ಏಕತಾ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಚಾಲನೆ

 ಚಿತ್ರದುರ್ಗ.ಸೆ.೫: ಹಿಂದೂಪರ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲೆಯ ಎಲ್ಲಾ ಹಿಂದೂಪರ ಸಂಘಟನೆ ನೇತೃತ್ವದಲ್ಲಿ  ಏಕತಾ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಕೋಟೆನಾಡು ಚಿತ್ರದುರ್ಗದಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರಿಂದ ಬೃಹತ್ ಭಗವಾಧ್ವಜ ಪ್ರತಿಷ್ಠಾಪಿಸುವ ಮೂಲಕ ವಿಧ್ಯುಕ್ತಚಾಲನೆ ನೀಡಲಾಯಿತು. ಜಗದ್ಗುರು ಛಲವಾದಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಬಸವನಾಗಿದೇವ ಮಹಾಸ್ವಾಮೀಜಿ, ಲಂಬಾಣಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹಾಗೂ ಗುಜರಾತ್‌ನ ಅವಧೂತ ರಾಜಾನಾಥ್ ನಾಗಾಸಾಧ್ ಗುರೂಜಿ, ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಿ.ಸುರೇಶ್ ಬಾಬು, ಅವರು ಭಗವಾಧ್ವಜ ಪೂಜೆ ಸಲ್ಲಿಸುವ ಮೂಲಕ ಪೆಂಡಾಲ್ ಹಾಕುವ ಕಾರ್ಯವನ್ನು ಉದ್ಘಾಟಿಸಿದರು. ಚಿತ್ರದುರ್ಗದ  ಜೋಗಿಮಟ್ಟಿ ಗಿರಿಧಾಮಕ್ಕೆ ತೆರಳುವ  ಬೃಹತ್ ಮೈದಾನದಲ್ಲಿ ಏಕತಾ ಹಿಂದೂ ಮಹಾಗಣಪತಿಯ ಸಂಭ್ರಮ ಮನೆಮಾಡಿದ್ದು ಏಕತಾ ಹಿಂದೂ ಮಹಾಗಣಪತಿಯ ಎಲ್ಲಾ ಕಾರ್ಯಗಳನ್ನು ಸಕಲ ಸಂಪ್ರದಾಯಗಳೊಂದಿಗೆ ನೆರವೇರಿಸಲಾಗುವುದು ಎಂದು ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ಕುಮಾರ್, ಮತ್ತು ಖಜಾಂಚಿ ಸಂತೋಷ್ ತಿಳಿಸಿದರು. ಜಗದ್ಗುರು ಛಲವಾದಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಬಸವನಾಗಿದೇವ ಮಹಾಸ್ವಾಮೀಜಿ ಮಾತನಾಡಿ, ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಹಿಂದೂಪರ ಸಂಘಟನೆಗಳ ಒಕ್ಕೂಟದ ಮೂಲಕ ಎಲ್ಲ ಸಂಘಟನೆಗಳು ಸೇರಿ ಏಕತಾ ಹಿಂದೂ ಗಣಪತಿಯನ್ನು ಸಾರ್ವಜನಿಕವಾಗಿ ಸ್ಥಾಪನೆ ಮಾಡಿ ಹಿಂದೂಗಳನ್ನು ಒಗ್ಗೂಡಿಸುವ ಮತ್ತು ಜಾಗೃತಿಯನ್ನುಂಟು ಮಾಡಲು ನಿಂತಿರುವುದು ಶ್ಲಾಘನೀಯ ಎಂದರು. ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ನೇತೃತ್ವವಹಿಸಿರುವ ಸಮಿತಿಯ ಗೌರವಾಧ್ಯಕ್ಷರಾದ ಡಿ.ಸುರೇಶ್ ಬಾಬು ಮಾತನಾಡಿ, ಅಂತಾರಾಷ್ಟಿçÃಯ ರಾಜ್ಯದ ಎಲ್ಲಾ ಹಿಂದೂ ಸಂಘಟನೆ ಮುಖಂಡರನ್ನೆಲ್ಲಾ ಏಕತೆಗಾಗಿ ಒಂದು ಮಾಡುವ ಈ ಕಾರ್ಯ ಯಶಸ್ವಿಯಾಗಲು ಏಕತಾ ಹಿಂದೂ ಮಹಾಗಣಪತಿ ಸಾಕ್ಷಿಯಾಗಲಿದೆ. ಸಂವಿಧಾನದ ಆಶಯಗಳನ್ನು ನಾವು ತೋರಿಸುವ ಕೆಲಸವಾಗಬೇಕು. ಎಲ್ಲರನ್ನು ಒಂದೆಡೆ ಸೇರಿಸಿ ಏಕತೆಗಾಗಿ ಮಾಡುವ ಕಾರ್ಯಕ್ಕೆ ಎಲ್ಲರೂ ಸಾಗರದಂತೆ ಬರಲಿದ್ದಾರೆ ಎಂದರು.ಲಂಬಾಣಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಖಜಾಂಚಿ ಸಂತೋಷ್ ಕುಮಾರ್, ಮಾಲತೇಶ್ ಅರಸ್ ಮಾತನಾಡಿದರು. ಈ ಸಂದರ್ಭದಲ್ಲಿ ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಉಪಾಧ್ಯಕ್ಷರಾದ ಆರ್.ಸಂತೋಷ್, ಕಾರ್ಯದರ್ಶಿಗಳಾದ ಮಂಜುನಾಥ್, ನೇಮಿಚಂದ್ರ, ಗರಡಿತಿಪ್ಪೇಶ್ ಮತ್ತು ಸಮಿತಿಯ ಕಾರ್ಯಕರ್ತರು, ಅನೇಕ ಮುಖಂಡರು ಹಾಜರಿದ್ದರು.