ಏಕಜ್ಞಾನ ಶಿಸ್ತಿನಿಂದ ಬಹುಜ್ಞಾನ ಶಿಸ್ತಿನ ಕಡೆಗೆ : ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2020

ಕಲಬುರಗಿ:ಸೆ.12: ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸ್ನಾತಕ ಪಠ್ಯಪುಸ್ತಕ ಸಿದ್ಧತೆಯ ಕುರಿತು ದುಂಡುಮೇಜಿನ ಸಭೆ (ಪಠ್ಯಪುಸ್ತಕ ಸಿದ್ಧತೆಯ ಪೂರ್ವಭಾವಿ ಕಾರ್ಯಗಾರ) ಜರುಗಿತು. ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪೆÇ್ರ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಾತನಾಡುತ್ತ ಪಠ್ಯಪುಸ್ತಕಗಳು ವ್ಯಕ್ತಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಜ್ಞಾನದ ವಿಸ್ತಾರಕ್ಕೆ ಪೂರವಕವಾಗಿವೆ. ಅದಕ್ಕಾಗಿ ಪಠ್ಯಪುಸ್ತಕ ರಚಿಸುವಾಗ ವೈಜ್ಞಾನಿಕ ಕ್ರಮವನ್ನು ಅನುಸರಿಸಬೇಕು. ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸತನವನ್ನು ಉಂಟುಮಾಡಬೇಕು. ಬೋಧನೆ ಮಾಡುವುವರಿಗೆ ಹೆಚ್ಚಿನ ಆಕರಗಳ ಮಾಹಿತಿ ಲಭ್ಯವಿರಬೇಕು. ಸಂಶೋಧನೆ ಹೆಚ್ಚಿನ ಒತ್ತನ್ನು ನೀಡಬೇಕು. ಪಾಠ್ಯ-ಬೋಧನೆಯಿಂದ ಶೋಧನ ಸಂಶೋಧನ ಕ್ರಮ ಉಂಟಾಗಬೇಕು. ಇತಿಹಾಸ ಮತ್ತು ಸಾಮಾಜಿಕ ದೃಷ್ಟಿಕೋನ ಹೊಂದಿರಬೇಕು. ವಿದ್ಯಾರ್ಥಿಗಳ ಮನೋವೈಜ್ಞಾನಿಕ ಹಿತದೃಷ್ಟಿಯನ್ನು ಪೆÇೀಷಿಸಬೇಕು. ಸಮೂಹ ಮಾಧ್ಯಮಗಳ ಬಳಕೆಯಿಂದ ವಸ್ತು-ನಿಷ್ಟತೆ ಉಂಟಾಗಬೇಕು. ಶಿಕ್ಷಕರು ಸೂಕ್ಷ್ಮಮ ದೃಷ್ಟಿಯಿಂದ ತಂತ್ರಾಂಶಗಳ ಬಳಕೆ ಮಾಡಬೇಕು. ಪಠ್ಯಕ್ರಮ ರಚನೆಯಲ್ಲಿ ಹೆಚ್ಚಿನ ಉಪಕ್ರಮಗಳನ್ನು ಅನುಸರಿಸಬೇಕು. ಸಂಪಾದಿತ ಕೃತಿಗಳನ್ನು ರಚಿಸುವಾಗ ಮೂಲಭೂತ ಪಠ್ಯಗಳನ್ನು ಗಮನಿಸಬೇಕು ಎಂದು ಹೇಳಿದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪೆÇ್ರ. ಎಚ್.ಟಿ. ಪೆÇೀತೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪಠ್ಯಪುಸ್ತಕ ರಚನಾ ಸಂಪಾದಕರು ಎಲ್ಲ ದೃಷ್ಟಿಕೋನಗಳಿಂದ ಪಠ್ಯವನ್ನು ಗಮನಿಸಿ ಸೂಕ್ತವಾದ ಪಠ್ಯಗಳನ್ನು ತಯಾರಿಸಬೇಕು. ಯಾವುದೇ ಒಂದು ಪಠ್ಯಪುಸ್ತಕ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರಬೇಕು. ರಾಷ್ಟ್ರೀಯ ಹೆÇಸ ಶಿಕ್ಷಣ ನೀತಿ-2020 ರ ಪ್ರಕಾರ ಏಕಜ್ಞಾನ ಶಿಸ್ತಿನಿಂದ ಬಹÅಜ್ಞಾನ ಶಿಸ್ತಿನ ಕಡೆಗೆ ಸಾಗಬೇಕು ಎಂದರು.

ಡಾ. ವಿಜಯಕುಮಾರಿ ಕರಿಕಲ, ಡಾ. ಶ್ರೀಶೈಲ ನಾಗರಾಳ, ಡಾ. ಶಾರದಾದೇವಿ ಎಸ್. ಜಾಧವ, ಡಾ. ಅಮೃತಾ ಕಟಕೆ, ಡಾ. ರಾಜಕುಮಾರ ಅಲ್ಲೂರೆ, ಡಾ. ಶಾಮಲಾ ಎಸ್. ಸ್ವಾಮಿ, ಶ್ರೀ ರಮೇಶ ಬಕ್ಕಪ್ಪ ಬುಳ್ಳಾ ಅವರು ಭಾಗವಹಿಸಿ ಹಲವಾರು ವಿಷಯಗಳನ್ನು ಕುರಿತು ಚರ್ಚಿಸಿದರು.