
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,5- ದೇಶದಲ್ಲಿ ಶಾಂತಿ, ಉತ್ತಮ ಪ್ರಪಂಚಕ್ಕಾಗಿ ಶಾಂತಿ, ಅಹಿಂಸೆ, ಪ್ರೀತಿ ಮತ್ತು ಏಕತೆಯ ಬಗ್ಗೆ ಜಾಗೃತಿ ಮೂಡಿಸಲು ಬರುವ ಏಪ್ರಿಲ್ 2 ರಂದು ಭಾರತದಾದ್ಯಂತ 65 ನಗರಗಳಲ್ಲಿ ಒಂದೇ ಸಮಯದಲ್ಲಿ “ಅಹಿಂಸಾ ಓಟವನ್ನು” ಜೈನ್ ಇಂಟರ್ನ್ಯಾಶನಲ್ ಟ್ರೇಡ್ ಆರ್ಗನೈಸೇಶನ್ ಆಯೋಚಿಸಿದೆ.
ಇದರಲ್ಲಿ ಎಲ್ಲಾ ವಯಸ್ಸಿನ, ಸಮುದಾಯಗಳ, ಪುರುಷರು, ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಳ್ಳಲು ಮುಕ್ತವಾಗಿದೆ. ಇದನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸುವ ಪ್ರಯತ್ನ ಇದೆ.
ಒಟ್ಟಾರೆ 1 ಲಕ್ಷಕ್ಕೂ ಹೆಚ್ಚು ಜನರು ದೈಹಿಕವಾಗಿ ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಅಹಿಂಸಾ ಓಟವು ಬಳ್ಳಾರಿಯಲ್ಲಿ ಸಂಗನಕಲ್ಲು ರಸ್ತೆಯಲ್ಲಿರುವ ವಿಸ್ಡಂಮ್ ಲ್ಯಾಂಡ್ ಶಾಲೆಯಿಂದ ಮೋಕಾ ಕಡೆಗೆ 5 ಕಿಮೀ ವರೆಗೆ ಬೆಳಿಗ್ಗೆ 5 ರಿಂದ 9 ರವರೆಗೆ ನಡೆಯಲಿದೆ.
ಇದರಲ್ಲಿ ಪ್ರತಿ ಫಿನಿಷರ್‌ಗೆ ಪದಕ ಮತ್ತು ಪ್ರಮಾಣಪತ್ರವನ್ನು ನೀಡಲಾಗುತ್ತದೆ ಅಲ್ಲದೆ ವಿವಿಧ ವಯೋಮಾನದವರಿಗೆ ವಿವಿಧ ನಗದು ಬಹುಮಾನಗಳನ್ನು ಸಹ ನೀಡಲಿದೆ. 3, 5 ಮತ್ತು 10 ಕಿಮೀ ರನ್ ವಿಭಾಗಗಳಿಗಾಗಿ ವಿವಿಧ ವಯಸ್ಸಿನ ಮತ್ತು ಮಹಿಳೆಯರು, ಪುರುಷರ ವಿಭಾಗದಲ್ಲಿ ನಡೆಯಲಿದೆ.1000 ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ.
ಇದಕ್ಕಾಗಿ ನಿನ್ನೆ ನಗರದ ತೇರು ಬಜಾರ್ ನ ಜೈನ ದೇವಸ್ಥಾನ ದಲ್ಲಿ ನೋಂದಣಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ. ಈ ಕುರಿತಾದ ಪೋಸ್ಟ್ ರ್ ಬಿಡುಗಡೆ ಮಾಡಲಾಯ್ತು.
ಜೈನ ಸಂಘದ ಅಧ್ಯಕ್ಷ ಉತ್ಸವಲಾಲ್ ಬಗ್ರೇಚಾ, ಡಾ. ಬಿ.ಕೆ.ಸುಂದರ್, ಕೇವಲ್ ಚಂದ್ ಮೊದಲಾದವರು ಪಾಲ್ಗೊಂಡಿದ್ದರು.
ಅಹಿಂಸಾ ರನ್‌ಗಾಗಿ ನೋಂದಣಿ ಮಾಡಲು ಈ ಲಿಂಕ್ https://ahimsarun.com ಬಳಸಬಹುದು ಎಂದು
ಜಿತೋದ ಬಳ್ಳಾರಿ ಚಾಪ್ಟರ್ ಅಧ್ಯಕ್ಷ ರಾಜೇಶ್ ಬಗ್ರೇಚಾ ತಿಳಿಸಿದ್ದಾರೆ.