಹರಡಿದ ಜನಾಂಗ.  ಲಿಖಿತ ಇತಿಹಾಸ ಇರದೇ ಹೋದರು ಮೌಖಿಕವಾಗಿ ಹರಡಿದ ಜನಾಂಗದ ಇತಿಹಾಸ ತೇತ್ರಾಯುಗದಿಂದ ಪ್ರಾರಂಭ ಆಗಿದೆ. ಬಾಯಿ ಮಾತಿನ ಇತಿಹಾಸದ ಪ್ರಕಾರ ಲಂಬಾಣಿ ಜನಾಂಗದವರು ಸುಗ್ರೀವ ಮತ್ತು ವಾಲಿ ವಂಶಸ್ಥರು. ದ್ವಾಪರ ಯುಗದಲ್ಲೂ ಲಂಬಾಣಿ ಜನಾಂಗದ ಇರುವಿಕೆ ಕಂಡು ಬರುತ್ತದೆ. ಶ್ರೀ ಕೃಷ್ಣನ ಪರಮ ಭಕ್ತರಾಗಿದ್ದ ದಾದಾಮೌಲ ಲಂಬಾಣಿ ಜನಾಂಗದವರು. ಅಂತಹ ಭವ್ಯ ಇತಿಹಾಸ ಸದಾ ಶ್ರಮದ ಆಧರಿಸಿ ಜೀವನ ಸಾಗಿಸಿಕೊಂಡು ಬರುತ್ತಿರುವ ಸಮುದಾಯ ಅಗಿದೆ ಎಂದು ತಿಳಿಸಿದರು.ಲಂಬಾಣಿ ಜನಾಂಗದಲ್ಲಿ ಲೇಖಕರು, ಸಾಹಿತಿಗಳು ಹೆಚ್ಚಾಗಿ ಇರಲಿಲ್ಲ. ಬಿ.ಟಿ. ಲಲಿತಾನಾಯ್ಕ, ಪ್ರೊ. ಸಣ್ಣರಾಮ ಇತರರು ಮಾತ್ರ ಕಂಡು ಬರುತ್ತಿದ್ದರು. ಈಗ ಲಂಬಾಣಿ ಸಮುದಾಯದ ಇತಿಹಾಸವನ್ನು ಬರಹದ ಮೂಲಕ ಪ್ರಚುರಪಡಿಸುತ್ತಿ ರುವುದು ಕಂಡು ಬರುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು.ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ಡಿ ಅಧ್ಯಕ್ಷ ರಾಮು ಎನ್. ರಾಥೋಡ್ ಮಸ್ಕಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾಗರಾಜ್ ಮಹಾರಾಜ್, ಶಿವಪ್ರಕಾಶ್ ಮಹಾರಾಜ್ ಸಾನಿಧ್ಯ ವಹಿಸಿದ್ದರು. ನಂಜಾನಾಯ್ಕ, ಹನುಮಂತ ನಾಯ್ಕ ಇತರರು ಇದ್ದರು.