ಏಕದಿನ ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಿದ ಅಯ್ಯರ್

ಪೋರ್ಟ್‌ಆಫ್‌ಸ್ಪೇನ್,ಜು.೨೩- ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ೧ ಸಾವಿರ ರನ್ ಪೂರೈಸಿದ್ದಾರೆ.
ನಿನ್ನೆಯಿಂದ ವೆಸ್ಟ್‌ಇಂಡೀಸ್ ವಿರುದ್ಧ ಆರಂಭವಾಗಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಂದ್ಯದ ೩೬ನೇ ಓವರ್‌ನಲ್ಲಿ ಅಯ್ಯರ್ ಈ ಸಾಧನೆ ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ೫೪ ಎಸೆತಗಳಲ್ಲಿ ೫೭ ರನ್ ಬಾರಿಸಿದ್ದರು. ೨೫ ಏಕದಿನ ಇನ್ನಿಂಗ್ಸ್‌ನಲ್ಲಿ ಸಾವಿರ ರನ್ ಗಳಿಸಿದ್ದಾರೆ.
ಈ ಮೊದಲು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ನವಜೋತ್‌ಸಿಂಗ್ ಸಿಧು, ಸಾವಿರ ರನ್ ಪೂರೈಸಲು ೨೫ ಇನ್ನಿಂಗ್ಸ್‌ಗಳನ್ನು ಆಡಿದ್ದರು.
೨೪ ಇನ್ನಿಂಗ್ಸ್‌ಗಳಲ್ಲಿ ವಿರಾಟ್‌ಕೊಹ್ಲಿ ಹಾಗೂ ಶಿಖರ್‌ಧವನ್ ಅತ್ಯಂತ ವೇಗವಾಗಿ ಸಾವಿರ ರನ್ ಪೂರೈಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈಗ ಶ್ರೇಯಸ್ ಅಯ್ಯರ್ ಅವರು ೨೮ ಪಂದ್ಯಗಳಲ್ಲಿ ೨೫ ಇನ್ನಿಂಗ್ಸ್‌ನಲ್ಲಿ ೧೦೦೧ ರನ್ ಗಳಿಸಿ ೪೧.೭೦ ಸರಾಸರಿ ಕಾಯ್ದುಕೊಂಡಿದ್ದಾರೆ.
೫೦ ಓವರ್‌ಗಳ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರು ೧ ಶತಕ ಹಾಗೂ ೧೦ ಅರ್ಧ ಶತಕಗಳನ್ನು ಬಾರಿಸಿದ್ದಾರೆ.