ಎ.8 ಕ್ಕೆ ವೀ.ವಿ.ಸಂಘದ ಅಧ್ಯಕ್ಷರ ಆಯ್ಕೆ ಸಭೆ ನಿಗಧಿ

ಬಳ್ಳಾರಿ,ಮಾ.30: ಜಿಲ್ಲೆಯ ಪ್ರತಿಷ್ಠಿತ ಶೀಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಭೆಯನ್ನು ಎ.8 ಕ್ಕೆ ನಿಗಧಿಯಾಗಿದೆ.
ಸಂಘದ ಕಚೇರಿಯಲ್ಲಿ ಹಾಲಿ ಅಧ್ಯಕ್ಷರಾಗಿರುವ ಉಡೇದ ಬಸವರಾಜ್ ಅವರು ಅಂದು ಸಂಘಕ್ಕೆ 2021-24 ನೇ ಸಾಲಿಗೆ ನೂತನವಾಗಿ ಆಯ್ಕೆಯಾಗಿರುವ 30 ಜನ ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆ ನಡೆಸಿ. ಬಹುತಮದ ಆಧಾರದ ಮೇಲೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿ ಘೋಷಣೆ ಮಾಡಲಿದ್ದಾರೆ. ನಂತರ ನೂತನ ಅಧ್ಯಕ್ಷರು ಸಭೆ ನಡೆಸಿ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ, ಸಹಕಾರ್ಯದರ್ಶಿ, ಖಜಾಂಚಿ ಅವರನ್ನು ಆಯ್ಕೆ ಮಾಡಲಿದ್ದಾರೆ.
ಸಧ್ಯ ಈ ಭಾರಿಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸಂಘದ ನೂತನ ಕಾರ್ಯಕಾರಿ ಸಮಿತಿಯಲ್ಲಿ ಯಾವೊಂದು ಗುಂಪಿಗೆ ಸ್ಪಷ್ಟ ಬಹುಮತ ಪಡೆದಿಲ್ಲ. ಹಿರಿಯರ ಮತ್ತು ಯುವಕ ವೃಂದಕ್ಕೆ ತಲಾ 14 ಸ್ಥಾನ ಮತ್ತು ಸಮನ್ವಯ ತಂಡಕ್ಕೆ ಒಂದು ಹಾಗು ಸ್ವತಂತ್ರರಾಗಿ ಮಹೇಶ್ವರಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷಸ್ಥಾನದ ಆಯ್ಕೆ ಸಭೆಯ ದಿನಾಂಕ ನಿಗಧಿಯಾಗಿರುವುದರಿಂದ ಈಗ ಅಧ್ಯಕ್ಷರಾಗಬಯುಸುವವರು ಬಹುಮತಕ್ಕೆ ಅಗತ್ಯವಾದ 16 ಮತ ಪಡೆಯಲು ಇನ್ನಿತರ ಸದಸ್ಯರ ಬೆಂಬಲ ಪಡೆಯುವ ಪ್ರಯತ್ನ ಇಂದಿನಿಂದ ಒಂದಿಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ಆದರೂ ಕೊಡು ಕೊಳ್ಳುವಿಕೆ ಅಂದರೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಅಧ್ಯಕ್ಷಸ್ಥಾನ, ಸಂಘದ ಇತರೇ ಪದಾಧಿಕಾರಿ ಸ್ಥಾನದ ಹಂಚಿಕೆ ವಿಷಯವಾಗಿ ಇದು ಎ 7 ವರೆಗೂ ಮುಂದುವರೆಯುವ ಪರಿಸ್ಥಿತಿ ಕಂಡು ಬರುತ್ತಿದೆ.
ಸಮನ್ವಯ ತಂಡದ ಮತ್ತು ಸ್ವತಂತ್ರ ಸದಸ್ಯರು ಯಾರಿಗೆ ಮತನೀಡುತ್ತಾರೆ ಎಂಬ ಕುತೂಹಲ ಸಂಘದ ಸದಸ್ಯರು ಮತ್ತು ಅಭಿಮಾನಿಗಳಲ್ಲಿದೆ.